Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಹಿರಿಯ ಗಾಯಕಿ `ಆಶಾ ಭೋಸ್ಲೆ’ ಇನ್ನಿಲ್ಲ | Asha Bhosle passes away

12/04/2026 12:54 PM

BREAKING : ನಮ್ಮವರು ಚುನಾವಣೆಗೆ ನಿಲ್ಲಬೇಕು ಇಲ್ಲ ಅಂದ್ರೆ ತಲೆ ಮೇಲೆ ಮಲ ಹೊರಬೇಕಾಗುತ್ತೆ : ಹಿರಿಯ ನಟ ಅಶೋಕ್!

12/04/2026 12:48 PM

BREAKING : ಸಂವಿಧಾನ ಬದಲಾಯಿಸಲು ಹೊರಟವರ ಕೈ ಕತ್ತರಿಸಿ ಅಂತ ಹೇಳಬೇಕಾಗುತ್ತೆ : ಹಿರಿಯ ನಟ ಅಶೋಕ್ ಹೇಳಿಕೆ

12/04/2026 12:38 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಬೆಂಗಳೂರಲ್ಲಿ ನೀರಿನ ಬಿಲ್ ಬಾಕಿ ಪಾವತಿಗೆ ಒಂದು ಬಾರಿ ಪರಿಹಾರ ಯೋಜನೆ ಜಾರಿ: ಅಸಲು ಕಟ್ಟಿದ್ರೆ ಬಡ್ಡಿ ಮನ್ನಾ!
KARNATAKA

ಬೆಂಗಳೂರಲ್ಲಿ ನೀರಿನ ಬಿಲ್ ಬಾಕಿ ಪಾವತಿಗೆ ಒಂದು ಬಾರಿ ಪರಿಹಾರ ಯೋಜನೆ ಜಾರಿ: ಅಸಲು ಕಟ್ಟಿದ್ರೆ ಬಡ್ಡಿ ಮನ್ನಾ!

By kannadanewsnow0922/03/2026 5:25 PM

ಬೆಂಗಳೂರು: ನೀರಿನ ಬಿಲ್ ಬಾಕಿ ಪಾವತಿಗೆ ಬಿಡಬ್ಲ್ಯೂಎಸ್ಎಸ್ ಬಿ ವತಿಯಿಂದ ಒಟಿಎಸ್ ಅವಕಾಶ ಕಲ್ಪಿಸಲಾಗಿದ್ದು, ಬಾಕಿ ಇರುವ ನೀರಿನ ಬಿಲ್ ಪಾವತಿಸಿದರೆ ಬಡ್ಡಿ ಮನ್ನಾ ಮಾಡಲಾಗುವುದು. ಇದರಿಂದ ಬೆಂಗಳೂರು ನಗರದ 11 ಲಕ್ಷ ಗ್ರಾಹಕರಿಗೆ ಅನುಕೂಲವಾಗಲಿದೆ. ಇದರ ಪ್ರಯೋಜನ ಪಡೆಯಬೇಕಾದಲ್ಲಿ ಏಪ್ರಿಲ್ ನಿಂದ ಜೂನ್ ತಿಂಗಳವರೆಗೆ (3 ತಿಂಗಳ ಅವಧಿಯಲ್ಲಿ) ಬಾಕಿ ಇರುವ ನೀರಿನ ಬಿಲ್ ಪಾವತಿಸಬೇಕಾಗಿದೆ.

ಬೆಂಗಳೂರು ನಾಗರೀಕರಿಗೆ ಜಲಮಂಡಳಿಯು ಯುಗಾದಿ ಉಡುಗೊರೆ ನೀಡಿದ್ದು, ದೀರ್ಘಕಾಲದಿಂದ ನೀರಿನ ಬಿಲ್ ಬಾಕಿ ಉಳಿಸಿಕೊಂಡಿರುವ ಗ್ರಾಹಕರಿಗೆ ಅನುಕೂಲ ಕಲ್ಪಿಸಲು, ಒನ್‌ ಟೈಮ್‌ ಸೆಟಲ್‌ಮೆಂಟ್‌ (𝗢𝗧𝗦 – 𝗢𝗻𝗲 𝗧𝗶𝗺𝗲 𝗦𝗲𝘁𝘁𝗹𝗲𝗺𝗲𝗻𝘁) ಯೋಜನೆಯನ್ನು ಬರುವ ಏಪ್ರಿಲ್‌ ತಿಂಗಳಿನಿಂದ ಜಾರಿಗೊಳಿಸಲಾಗುವುದು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದ್ದಾರೆ.

