ಅಣ್ಣುಪುರ್ (ಮಧ್ಯಪ್ರದೇಶ): ಭಾರೀ ಮಳೆಯಿಂದಾಗಿ ಗ್ರಾಮಕ್ಕೆ ಕಲ್ಪಿಸಿದ್ದ ಸಂಪರ್ಕ ಸೇತುವೆ ನರ್ಮದಾ ನದಿಯ ಪ್ರವಾಹಕ್ಕೆ ಮುಳುಗಡೆಯಾದ ಪರಿಣಾಮ ಜನ ಜೀವನ ವ್ಯವಸ್ಥೆ ಅಸ್ಥವ್ಯಸ್ಥವಾಗಿದೆ. ಇದರಿಂದಾಗಿ ಅಲ್ಲಿನ ಗ್ರಾಮಸ್ಥರ ಗುಂಪೊಂದು ಶವವನ್ನು ಅಂತ್ಯಕ್ರಿಯೆ ಮಾಡಲು ಶವವನ್ನು ರಬ್ಬರ್ ಟ್ಯೂಬ್ಗೆ ಕಟ್ಟಿ ನದಿಯಲ್ಲಿ ತೇಲಿ ಬಿಟ್ಟು ದಡ ಸೇರಿಸಿರುವ ಘಟನೆ ಮಧ್ಯಪ್ರದೇಶದ ಅಣ್ಣುಪುರ್ನಲ್ಲಿ ನಡೆದಿದೆ.
ಸ್ಥಳೀಯ ಪೊಲೀಸರ ಪ್ರಕಾರ, ಮೃತರನ್ನು ಅನುಪ್ಪುರ್ನ ತಾಡಪಥರಾ ಗ್ರಾಮದ ನಿವಾಸಿ ವಿಶ್ಮತ್ ನಂದ (55) ಎಂದು ಗುರುತಿಸಲಾಗಿದೆ. ವಿಶ್ಮತ್ ಭಾನುವಾರ ಹೃದಯಾಘಾತದಿಂದ ನೆರೆಯ ದಿಂಡೋರಿ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ ನಿಧನರಾದರು. ಅವರ ಮೃತದೇಹವನ್ನು ಅಂತ್ಯಕ್ರಿಯೆ ಮಾಡಲು ನದಿ ದಾಟಲು ಸಾಧ್ಯವಾಗದೇ, ಅದನ್ನು ರಬ್ಬರ್ ಟ್ಯೂಬ್ಗೆ ಕಟ್ಟಿ ನದಿ ದಾಟಿಸಲಾಗಿದೆ.
#Watch – Absence of bridge-proper connect forced villagers to tie the body of a deceased man to a floating rubber tube to cross flooded #NarmadaRiver https://t.co/DfzsqiuK1g#MadhyaPradesh #News #Video #Viral #LastRites #Body #Shocking pic.twitter.com/O9A5qFvbpB
— Free Press Journal (@fpjindia) August 16, 2022
ಇದೀಗ ವೈರಲ್ ಆಗಿರುವ ವೀಡಿಯೋದಲ್ಲಿ, ಕೆಲವರು ಶವವನ್ನು ನದಿಯ ಮೂಲಕ ಅನುಪ್ಪುರ್ ಜಿಲ್ಲೆಯ ತಮ್ಮ ಗ್ರಾಮಕ್ಕೆ ಸಾಗಿಸುತ್ತಿರುವುದನ್ನು ತೋರಿಸುವ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಈ ಬಗ್ಗೆ ಸ್ಥಳೀಯ ಆಡಳಿತದ ಅಧಿಕಾರಿಯೊಬ್ಬರು ತನಿಖೆ ನಡೆಸುವುದಾಗಿ ಹೇಳಿದ್ದಾರೆ.
ಪಥರಕುಚ ಗ್ರಾಮದವರೆಗೆ ಶವವನ್ನು ಆಂಬ್ಯುಲೆನ್ಸ್ನಲ್ಲಿ ಕೊಂಡೊಯ್ಯಲಾಗಿದೆ. ಆದರೆ. ನದಿಯ ಪ್ರವಾಹದಿಂದ ತಡಪಥರಾ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಏಕೈಕ ರಸ್ತೆ ಮತ್ತು ಸೇತುವೆಯಿಲ್ಲದ ಕಾರಣ ಅದನ್ನು ಅಲ್ಲಿಯೇ ನಿಲ್ಲಿಸಬೇಕಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಧ್ಯಪ್ರದೇಶದ ಹಲವಾರು ಭಾಗಗಳಲ್ಲಿ ಭಾರೀ ಮಳೆಯಿಂದಾಗಿ, ಜನಜೀವನ ಅಸ್ತವ್ಯಸ್ತವಾಗಿದೆ, ಅನೇಕ ಸ್ಥಳಗಳಲ್ಲಿ ರಸ್ತೆಗಳು ನೀರಿನಲ್ಲಿ ಮುಳುಗಿವೆ ಮತ್ತು ಗುಹೆಗಳಲ್ಲಿ ಮುಳುಗಿವೆ. ಅನೇಕ ಸ್ಥಳಗಳಲ್ಲಿ ಸೇತುವೆಗಳು ಕುಸಿದಿವೆ.
BIGG NEWS: ಭಾರತದ ಕುರಿತು ಭವಿಷ್ಯ ಹೇಳಿ ಆತಂಕ ಸೃಷ್ಟಿಸಿದ ಬಾಬಾ ವಂಗಾ!
BIG NEWS: ಬೆಂಗಳೂರು ವಲಸಿಗರಿಗೆ ಅತ್ಯುತ್ತಮ ಆರು ನಗರಗಳಲ್ಲಿ ಒಂದಾಗಿದೆ: ವರದಿ