Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಜೀವ ಬೆದರಿಕೆ ಹಿನ್ನೆಲೆಯಲ್ಲಿ ಶ್ರೀ ಪ್ರಣವಾನಂದರಾಮ್ ಮಹಾಸ್ವಾಮಿಗಳಿಗೆ ಭದ್ರತೆ ನೀಡಿ: ಸ್ವಾಮೀಜಿಗಳಿಂದ ಸಿಎಂಗೆ ಮನವಿ

Dharmasthala Case: ನಾನು ಚಿನ್ನಯ್ಯ ಜೊತೆ ಮಾತನಾಡಿದ್ದು ನಿಜ, ಆದರೆ ಆತ ಎಲ್ಲರಿಗೂ ಚಳ್ಳೆಹಣ್ಣು ತಿನ್ನಿಸಿದ್ದಾನೆ: ನಟ ಪ್ರಕಾಶ್ ರಾಜ್

ಜುಲೈ 3ಕ್ಕೆ ‘ಲವ್ ಸೀಸನ್ಸ್’ ರಿಲೀಸ್: ಬಿಡುಗಡೆಗೂ ಮುನ್ನವೇ ಹಾಡುಗಳು ಪುಲ್ ವೈರಲ್!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಕಸ ವಿಲೇವಾರಿ, ರಸ್ತೆಗುಂಡಿ ಸಮಸ್ಯೆ ವಿರುದ್ಧ ಒಂದು ವಾರ ಅಭಿಯಾನ: ಪ್ರತಿಪಕ್ಷ ನಾಯಕ ಆರ್‌.ಅಶೋಕ್
KARNATAKA

ಕಸ ವಿಲೇವಾರಿ, ರಸ್ತೆಗುಂಡಿ ಸಮಸ್ಯೆ ವಿರುದ್ಧ ಒಂದು ವಾರ ಅಭಿಯಾನ: ಪ್ರತಿಪಕ್ಷ ನಾಯಕ ಆರ್‌.ಅಶೋಕ್

By ವಸಂತ ಬಿ ಈಶ್ವರಗೆರೆ

ಬೆಂಗಳೂರು: ಬೆಂಗಳೂರಿನ ಕಸ ವಿಲೇವಾರಿ ಸಮಸ್ಯೆ ಹಾಗೂ ರಸ್ತೆಗುಂಡಿ ಸಮಸ್ಯೆ ವಿರುದ್ಧ ಒಂದು ವಾರ ಬಿಜೆಪಿ ಜನಪ್ರತಿನಿಧಿಗಳ ವತಿಯಿಂದ ಸರ್ಕಾರದ ವಿರುದ್ಧ ಅಭಿಯಾನ ನಡೆಸಲಾಗುವುದು ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ಹೇಳಿದರು.

ಶಾಸಕರು, ಸಂಸದರೊಂದಿಗಿನ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನ ಸಮಸ್ಯೆಗಳ ಕುರಿತು ಚರ್ಚಿಸಲು ಎಲ್ಲ ಜನಪ್ರತಿನಿಧಿಗಳ ಸಭೆ ಮಾಡಿದ್ದೇವೆ. ಕಾಂಗ್ರೆಸ್‌ ಸರ್ಕಾರದ ದುರಾಡಳಿತದಿಂದಾಗಿ ಬೆಂಗಳೂರು ಗಾರ್ಬೇಜ್‌ ಸಿಟಿಯಾಗಿ ಬದಲಾಗಿದೆ. ಎಲ್ಲ ರಸ್ತೆಗಳಲ್ಲಿ ಗುಂಡಿಗಳು ಹಾಗೂ ಕಸದ ರಾಶಿ ಕಂಡುಬರುತ್ತಿದೆ. ನಗರಕ್ಕೆ ದ್ರೋಹ ಬಗೆದ ಸರ್ಕಾರದ ವಿರುದ್ಧ ಹೋರಾಟ ಮಾಡಬೇಕು ಹಾಗೂ ಒಂದು ವಾರ ಕಾಲ ಪರಿಶೀಲನೆ ನಡೆಸಲು ನಿರ್ಧರಿಸಲಾಗಿದೆ. ಇದರ ಜೊತೆಗೆ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ನವೆಂಬರ್‌ 6 ರಿಂದ 15 ರವರೆಗೆ ಸಹಿ ಸಂಗ್ರಹ ಅಭಿಯಾನ ಮಾಡಲಾಗುವುದು ಎಂದು ತಿಳಿಸಿದರು.