ಯೋಜನೆಯ ಹಿನ್ನಲೆ:

ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (𝗕𝗪𝗦𝗦𝗕) ವ್ಯಾಪ್ತಿಯಲ್ಲಿರುವ ಸುಮಾರು 11 ಲಕ್ಷ ನೀರಿನ ಸಂಪರ್ಕಗಳ ಪೈಕಿ, 5.11 ಲಕ್ಷ ಗ್ರಾಹಕರು ಬಿಲ್ ಬಾಕಿ ಉಳಿಸಿಕೊಂಡಿದ್ದಾರೆ. 2026ರ ಫೆಬ್ರವರಿ ಅಂತ್ಯದ ಮಾಹಿತಿಯಂತೆ, ಒಟ್ಟು ಬಾಕಿ ಮೊತ್ತ ರೂ. 851.33 ಕೋಟಿಗಳಾಗಿದ್ದು, ಇದರಲ್ಲಿ ಅಸಲು ಮೊತ್ತ ರೂ. 539.43 ಕೋಟಿ ಹಾಗೂ ಬಡ್ಡಿ ರೂ. 311.90 ಕೋಟಿ ಸೇರಿದೆ.

ಬಾಕಿಯನ್ನು ಸುಲಭವಾಗಿ ಪಾವತಿಸಲು ಹಾಗೂ ಗ್ರಾಹಕರ ಮೇಲಿನ ಆರ್ಥಿಕ ಹೊರೆ ತಗ್ಗಿಸಲು, ಏಪ್ರಿಲ್ 2026 ರಿಂದ ಜೂನ್ 2026 ರವರೆಗೆ (3 ತಿಂಗಳ ಅವಧಿ) ಈ 𝗢𝗧𝗦 ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ ಎಂದು ಡಿಸಿಎಂ ಅವರು ತಿಳಿಸಿದ್ದಾರೆ.

ಯೋಜನೆಯ ಪ್ರಮುಖ ನಿಯಮಗಳು ಹಾಗೂ ಪ್ರಯೋಜನಗಳು:

ಶೇ. 100 ರಷ್ಟು ಬಡ್ಡಿ ಮನ್ನಾ:

ಈ 3 ತಿಂಗಳ ಯೋಜನೆ ಅವಧಿಯಲ್ಲಿ ಗ್ರಾಹಕರು ತಮ್ಮ ಅಸಲು ಮೊತ್ತವನ್ನು (𝗣𝗿𝗶𝗻𝗰𝗶𝗽𝗮𝗹) ಸಂಪೂರ್ಣವಾಗಿ ಪಾವತಿಸಿದರೆ, ಏಪ್ರಿಲ್ 2026ರವರೆಗೆ ಸಂಗ್ರಹವಾಗಿರುವ ಸಂಪೂರ್ಣ ಬಡ್ಡಿಯನ್ನು (ಶೇ. 100ರಷ್ಟು) ರಿಬೇಟ್ (𝗿𝗲𝗯𝗮𝘁𝗲) ರೂಪದಲ್ಲಿ ಮನ್ನಾ ಮಾಡಲಾಗುತ್ತದೆ.

ಯಾರಿಗೆಲ್ಲ ಅನ್ವಯ?:

ಈ ಯೋಜನೆಯು ಗೃಹ (𝗗𝗼𝗺𝗲𝘀𝘁𝗶𝗰), ವಾಣಿಜ್ಯ (𝗖𝗼𝗺𝗺𝗲𝗿𝗰𝗶𝗮𝗹), ಕೈಗಾರಿಕಾ (𝗜𝗻𝗱𝘂𝘀𝘁𝗿𝗶𝗮𝗹) ಸೇರಿದಂತೆ 𝗕𝗪𝗦𝗦𝗕 ಯ ಎಲ್ಲ ವರ್ಗದ ಗ್ರಾಹಕರಿಗೂ ಅನ್ವಯವಾಗಲಿದೆ. ಸರ್ಕಾರಿ ಇಲಾಖೆಗಳು ಮತ್ತು ಸಂಸ್ಥೆಗಳ ಬಾಕಿಗಳಿಗೂ ಲೆಕ್ಕಪತ್ರ ಸಮನ್ವಯದ ಮೂಲಕ ವ್ಯವಸ್ಥೆ ಕಲ್ಪಿಸಲಾಗುತ್ತದೆ.

