ಅಹಮದಾಬಾದ್ : ವ್ಯಕ್ತಿಯೊಬ್ಬರ ಖಾತೆಯಲ್ಲಿ ತಪ್ಪಾಗಿ 11,677 ಕೋಟಿ ರೂಪಾಯಿ ಜಮೆಯಾಗಿದ್ದು, ಇದರೊಂದಿಗೆ ಆ ವ್ಯಕ್ತಿ ಒಂದೇ ದಿನದಲ್ಲಿ ಕೋಟ್ಯಾಧಿಪತಿಯಾಗಿದ್ದಾನೆ. ದುರಾದೃಷ್ಟ ಅಂದ್ರೆ ನಂತ್ರ ಆ ಹಣ ವಾಪಸ್ ಹೋಗಿದೆ.
ಗುಜರಾತ್ʼನ ಅಹಮದಾಬಾದ್ʼನಲ್ಲಿ ಈ ಘಟನೆ ನಡೆದಿದ್ದು, ರಮೇಶ್ ಸಾಗರ್ ಕಳೆದ ಐದು ವರ್ಷಗಳಿಂದ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುತ್ತಿದ್ದಾರೆ. ಆತ ಒಂದು ವರ್ಷದ ಹಿಂದೆ ಕೋಟಕ್ ಸೆಕ್ಯುರಿಟೀಸ್ನಲ್ಲಿ ಡಿಮ್ಯಾಟ್ ಖಾತೆಯನ್ನ ತೆರೆದಿದ್ದ. ಸಧ್ಯ ಸಾಗರದ ಡಿಮ್ಯಾಟ್ ಖಾತೆಗೆ ತಿಂಗಳ ಹಿಂದೆ ಸುಮಾರು 12 ಸಾವಿರ ಕೋಟಿ ಜಮಾ ಆಗಿದೆ. ಜುಲೈ 26ರಂದು ಡಿಮ್ಯಾಟ್ ಖಾತೆಯಲ್ಲಿ 116,77,24,43,277.10 ರೂ.ಗಳನ್ನ ನೋಡಿ ಶಾಕ್ ಆಗಿದ್ದರು. ಈ ಮೊತ್ತದಿಂದ ಷೇರು ಮಾರುಕಟ್ಟೆಯಲ್ಲಿ ಎರಡು ಕೋಟಿ ಹೂಡಿಕೆ ಮಾಡಿದ್ದಾರೆ. ಇನ್ನೂ ಐದು ಲಕ್ಷಕ್ಕೆ ಲಾಭವನ್ನ ಕಾಯ್ದಿರಿಸಿದ್ದಾರೆ.
ಮತ್ತೊಂದೆಡೆ ಅದೇ ದಿನ ರಾತ್ರಿ 8.30ಕ್ಕೆ ಸಾಗರ್ ಅವ್ರ ಡಿಮ್ಯಾಟ್ ಖಾತೆಗೆ ತಪ್ಪಿ ಜಮೆಯಾಗಿದ್ದ ಕೋಟಿಗಟ್ಟಲೆ ಹಣ ಮಾಯವಾಗಿದೆ. ಆ್ಯಪ್ನಲ್ಲಿ ಮಾರ್ಜಿನ್ ಅಪ್ಡೇಟ್ನಲ್ಲಿ ಸಮಸ್ಯೆ ಇದೆ ಎಂದು ಬ್ಯಾಂಕ್ನಿಂದ ಸಂದೇಶವನ್ನ ಸ್ವೀಕರಿಸಿದರು, ಇದರಿಂದಾಗಿ ಇದು ಸಂಭವಿಸಿದೆ. ಅಂದು ಕೋಟಕ್ ಸೆಕ್ಯುರಿಟೀಸ್ ಆ್ಯಪ್ನಲ್ಲಿನ ತಾಂತ್ರಿಕ ದೋಷದಿಂದ ಸಾಗರ್ ಅವರಂತಹ ಇತರ ಕೆಲವರ ಖಾತೆಗಳಲ್ಲಿ ತಪ್ಪಾಗಿ ಕೋಟಿಗಟ್ಟಲೆ ಹಣ ಜಮೆಯಾಗಿದೆ. ಇದರೊಂದಿಗೆ ಎಲ್ಲರೂ ಒಂದೇ ದಿನದಲ್ಲಿ ಕೋಟ್ಯಾಧಿಪತಿಯಾಗಿದ್ರು. ಆದ್ರೆ, ನಂತ್ರ ಅದನ್ನ ಹಿಂಪಡೆಯಲಾಯಿದೆ. ಹಾಗಾಗಿ ಅವ್ರನ್ನೆಲ್ಲಾ ಒಂದು ದಿನದ ಕೋಟ್ಯಾಧಿಪತಿ ಅಂತಾ ಕರೆದ್ರೂ ತಪ್ಪಿಲ್ಲ.