ಶಿವಮೊಗ್ಗ: ಇಂದು ಭೀಮನ ಅಮಾವಾಸ್ಯೆ. ಈ ಪ್ರಯುಕ್ತ ಶಿವಮೊಗ್ಗ ಜಿಲ್ಲೆಯ ಪ್ರಸಿದ್ಧ ಶ್ರೀ ಕ್ಷೇತ್ರ ಸಿಗಂದೂರು ಚೌಡೇಶ್ವರಿ ದೇವಿಯ ಸನ್ನಿಧಾನಕ್ಕೆ ಭಕ್ತ ಜನಸಾಗರವೇ ಹರಿದು ಬಂದಿದೆ. ಈ ಸುಸಂದರ್ಭದಲ್ಲಿ ಚೌಡೇಶ್ವರಿ ದೇವಿಗೆ ವಿಶೇಷ ಅಲಂಕಾರವನ್ನು ಕೂಡ ಮಾಡಲಾಗಿದೆ.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಸಿಗಂದೂರಿಗೆ ಸೇತುವೆ ಸಂಪರ್ಕ ದೊರೆತ ನಂತ್ರ ಭಕ್ತರು ಹರಿದು ಬರುತ್ತಿದ್ದಾರೆ. ಭೀಮನ ಅಮಾವಾಸ್ಯೆಯ ದಿನವಾದಂತ ಇಂದು ಸಾವಿರಾರೂ ಜನರು ಸಿಗಂದೂರು ಚೌಡೇಶ್ವರಿ ದೇವಿಯ ಸನ್ನಿಧಾನಕ್ಕೆ ಆಗಮಿಸಿದ್ದಾರೆ. ತಾಯಿಗೆ ಮಾಡಿರುವಂತ ವಿಶೇಷ ಅಲಂಕಾರವನ್ನು ಕಣ್ ತುಂಬಿಕೊಂಡು ತಮ್ಮ ಇಷ್ಟಾರ್ಥ ಈಡೇರಿಸುವಂತೆ ಹರಕೆ ಮಾಡುತ್ತಿರುವುದು ಕಂಡು ಬಂದಿದೆ.
ಇಂದು ಭೀಮನ ಅಮಾವಾಸ್ಯೆ ಪ್ರಯುಕ್ತ ಸಿಗಂದೂರು ಚೌಡೇಶ್ವರಿ ದೇವಿಗೆ ಹೂವಿನಿಂದ ವಿಶೇಷ ರೀತಿಯಲ್ಲಿ ಅಲಂಕಾರ ಮಾಡಲಾಗಿದೆ. ಮುಂಜಾನೆಯಿಂದಲೇ ಪೂಜೆ ಪುರಸ್ಕಾರ ಆರಂಭಗೊಂಡಿದ್ದು, ಭೀಮನ ಅಮಾವಾಸ್ಯೆ ಪ್ರಯುಕ್ತ ಶ್ರೀ ಸಿಗಂದೂರು ಚೌಡೇಶ್ವರಿ ದೇವಿಗೆ ವಿಶೇಷ ಅಲಂಕಾರ ಹಾಗೂ ಮಹಾಮಂಗಳಾರತಿಯನ್ನು ಮಾಡಲಾಯಿತು.
ಮತ್ತೊಂದೆಡೆ ಭೀಮನ ಅಮಾವಾಸ್ಯೆಯಂದು ಶ್ರಾವಣ ಮಾಸವನ್ನು ಸ್ವಾಗತಿಸಲು ಸಿಂಗಾರಗೊಂಡ ಸಿಗಂದೂರು ಶ್ರೀ ಚೌಡೇಶ್ವರಿ ಕ್ಷೇತ್ರ ನಿರೀಕ್ಷೆಗೂ ಮೀರಿ ಜನಸಾಗರ ಹರಿದು ಬಂದಿದೆ. ಸಿಗಂದೂರಿನಲ್ಲಿ ಭಾರೀ ಸಂಖ್ಯೆಯ ಭಕ್ತರು ನೆರೆದಿದ್ದು, ಸಿಗಂದೂರು ಚೌಡೇಶ್ವರಿಯನ್ನು ಸರದಿ ಸಾಲಿನಲ್ಲಿ ನಿಂತು ದರ್ಶನ ಮಾಡುತ್ತಿರುವುದು ಕಂಡು ಬಂದಿದೆ.
