ಬೆಂಗಳೂರು : ಹೈಕಮಾಂಡ್ ಸೂಚನೆ ಹಿನ್ನೆಲೆಯಲ್ಲಿ ನಿನ್ನೆ ರಾಜ್ಯ ರಾಜಕಾರಣದಲ್ಲಿ ಭಾರಿ ಬೆಳವಣಿಗೆ ನಡೆದಿದ್ದು, ಸಚಿವ ಸ್ಥಾನಕ್ಕೆ ರಾಜಣ್ಣ ಅವರು ರಾಜೀನಾಮೆ ನೀಡಿದ್ದಾರೆ. ಈ ವಿಚಾರವಾಗಿ ರಾಜಕೀಯದಲ್ಲಿ ಒಬ್ಬರ ಮೇಲೆ ಒಬ್ಬರು ಹಗೆ ಸಾಧಿಸುತ್ತಾರೆ. ನಾವು ಎಚ್ಚರಿಕೆಯಿಂದ ಇರಬೇಕು ಎಂದು ಸಚಿವ ಸತೀಶ್ ಜಾರಕಿಹೊಳಿ ರಾಜಕೀಯದ ಪಾಠ ಹೇಳಿದ್ದಾರೆ.
ರಾಜಣ್ಣರನ್ನ ಸಂಪುಟದಿಂದ ವಜಾ ಮಾಡಿದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ರಾಜಣ್ಣರನ್ನ ವಜಾ ಮಾಡಿರುವುದು ಹೈಕಮಾಂಡ್‌ನ ನಿರ್ಧಾರ. ಅದರ ಬಗ್ಗೆ ರಾಜಣ್ಣ ಅವರೇ ಹೇಳಿದ್ದಾರೆ. ದೆಹಲಿಗೆ ಹೋಗೋದಾಗಿ ಅವರೇ ಹೇಳಿದ್ದಾರೆ. ಆಮೇಲೆ ಪಿತೂರಿ ಅಂತ ಹೇಳಿದ್ದಾರೆ. ಹೈಕಮಾಂಡ್ ಹತ್ರ ಹೋಗಿ ಅವರು ಮಾತಾಡ್ತಾರೆ. ವಜಾದ ಬಗ್ಗೆ ವ್ಯಾಖ್ಯಾನ ಮಾಡೋಕೆ ಹೋಗಲ್ಲ ಎಂದಿದ್ದಾರೆ.
ಇದನ್ನ ಸಮುದಾಯಕ್ಕೆ ಮಾಡಿದ ಮೋಸ ಅಂತ ಹೇಳಲಾಗೊಲ್ಲ. ಏನು ಅಂತ ರಾಜಣ್ಣ ಮುಂದೆ ಹೇಳ್ತೀನಿ ಅಂದಿದ್ದಾರೆ. ಮುಂದೆ ನೋಡೊಣ.ರಾಜಕೀಯದಲ್ಲಿ ಒಬ್ಬರ ಮೇಲೆ ಒಬ್ಬರಿಗೆ ಹಗೆ ಇರುತ್ತದೆ.ಸ್ವಲ್ಪ ಎಚ್ಚರಿಕೆಯಿಂದ ಇರಬೇಕು. ದೆಹಲಿಗೆ ರಾಜಣ್ಣ ಹೋಗ್ತೀನಿ ಅಂತ ಹೇಳಿದ್ದಾರೆ. ಆಗ ಎಲ್ಲವೂ ಸರಿ ಹೋಗಬಹುದು ಎಂದು ತಿಳಿಸಿದ್ದಾರೆ. ಇದು ನಮ್ಮ ಪಕ್ಷದ ನಿರ್ಧಾರ ವಿಪಕ್ಷಗಳು ಯಾಕೆ ಮಾತಾಡ್ತಾರೆ. ಸಿಎಂ ಅವರು ಸ್ಪಷ್ಟನೆ ಕೊಡ್ತಾರೆ. ದೆಹಲಿಗೆ ಹೋದ ಮೇಲೆ ಎಲ್ಲವೂ ತಿಳಿಯಾಗಬಹುದು.
ರಾಜಕೀಯದಲ್ಲಿ ಹುಷಾರಾಗಿ ಇರಬೇಕು. ಇಲ್ಲದೆ ಹೋದ್ರೆ ಹೀಗೆ ಆಗುತ್ತದೆ. ರಾಜಕೀಯದಲ್ಲಿ ಒಬ್ಬರ ಮೇಲೆ ಒಬ್ಬರಿಗೆ ಹಗೆ ಇರೋದು ಸಾಮಾನ್ಯ ಎಂದು ಹೇಳಿದ್ದಾರೆ.ರಾಜಕೀಯದಲ್ಲಿ ಇದೆಲ್ಲವೂ ಇರುತ್ತದೆ. ನಾವು ಎಚ್ಚರಿಕೆಯಿಂದ ಇರಬೇಕು. ಇಲ್ಲದೇ ಹೋದ್ರೆ ಹೀಗೆ ಆಗುತ್ತದೆ. ಹೈಕಮಾಂಡ್ ಅನ್ನು ಮನವೊಲಿಸುವ ಪ್ರಯತ್ನವನ್ನು ಮುಂದೆ ರಾಜಣ್ಣ ಮಾಡ್ತಾರೆ. ಆಗ ಸರಿ ಹೋಗಬಹುದು ಎಂದಿದ್ದಾರೆ.