ಕೊಪ್ಪಳ : ಮನೆಯ ಮುಂದೆ ಆಟವಾಡುತ್ತಿದ್ದ ಒಂದುವರೆ ವರ್ಷದ ಹೆಣ್ಣು ಮಗುವೊಂದು ತೆರೆದಿದ್ದ ಚರಂಡಿಗೆ ಬಿದ್ದು ಸಾವನನಪ್ಪಿರುವ ಘಟನೆ ಕೊಪ್ಪಳ ಜಿಲ್ಲೆ ಗಂಗಾವತಿಯ ಎಪಿಎಂಸಿ ಹಮಾಲರ ಕಾಲೋನಿಯಲ್ಲಿ ಈ ದುರ್ಘಟನೆ ಸಂಭವಿಸಿದೆ.
BREAKING : ದೆಹಲಿಯ 4, ಹರಿಯಾಣದ 1 ಲೋಕಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದ AAP!
ಹಮಲರ ಕಾಲೋನಿಯ ಪಂಪಾವತಿ ಹಾಗೂ ಅಕ್ಕಮ್ಮ ದಂಪತಿ ಪುತ್ರಿ ಪವಿತ್ರ ಎಂದು ಹೇಳಲಾಗುತ್ತಿದ್ದು. ಬೆಳಿಗ್ಗೆ ಆಟ ಆಡುತ್ತಿದ್ದ ಸಂದರ್ಭದಲ್ಲಿ ಮನೆಯ ಮುಂದಿನ ಚರಂಡಿಗೆ ಮಗು ಪವಿತ್ರ ಬಿದ್ದಿದೆ. ಈ ವೇಳೆ ಪೋಷಕರು ಮಗು ಎಲ್ಲಿ ಹೋಗಿದೆ ಎಂದು ಗಾಬರಿಯಿಂದ ಹುಡುಕಾಟ ನಡೆಸಿದ್ದಾರೆ.
Interesting Facts : ಥೈರಾಯ್ಡ್ ಇರುವವರು ‘ಅನ್ನ’ ತಿನ್ನಬಾರದೇ.? ತಜ್ಞರು ಏನು ಹೇಳೋದೇನು.?
ಆದರೆ ಇಂದು ಮಧ್ಯಾಹ್ನ ಚರಂಡಿಯಲ್ಲಿ ಮಗುವಿನ ಮೃತದೇಹ ಪತ್ತೆಯಾಗಿದೆ.ಚರಂಡಿ ಮುಚ್ಚದೆ ನಗರಸಭೆ ಅಧಿಕಾರಿಗಳು ಹಾಗೆ ಬಿಟ್ಟಿದ್ದರು. ನಗರಸಭೆ ಕಚೇರಿ ಬಳಿ ಮಗುವಿನ ಶವ ಬಿಟ್ಟು ಸ್ಥಳೀಯರು ಇದೀಗ ಆಕ್ರೋಶ ಹೊರಹಾಕುತ್ತಿದ್ದಾರೆ. ಗಂಗಾವತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.