ಧನ್ ತೇರಸ್ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಶುಭಾಶಯಗಳನ್ನು ಕೋರಿದರು, “ದೇಶದ ನನ್ನ ಎಲ್ಲಾ ಕುಟುಂಬ ಸದಸ್ಯರಿಗೆ ಹೃತ್ಪೂರ್ವಕ ಧನ್ ತೇರಸ್ ಶುಭಾಶಯಗಳು” ಎಂದು X ನಲ್ಲಿ ಶುಭ ಕೋರಿದ್ದಾರೆ.
ಈ ಪವಿತ್ರ ಸಂದರ್ಭದಲ್ಲಿ, ಪ್ರತಿಯೊಬ್ಬರ ಸಂತೋಷ, ಸಮೃದ್ಧಿ ಮತ್ತು ಉತ್ತಮ ಆರೋಗ್ಯಕ್ಕಾಗಿ ನಾನು ಪ್ರಾರ್ಥಿಸುತ್ತೇನೆ.” ಎಂದಿದ್ದಾರೆ.
ಭಗವಾನ್ ಧನ್ವಂತರಿ ಎಲ್ಲರಿಗೂ ತಮ್ಮ ಹೇರಳವಾದ ಆಶೀರ್ವಾದವನ್ನು ನೀಡಲಿ, ಎಂದು ಅವರು ತಮ್ಮ ಎಕ್ಸ್ ಖಾತೆಯಲ್ಲಿ ಬರೆದಿದ್ದಾರೆ
ರಾಹುಲ್ ಗಾಂಧಿ ಈ ಬಗ್ಗೆ ಟ್ವೀಟ್ ಮಾಡಿದ್ದು, “ಎಲ್ಲಾ ದೇಶವಾಸಿಗಳಿಗೆ ಧನ್ ತೇರಸ್ ನ ಹೃತ್ಪೂರ್ವಕ ಶುಭಾಶಯಗಳು. ಆರೋಗ್ಯ ಮತ್ತು ಸಮೃದ್ಧಿಯ ಈ ಹಬ್ಬವು ನಿಮ್ಮ ಜೀವನದಲ್ಲಿ ಸಂತೋಷ, ಅದೃಷ್ಟ ಮತ್ತು ಸಮೃದ್ಧಿಯನ್ನು ತರಲಿ” ಎಂದಿದ್ದಾರೆ.