ಪಾವತಿ ಪ್ರಕ್ರಿಯೆ:

ಗ್ರಾಹಕರಿಗೆ ಮಾಹಿತಿ ಒದಗಿಸುವ ಹಾಗೂ ಪಾವತಿ ಪ್ರಕ್ರಿಯೆಯನ್ನು ಅತ್ಯಂತ ಸರಳಗೊಳಿಸುವ ನಿಟ್ಟಿನಲ್ಲಿ, 𝗕𝗪𝗦𝗦𝗕 ವತಿಯಿಂದ ಪ್ರತಿ ಬಾಕಿದಾರರಿಗೆ ಅವರ 𝗥𝗥 ಸಂಖ್ಯೆ, ಅಸಲು ಮೊತ್ತ, ಮನ್ನಾ ಆಗುವ ಬಡ್ಡಿ ಮೊತ್ತ ಹಾಗೂ ಪಾವತಿಸಬೇಕಾದ ಅಂತಿಮ ಮೊತ್ತದ ವಿವರಗಳನ್ನು ಒದಗಿಸಲಾಗುವುದು. ಗ್ರಾಹಕರು 𝗕𝗪𝗦𝗦𝗕 ಕಿಯೋಸ್ಕ್, ಆನ್‌ಲೈನ್ ಪೋರ್ಟಲ್ ಹಾಗೂ ವಿವಿಧ ಡಿಜಿಟಲ್ ಪಾವತಿ ವಿಧಾನಗಳ ಮೂಲಕ ಸುಲಭವಾಗಿ ಹಣ ಪಾವತಿಸಬಹುದು.

“ನಗರದ 5.11 ಲಕ್ಷಕ್ಕೂ ಹೆಚ್ಚು ಗ್ರಾಹಕರಿಗೆ ಆರ್ಥಿಕ ನೆರವು ನೀಡುವ ಹಾಗೂ ಮಂಡಳಿಯ ಆರ್ಥಿಕ ಸ್ಥಿತಿಯನ್ನು ಬಲಪಡಿಸುವ ದ್ವಿಮುಖ ಉದ್ದೇಶದಿಂದ ಈ ಯುಗಾದಿ ಕೊಡುಗೆಯನ್ನು ಜಾರಿಗೊಳಿಸಲಾಗುತ್ತಿದೆ. ಬರೋಬ್ಬರಿ 311 ಕೋಟಿ ರೂ.ಗಳ ಬಡ್ಡಿ ಮನ್ನಾ ಮಾಡುವ ಮೂಲಕ ನಾಗರಿಕರ ಮೇಲಿನ ಹೊರೆಯನ್ನು ಗಣನೀಯವಾಗಿ ಇಳಿಸಲಾಗುತ್ತಿದೆ. ಸಾರ್ವಜನಿಕರು ಮುಂಬರುವ 3 ತಿಂಗಳ ಈ ಸುವರ್ಣಾವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕು” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

BIG NEWS: ಇನ್ಮುಂದೆ ‘ಡಿಜಿಟಲ್ ಪಾವತಿ’ ಇನ್ನಷ್ಟು ಸೇಫ್: ಏ.1ರಿಂದ ‘ಹೆಚ್ಚುವರಿ ದೃಢೀಕರಣ’ ಕಡ್ಡಾಯಗೊಳಿಸಿದ RBI

ಅಮೆರಿಕಕ್ಕೆ ಬಿಗ್ ಶಾಕ್: ಇರಾನ್ ನಡೆಸಿದ ಪ್ರತಿದಾಳಿಗೆ US ನ 6,700 ಕೋಟಿ ರೂ. ಮೌಲ್ಯದ ಆಸ್ತಿ ಪಾಸ್ತಿ ನಾಶ!

Share. Facebook Twitter LinkedIn WhatsApp Email

Related Posts

BREAKING : ನಮ್ಮವರು ಚುನಾವಣೆಗೆ ನಿಲ್ಲಬೇಕು ಇಲ್ಲ ಅಂದ್ರೆ ತಲೆ ಮೇಲೆ ಮಲ ಹೊರಬೇಕಾಗುತ್ತೆ : ಹಿರಿಯ ನಟ ಅಶೋಕ್!