ಎ ಖಾತಾ, ಬಿ ಖಾತಾ ವಿಚಾರವಾಗಿ ಜನರ ಅಭಿಪ್ರಾಯ ಸಂಗ್ರಹಿಸಲಾಗುವುದು. ಇದರಲ್ಲಿ ಸರ್ಕಾರ ದುಡ್ಡು ಹೊಡೆಯುವ ಸ್ಕೀಮು ಮಾಡಿದೆ. ಬೆಂಗಳೂರಿನ ಅಭಿವೃದ್ಧಿಗೆ ಸರ್ಕಾರದ ಬಳಿ ಹಣವಿಲ್ಲ. ಆ ಹಣವನ್ನು ಹೊಂದಿಸಲು ಈ ಕ್ರಮ ತರಬೇಕಿಲ್ಲ. ಇಷ್ಟೊಂದು ಹಣವನ್ನು ಜನರು ಪಾವತಿಸಲು ಸಾಧ್ಯವಿಲ್ಲ. ನೋಂದಣಿ ಮೇಲೆ 5% ಹೆಚ್ಚಿಸಿ ಕಮಿಶನ್‌ ಹೊಡೆಯಲು ಪ್ರಯತ್ನ ಮಾಡಲಾಗಿದೆ. ಕಸದ ಸೆಸ್‌ ತಂದು ಜನರ ಮೇಲೆ ಹೊರೆ ಹಾಕಲಾಗಿದೆ. ಬೆಸ್ಕಾಂನಲ್ಲಿ ಒಸಿ, ಸಿಸಿ ಮೂಲಕ ಹಣ ಸಂಗ್ರಹಿಸಲಾಗುತ್ತಿದೆ. ತಾತ್ಕಾಲಿಕವಾಗಿ ವಿದ್ಯುತ್‌ ಪಡೆದರೆ ಮೂರು ಪಟ್ಟು ಶುಲ್ಕ ನೀಡಬೇಕಿದ್ದು, ಇದನ್ನೇ ಬೆಸ್ಕಾಂನಿಂದ ಪ್ರೋತ್ಸಾಹಿಸಲಾಗುತ್ತಿದೆ. ಜನರಿಗೆ ಇಂತಹ ದುಬಾರಿ ಬ್ರ್ಯಾಂಡ್‌ ಬೆಂಗಳೂರು ಬೇಕಿಲ್ಲ. ಸಾಮಾನ್ಯ ಜನರ ಬಗ್ಗೆ ಚಿಂತಿಸುವ ಬೆಂಗಳೂರು ಬೇಕಿದೆ ಎಂದರು.

ಸುರಂಗ ರಸ್ತೆ ನಿರ್ಮಿಸಲು ಸಾವಿರಾರು ಕೋಟಿ ರೂ. ಖರ್ಚು ಮಾಡುವುದು ಬೇಡ. ಲಾಲ್‌ಬಾಗ್‌ನಂತಹ ಉದ್ಯಾನಗಳನ್ನು ನಾಶ ಮಾಡಿ ರಸ್ತೆ ಮಾಡುವುದು ಬೇಕಿಲ್ಲ. ಈ ಹಿಂದೆ ಉಕ್ಕಿನ ಸೇತುವೆ ನಿರ್ಮಿಸಲು ಮುಂದಾದಾಗ ಕಾಂಕ್ರೀಟ್‌ ರಸ್ತೆ ಮಾಡಿ ಎಂದು ಆಗ್ರಹಿಸಿದ್ದೆವು. ಈಗಲೂ ಸುರಂಗ ರಸ್ತೆ ಬೇಡವೆಂದು ಹೇಳುತ್ತಿಲ್ಲ. ಆದರೆ ದೆಹಲಿ ನಾಯಕರಿಗೆ ಅನುಕೂಲ ಮಾಡಿಕೊಡಲು ಸುರಂಗ ಕೊರೆಯುವುದು ಬೇಕಿಲ್ಲ. ಈಗಾಗಲೇ 150 ಬಗೆಯ ದರ ಏರಿಕೆಗಳನ್ನು ಮಾಡಲಾಗಿದೆ. ಇದನ್ನು ನಾವು ವಿರೋಧಿಸುತ್ತೇವೆ ಎಂದರು.

