ಗೋರಖ್ಪುರ (ಉತ್ತರ ಪ್ರದೇಶ): ಎಲ್ಲಡೆ ಮುಂಗಾರು ಮಳೆ ಅಬ್ಬರ ಜೋರಾಗಿದ್ದು, ಉತ್ತರ ಪ್ರದೇಶದ ಮಹಾರಾಜ್ಗಂಜ್ ಜಿಲ್ಲೆಯಲ್ಲಿ ಮಹಿಳೆಯರ ಗುಂಪೊಂದು ಸ್ಥಳೀಯ ಶಾಸಕ ಮತ್ತು ನಗರಪಾಲಿಕೆ ಅಧ್ಯಕ್ಷರನ್ನು ಮಣ್ಣಿನ ಕೆಸರು ಎರಚಿ ಮಳೆ ದೇವರು ಇಂದ್ರನನ್ನು ಮೆಚ್ಚಿಸುವ ಮೂಲಕ ಧಾರ್ಮಿಕ ವಿಧಿವಿಧಾನ ನಡೆಸಿದೆ.
ತಲೆಗೆ ಮಡೆ ಸ್ನಾನ ಮಾಡಿದರೆ, ಮಳೆ ಬರಿಸುವ ಮಳೆ ದೇವರಿಗೆ ಹಿತವಾಗುತ್ತದೆ ಎಂಬುದು ಈ ಪ್ರದೇಶದ ಪ್ರಾಚೀನ ನಂಬಿಕೆ. ಮಹಾರಾಜ್ಗಂಜ್ನ ಪಿಪರ್ಡೆಯುರಾ ಪ್ರದೇಶದ ಮಹಿಳೆಯರು ಬಿಜೆಪಿ ಶಾಸಕ ಜಯಮಂಗಲ್ ಕನೋಜಿಯಾ ಮತ್ತು ನಗರಪಾಲಿಕೆಯ ಅಧ್ಯಕ್ಷ ಕೃಷ್ಣ ಗೋಪಾಲ್ ಜೈಸ್ವಾಲ್ಗೆ ಮಡೆ ಸ್ನಾನ ಮಾಡಿಸುವ ವಿಡಿಯೋ ಇದೀಗ ಆಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.
#WATCH | Women in Pipardeura area of Maharajganj in Uttar Pradesh throw mud at MLA believing this will bring a good spell of rainfall for the season pic.twitter.com/BMFLHDgYxb
— ANI UP/Uttarakhand (@ANINewsUP) July 13, 2022
“ಇಂದ್ರ ದೇವನನ್ನು ಮೆಚ್ಚಿಸಲು, ಮಕ್ಕಳು ಮಣ್ಣಿನಲ್ಲಿ ಸ್ನಾನ ಮಾಡುತ್ತಾರೆ ಮತ್ತು ಸ್ಥಳೀಯವಾಗಿ ಇದನ್ನು ಕಲ್ ಕಲೂಟಿ ಎಂದು ಕರೆಯಲಾಗುತ್ತದೆ” ಎಂದು ಸ್ಥಳೀಯರು ತಿಳಿಸಿದ್ದಾರೆ.
ಶಾಸಕ ಕನೋಜಿಯ್ಯ ಹಾಗೂ ನಗರ ಪಾಲಿಕೆ ಅಧ್ಯಕ್ಷ ಜೈಸ್ವಾಲ್ ಮಳೆಗಾಗಿ ಮಡೆ ಸ್ನಾನ ಮಾಡಿ ಸಂತಸ ವ್ಯಕ್ತಪಡಿಸಿದ್ದಾರೆ. ಬಿಸಿಲಿನ ತಾಪದಿಂದ ಜನರು ಚಡಪಡಿಸುತ್ತಿದ್ದಾರೆ ಮತ್ತು ಇಂದ್ರ ದೇವನನ್ನು ಮೆಚ್ಚಿಸಲು ಮಡೆ ಸ್ನಾನವನ್ನು ಮಾಡುವುದು ಅನಾದಿ ಕಾಲದ ಸಂಪ್ರದಾಯವಾಗಿದೆ. ನಗರದ ಮಹಿಳೆಯರು ಮಳೆಗಾಗಿ ನಮಗೆ ಮಣ್ಣಿನ ಸ್ನಾನ ಮಾಡಿಸಿದರು, ”ಎಂದು ಶಾಸಕ ಕನೋಜಿಯಾ ಹೇಳಿದರು.
Big news: ಮಹಾರಾಷ್ಟ್ರದ 7 ವರ್ಷದ ಬಾಲಕಿಯಲ್ಲಿ ʻಝಿಕಾʼ ವೈರಸ್ ಪತ್ತೆ… ಆರೋಗ್ಯ ಇಲಾಖೆಯಿಂದ ಮುನ್ನೆಚ್ಚರಿಕಾ ಕ್ರಮ