ಏನಿದು ಭೀಮನ ಅಮಾವಾಸ್ಯೆ?
ಭೀಮನ ಅಮಾವಾಸ್ಯೆಯಂದು ಪಿತೃಗಳು ಭೂಮಿಗೆ ಬರುತ್ತಾರೆಂದು ನಂಬಲಾಗುವುದು. ಈ ಸಮಯದಲ್ಲಿ ತಿಥಿ, ತರ್ಪಣ ಮಾಡಿದರೆ ಆತ್ಮಗಳು ಶಾಂತಿಯುತವಾಗಿ ಸ್ವರ್ಗಕ್ಕೆ ಹೋಗುತ್ತವೆ. ಜೊತೆಗೆ ಪೂರ್ವಜರ ಆಶೀರ್ವಾದದಿಂದ ಜೀವನದಲ್ಲಿ ಸಮಸ್ಯೆಗಳು ದೂರವಾಗಿ ಸಂತೋಷ ನೆಲೆಸಲಿದೆ.
ಜುಲೈ 24 ಗುರುವಾರ ಅಮಾವಾಸ್ಯೆ ತಿಥಿ ಮಧ್ಯ ರಾತ್ರಿ 2.29ಕ್ಕೆ ಪ್ರಾರಂಭವಾಗಿ ಮರುದಿನ ಮಧ್ಯರಾತ್ರಿ 12.40ಕ್ಕೆ ಕೊನೆಗೊಳ್ಳುತ್ತದೆ . ಇದು ಪಿತೃ ದೋಷ ನಿವಾರಣೆಗೆ ಸೂಕ್ತವಾದ ಸಮಯ. ಪಿತೃ ದೋಷ ಮರಣದ ನಂತರ ಪೂರ್ವಜರಿಗೆ ಅಗತ್ಯವಿರುವ ಆಚರಣೆಗಳನ್ನು ಸರಿಯಾಗಿ ಮಾಡದಿದ್ದಾಗ ಅಥವಾ ಅವರ ಆತ್ಮಗಳು ಶಾಂತಿಯಿಂದ ಇಲ್ಲದಿದ್ದಾಗ ಕುಟುಂಬದಲ್ಲಿ ಸಂಭವಿಸುವ ಸಮಸ್ಯೆಯಾಗಿದೆ. ಈ ದೋಷದಿಂದ ಮುಕ್ತರಾಗಲು ಭೀಮನ ಅಮವಾಸ್ಯೆಯಂದು ತಿಥಿ, ತರ್ಪಣ, ಆಚರಣೆಯಲ್ಲದೆ ದಾನದ ಮೂಲಕವೂ ಮುಕ್ತರಾಗಬಹುದು.
ವರದಿ; ವಸಂತ ಬಿ ಈಶ್ವರಗೆರೆ.., ಸಂಪಾದಕರು
BREAKING: ನಾವು ಅದೇ ತಪ್ಪು ಮಾಡುವುದಿಲ್ಲ: ನಟ ದರ್ಶನ್ ಗೆ ಹೈಕೋರ್ಟ್ ನೀಡಿದ ಜಾಮೀನಿಗೆ ಸುಪ್ರೀಂ ಕೋರ್ಟ್ ಗರಂ
`ಪ್ಯಾರಸಿಟಮಾಲ್’ ಬಳಸಿ ಬಟ್ಟೆಗಳ ಕಲೆಗಳನ್ನು ತೆಗೆಯಬಹುದು : ವಿಡಿಯೋ ವೈರಲ್ | WATCH VIDEO