ರೈತರ ಆತ್ಮಹತ್ಯೆಯಲ್ಲಿ ಕರ್ನಾಟಕ 2ನೇ ಸ್ಥಾನದಲ್ಲಿದೆ. ಬೆಳಗಾವಿ ಹಾಗೂ ಚಾಮರಾಜನಗರದಲ್ಲಿ ರೈತರು ನಿರಂತರವಾಗಿ ಪ್ರತಿಭಟನೆ ಮಾಡುತ್ತಿದ್ದಾರೆ. ನಾಳೆ ನಾನು ಚಾಮರಾಜನಗರಕ್ಕೆ ಹೋಗಿ ರೈತರ ಅಹವಾಲು ಆಲಿಸಿ ಪ್ರತಿಭಟನೆಯಲ್ಲಿ ಭಾಗವಹಿಸುತ್ತೇನೆ ಹಾಗೂ ಪಾದಯಾತ್ರೆ ಮಾಡುತ್ತೇನೆ ಎಂದು ಹೇಳಿದರು.

ಚರ್ಚೆಗೆ ಬನ್ನಿ

ಕೇಂದ್ರ ಸರ್ಕಾರ ಮತ್ತು ಹಿಂದಿನ ಬಿಜೆಪಿ ರಾಜ್ಯ ಸರ್ಕಾರ ಬೆಂಗಳೂರಿಗೆ ಎಷ್ಟು ಅನುದಾನ ನೀಡಿದೆ, ಎಷ್ಟು ಅಭಿವೃದ್ಧಿ ಕಾರ್ಯಗಳಾಗಿದೆ ಎಂದು ತಿಳಿಸುತ್ತೇವೆ. ಕಾಂಗ್ರೆಸ್‌ ಎಷ್ಟು ಅಭಿವೃದ್ಧಿ ಮಾಡಿದೆ ಎಂದು ತಿಳಿಸಲಿ. ಸಿಎಂ ಬದಲಾವಣೆ ಆಗಲ್ಲ ಎಂದು ಮಲ್ಲಿಕಾರ್ಜುನ ಖರ್ಗೆ ಹಾಗೂ ಡಿ.ಕೆ.ಶಿವಕುಮಾರ್‌ ಸ್ಪಷ್ಟವಾಗಿ ತಿಳಿಸಲಿ. ಐದು ವರ್ಷ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ ಎಂದು ಸ್ಪಷ್ಟೀಕರಣ ತಿಳಿಸಲಿ. ಹೀಗೆ ಹೇಳಿದರೆ ನಾವೇ ಸುಮ್ಮನಾಗುತ್ತೇವೆ. ಇವರಿಬ್ಬರಲ್ಲಿ ಯಾರೇ ಸಿಎಂ ಆದರೂ ಅಭಿವೃದ್ಧಿ ಮಾಡಲ್ಲ ಎಂದರು.

ಮಾಜಿ ಸಚಿವ, ಶಾಸಕರಾಗಿದ್ದ ಎಚ್‌.ವೈ.ಮೇಟಿ ಅವರ ನಿಧನ ಬಹಳ ದುಃಖ ತಂದಿದೆ. ರಾಜಕೀಯ ರಂಗದಲ್ಲಿ ಅವರು ತಮ್ಮದೇ ಛಾಪು ಮೂಡಿಸಿದ್ದರು. ಅವರ ಸೇವೆಯನ್ನು ಜನರು ಯಾವಾಗಲೂ ಸ್ಮರಿಸುತ್ತಾರೆ. ಅವರ ಆತ್ಮಕ್ಕೆ ಚಿರಶಾಂತಿ ಸಿಗಲೆಂದು ಕೋರುತ್ತೇನೆ ಎಂದರು.

Share. Facebook Twitter LinkedIn WhatsApp Email

Related Posts

ಜೀವ ಬೆದರಿಕೆ ಹಿನ್ನೆಲೆಯಲ್ಲಿ ಶ್ರೀ ಪ್ರಣವಾನಂದರಾಮ್ ಮಹಾಸ್ವಾಮಿಗಳಿಗೆ ಭದ್ರತೆ ನೀಡಿ: ಸ್ವಾಮೀಜಿಗಳಿಂದ ಸಿಎಂಗೆ ಮನವಿ

1 Min Read

Dharmasthala Case: ನಾನು ಚಿನ್ನಯ್ಯ ಜೊತೆ ಮಾತನಾಡಿದ್ದು ನಿಜ, ಆದರೆ ಆತ ಎಲ್ಲರಿಗೂ ಚಳ್ಳೆಹಣ್ಣು ತಿನ್ನಿಸಿದ್ದಾನೆ: ನಟ ಪ್ರಕಾಶ್ ರಾಜ್

