ಬೆಂಗಳೂರು : ಕಳೆದ ಕೆಲವು ದಿನಗಳ ಹಿಂದೆ ಅಷ್ಟೇ ಮುಖ್ಯಮಂತ್ರಿಯ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ದೆಹಲಿಗೆ ಭೇಟಿ ನೀಡಿ, ಕಾಂಗ್ರೆಸ್ ವರಿಷ್ಠರನ್ನು ಭೇಟಿಯಾಗಿದ್ದರು. ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಜುಲೈ 25ರಂದು ಮತ್ತೆ ದೆಹಲಿಗೆ ತೆರಳಲಿದ್ದಾರೆ. ಹೈಕಮಾಂಡ್ ನಾಯಕರನ್ನು ಭೇಟಿ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.
ಇದೆ ವಿಚಾರವಾಗಿ ಡಿಕೆ ಶಿವಕುಮಾರ್ ಪ್ರತಿಕ್ರಿಯ ನೀಡಿದ್ದು, ಜುಲೈ 25ರಂದು ನಾನು ಮತ್ತು ಸಿಎಂ ಸಿದ್ದರಾಮಯ್ಯ ದೆಹಲಿಗೆ ಹೋಗುತ್ತಿದ್ದೇವೆ ಅಷ್ಟು ಮಾತ್ರ ನನಗೆ ಗೊತ್ತು ಮಿಕ್ಕಿದ್ದು ಅಧಿವೇಶನ ನಡಿತಿದೆ. ಬಿಬಿಎಂಪಿ ವಿಭಜನೆ ವಿರೋಧಿಸಿ ಪಿಐಎಲ್ ಅರ್ಜಿ ಸಲ್ಲಿಸಿದ ವಿಚಾರವಾಗಿ ಅವರ ಹಕ್ಕನ್ನು ನಾನು ಮೊಟಕುಗೊಳಿಸಲು ಆಗುತ್ತಾ? ಪ್ರಶ್ನಿಸಬಹುದು ಕೋರ್ಟಿಗೆ ಹೋಗಬಹುದು ಅದು ತಪ್ಪಲ್ಲ ಅವರು ಪಿಐಎಲ್ ಹಾಕುವುದನ್ನು ಬೇಡ ಅನ್ನೋಕಾಗುತ್ತ? ಎಂದು ತಿಳಿಸಿದರು. ಸಾರ್ವಜನಿಕರು ದಿನಾಲು ನನ್ನ ಭೇಟಿ ಮಾಡುತ್ತಾರೆ ಅದು ಸ್ವಾಭಾವಿಕ ಎಲ್ಲಿ ತಮ್ಮ ಕೆಲಸ ಕಾರ್ಯಗಳು ಆಗುತ್ತವೆ. ಪಕ್ಷದ ಕಾರ್ಯಕರ್ತರಿಗೆ ಪರಿಹಾರ ಒದಗಿಸುತ್ತೇವೆ ಎರಡು ದಿನ ಇಲ್ಲಿ ಇರಲ್ಲವೆಂದು ಗೊತ್ತಿದೆ ಹೀಗಾಗಿ ಬೇಟಿಗೆ ಬಂದಿದ್ದಾರೆ ಎಂದರು.