12/04/2026 12:48 PM1 Min Read

BREAKING : ಸಂವಿಧಾನ ಬದಲಾಯಿಸಲು ಹೊರಟವರ ಕೈ ಕತ್ತರಿಸಿ ಅಂತ ಹೇಳಬೇಕಾಗುತ್ತೆ : ಹಿರಿಯ ನಟ ಅಶೋಕ್ ಹೇಳಿಕೆ

12/04/2026 12:38 PM1 Min Read

BIG NEWS : ರೈತರಿಗೆ ವಂಚಿಸಿ ಅಸ್ತಿತ್ವವಿಲ್ಲದ ಕಂಪನಿಗೆ ಜಮೀನು ಹಸ್ತಾಂತರ: KIADB ಅಧಿಕಾರಿಗಳ ವಿರುದ್ಧ CBI ತನಿಖೆಗೆ ಹೈಕೋರ್ಟ್ ಆದೇಶ

12/04/2026 12:34 PM1 Min Read
Recent News

BREAKING : ಹಿರಿಯ ಗಾಯಕಿ `ಆಶಾ ಭೋಸ್ಲೆ’ ಇನ್ನಿಲ್ಲ | Asha Bhosle passes away

12/04/2026 12:54 PM

BREAKING : ನಮ್ಮವರು ಚುನಾವಣೆಗೆ ನಿಲ್ಲಬೇಕು ಇಲ್ಲ ಅಂದ್ರೆ ತಲೆ ಮೇಲೆ ಮಲ ಹೊರಬೇಕಾಗುತ್ತೆ : ಹಿರಿಯ ನಟ ಅಶೋಕ್!

12/04/2026 12:48 PM

BREAKING : ಸಂವಿಧಾನ ಬದಲಾಯಿಸಲು ಹೊರಟವರ ಕೈ ಕತ್ತರಿಸಿ ಅಂತ ಹೇಳಬೇಕಾಗುತ್ತೆ : ಹಿರಿಯ ನಟ ಅಶೋಕ್ ಹೇಳಿಕೆ

12/04/2026 12:38 PM

BIG NEWS : ರೈತರಿಗೆ ವಂಚಿಸಿ ಅಸ್ತಿತ್ವವಿಲ್ಲದ ಕಂಪನಿಗೆ ಜಮೀನು ಹಸ್ತಾಂತರ: KIADB ಅಧಿಕಾರಿಗಳ ವಿರುದ್ಧ CBI ತನಿಖೆಗೆ ಹೈಕೋರ್ಟ್ ಆದೇಶ

12/04/2026 12:34 PM
State News
KARNATAKA

BREAKING : ನಮ್ಮವರು ಚುನಾವಣೆಗೆ ನಿಲ್ಲಬೇಕು ಇಲ್ಲ ಅಂದ್ರೆ ತಲೆ ಮೇಲೆ ಮಲ ಹೊರಬೇಕಾಗುತ್ತೆ : ಹಿರಿಯ ನಟ ಅಶೋಕ್!

By kannadanewsnow0512/04/2026 12:48 PM KARNATAKA 1 Min Read

ಕಲಬುರ್ಗಿ : ಸಂವಿಧಾನ ಬದಲಾಯಿಸಲು ಹೊರಟವರ ಕೈಗಳನ್ನು ಕತ್ತರಿಸಿ ಅಂತ ಹೇಳಬೇಕಾಗುತ್ತದೆ. ನಮ್ಮವರು ಚುನಾವಣೆಗೆ ನಿಲ್ಲಬೇಕು ಇಲ್ಲ ಅಂದ್ರೆ ತಲೆ…

BREAKING : ಸಂವಿಧಾನ ಬದಲಾಯಿಸಲು ಹೊರಟವರ ಕೈ ಕತ್ತರಿಸಿ ಅಂತ ಹೇಳಬೇಕಾಗುತ್ತೆ : ಹಿರಿಯ ನಟ ಅಶೋಕ್ ಹೇಳಿಕೆ

12/04/2026 12:38 PM

BIG NEWS : ರೈತರಿಗೆ ವಂಚಿಸಿ ಅಸ್ತಿತ್ವವಿಲ್ಲದ ಕಂಪನಿಗೆ ಜಮೀನು ಹಸ್ತಾಂತರ: KIADB ಅಧಿಕಾರಿಗಳ ವಿರುದ್ಧ CBI ತನಿಖೆಗೆ ಹೈಕೋರ್ಟ್ ಆದೇಶ

12/04/2026 12:34 PM

ರಾಜ್ಯದಲ್ಲಿ ಬಿಸಿಲಿಗೆ ಜನ ಹೈರಾಣ : ಕಲಬುರ್ಗಿಯಲ್ಲಿ ಗರಿಷ್ಠ 44 ಡಿಗ್ರಿ ಸೆಲ್ಸಿಯಸ್ ತಾಪಮಾನ ಏರಿಕೆ ಸಾಧ್ಯತೆ!

12/04/2026 12:24 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.