2 Mins Read

SHOCKING: ರಾಜ್ಯದಲ್ಲಿ ತೀವ್ರ ಎದೆ ಉರಿಯಿಂದ 4 ವರ್ಷದ ಬಾಲಕ ಸಾವು; ಹೃದಯಾಘಾತದ ಶಂಕೆ

1 Min Read
Recent News

ಜೀವ ಬೆದರಿಕೆ ಹಿನ್ನೆಲೆಯಲ್ಲಿ ಶ್ರೀ ಪ್ರಣವಾನಂದರಾಮ್ ಮಹಾಸ್ವಾಮಿಗಳಿಗೆ ಭದ್ರತೆ ನೀಡಿ: ಸ್ವಾಮೀಜಿಗಳಿಂದ ಸಿಎಂಗೆ ಮನವಿ

Dharmasthala Case: ನಾನು ಚಿನ್ನಯ್ಯ ಜೊತೆ ಮಾತನಾಡಿದ್ದು ನಿಜ, ಆದರೆ ಆತ ಎಲ್ಲರಿಗೂ ಚಳ್ಳೆಹಣ್ಣು ತಿನ್ನಿಸಿದ್ದಾನೆ: ನಟ ಪ್ರಕಾಶ್ ರಾಜ್

ಜುಲೈ 3ಕ್ಕೆ ‘ಲವ್ ಸೀಸನ್ಸ್’ ರಿಲೀಸ್: ಬಿಡುಗಡೆಗೂ ಮುನ್ನವೇ ಹಾಡುಗಳು ಪುಲ್ ವೈರಲ್!

SHOCKING: ರಾಜ್ಯದಲ್ಲಿ ತೀವ್ರ ಎದೆ ಉರಿಯಿಂದ 4 ವರ್ಷದ ಬಾಲಕ ಸಾವು; ಹೃದಯಾಘಾತದ ಶಂಕೆ

State News
KARNATAKA

ಜೀವ ಬೆದರಿಕೆ ಹಿನ್ನೆಲೆಯಲ್ಲಿ ಶ್ರೀ ಪ್ರಣವಾನಂದರಾಮ್ ಮಹಾಸ್ವಾಮಿಗಳಿಗೆ ಭದ್ರತೆ ನೀಡಿ: ಸ್ವಾಮೀಜಿಗಳಿಂದ ಸಿಎಂಗೆ ಮನವಿ

By ವಸಂತ ಬಿ ಈಶ್ವರಗೆರೆ KARNATAKA 1 Min Read

ಬೆಂಗಳೂರು : ಈಡಿಗ ಸಮುದಾಯದ ಗುರುಗಳಾದ ಬ್ರಹ್ಮಶ್ರೀ ನಾರಾಯಣಗುರು ಶಕ್ತಿ ಪೀಠ ಕಲಬುರ್ಗಿ ಶ್ರೀ ಶರಣಬಸವೇಶ್ವರ ಮಠ ಹಾವೇರಿ ಪೀಠಾಧಿಪತಿಗಳಾದ ಶ್ರೀ…

Dharmasthala Case: ನಾನು ಚಿನ್ನಯ್ಯ ಜೊತೆ ಮಾತನಾಡಿದ್ದು ನಿಜ, ಆದರೆ ಆತ ಎಲ್ಲರಿಗೂ ಚಳ್ಳೆಹಣ್ಣು ತಿನ್ನಿಸಿದ್ದಾನೆ: ನಟ ಪ್ರಕಾಶ್ ರಾಜ್

SHOCKING: ರಾಜ್ಯದಲ್ಲಿ ತೀವ್ರ ಎದೆ ಉರಿಯಿಂದ 4 ವರ್ಷದ ಬಾಲಕ ಸಾವು; ಹೃದಯಾಘಾತದ ಶಂಕೆ

ಸಿಎಂ ಆದ ಮೇಲೆಯೂ ಆತ ಹಳೇ ಚಾಳಿ ಬಿಟ್ಟಿಲ್ಲ: ಪೋಸ್ಟರ್ ಅಪಪ್ರಚಾರಕ್ಕೆ ಹೆಚ್.ಡಿ.ಕುಮಾರಸ್ವಾಮಿ ಕಿಡಿ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.