ಬೆಂಗಳೂರು:ನವೆಂಬರ್ 1 ಕನ್ನಡ ರಾಜ್ಯೋತ್ಸವ ನಿಮಿತ್ತ, ಅಕ್ಟೋಬರ್ 28ರಂದು ಕೋಟಿ ಕಂಠ ಗಾಯನ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನಿಲ್ ಕುಮಾರ್ ತಿಳಿಸಿದ್ದಾರೆ. ಕ್ಯೂಆರ್ ಕೋಡ್ ಮೂಲಕ 1.10 ಕೋಟಿ ಜನ ನೋಂದಣಿ ಮಾಡಿಕೊಂಡಿದ್ದು, ನನ್ನ ನಾಡು ನನ್ನ ಹಾಡು ಘೋಷಣೆಯೊಂದಿಗೆ ಗಾಯನ ನಡೆಯಲಿದೆ ಎಂದರು.
ರಾಜ್ಯ ಸರ್ಕಾರದಿಂದ ಅಕ್ಟೋಬರ್ 28, 2022ರಂದು ನನ್ನ ನಾಡು, ನನ್ನ ಹಾಡು ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಸಾರ್ವಜನಿಕರಾಧಿಯಾಗಿ ಎಲ್ಲಿರಿಗೂ ಭಾಗವಹಿಸೋದಕ್ಕೆ ಅವಕಾಶ ನೀಡಲಾಗಿತ್ತು. ಇದಕ್ಕೆ ಭರ್ಜರಿ ರೆಸ್ಪಾನ್ಸ್ ದೊರೆತಿದೆ. 46 ದೇಶ, 26 ರಾಜ್ಯಗಳಿಂದ 1.10 ಕೋಟಿ ಜನರು ಕಾರ್ಯಕ್ರಮದಲ್ಲಿ ಹಾಡೋದಕ್ಕಾಗಿ ನೋಂದಣಿ ಮಾಡಿಕೊಂಡಿದ್ದಾರೆ.
ಈ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿ ಮಾಹಿತಿ ನೀಡಿದಂತ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನೀಲ್ ಕುಮಾರ್ ಅವರು, ನನ್ನ ನಾಡು, ನನ್ನ ಹಾಡು ಕಾರ್ಯಕ್ರಮವನ್ನು ಅಕ್ಟೋಬರ್ 28ರಂದು ಆಯೋಜಿಸಲಾಗಿದೆ. ಕೋಠಿ ಕಂಠ ಗಾಯನ ಕಾರ್ಯಕ್ರಮಕ್ಕೆ ಕ್ಯೂ ಆರ್ ಕೋಡ್ ಮೂಲಕ 1.10 ಕೋಟಿ ಜನರು ನೋಂದಣಿ ಮಾಡಿಕೊಂಡಿದ್ದಾರೆ ಎಂದು ಹೇಳಿದರು.
ಕೋಟಿ ಕಂಠ ಗಾಯನ ಕಾರ್ಯಕ್ರಮವು ಕನ್ನಡ ಭಾಷೆ, ಜನರ ಮನಸ್ಸನ್ನು ಒಗ್ಗೂಡಿಸುವ ಪ್ರಯತ್ನವಾಗಿದೆ. ಈ ಪ್ರಯತ್ನಕ್ಕೆ 46 ದೇಶಗಳು, 26 ರಾಜ್ಯಗಳಿಂದ ಜನರು ನೋಂದಣಿ ಮಾಡಿಕೊಂಡಿದ್ದಾರೆ. 10 ಸಾವಿರ ಸ್ಥಳಗಳಲ್ಲಿ ಒಂದು ಕೋಟಿ ಜನರು ಏಕಕಾಲಕ್ಕೆ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಹಾಡಲಿದ್ದಾರೆ. ಶಿಕ್ಷಣ, ಉನ್ನತ ಶಿಕ್ಷಣ, ಕಾರ್ಮಿಕ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆಗಳು ಕೂಡ ಕೈಜೋಜಿಸಿವೆ ಎಂದರು.
ಕಂಠೀರವ ಕ್ರೀಡಾಂಗಣದಲ್ಲಿ ಅಕ್ಟೋಬರ್ 28ರಂದು ನಡೆಯಲಿರುವಂತ ಗಾಯನ ಕಾರ್ಯಕ್ರಮದಲ್ಲಿ 50 ಸಾವಿರ ಜನರು ಒಟ್ಟಿಗೆ ಹಾಡಲಿದ್ದಾರೆ. ಕಾರ್ಖಾನೆ, ಆಸ್ಪತ್ರೆ, ರಿಕ್ಷಾ ನಿಲ್ದಾಣ, ಅಪಾರ್ಮೆಂಟ್, ವಿಧಾನಸೌಧ, ಮೈಸೂರು ಅರಮನೆ, ಚಿತ್ರದುರ್ಗ ಕೋಟೆ, ಬೀದರ್ ಗುರುದ್ವಾರ, ಬಾದಾಮಿ, ಜೋಗ ಜಲಪಾತ, ಸಮುದ್ರ ಕಿನಾರೆ, ಏರ್ ಪೋರ್ಟ್ ಸೇರಿ ಎಲ್ಲಾ ಕಡೆ ನಡೆಯಲಿದೆ ಎಂಬುದಾಗಿ ಸಚಿವ ಸುನೀಲ್ ಕುಮಾರ್ ತಿಳಿಸಿದರು.
ITR ಫೈಲಿಂಗ್ ಗಡುವು ವಿಸ್ತರಣೆ, ನ. 7 ರವರೆಗೆ ITR ಸಲ್ಲಿಕೆಗೆ ಅವಕಾಶ | ITR filing deadline extended
ಗಮನಿಸಿ: ಕರ್ನಾಟಕ ‘KARTET 2022’ ಪರೀಕ್ಷೆ ಬರೆಯೋರಿಗೆ ಮಹತ್ವದ ಮಾಹಿತಿ, ಈ ನಿಯಮಗಳ ಪಾಲನೆ ಕಡ್ಡಾಯ