ಹೈದರಾಬಾದ್: ಹೈದರಾಬಾದ್ನಲ್ಲಿ ಶುಕ್ರವಾರ ನಡೆದ ರ್ಯಾಲಿ ವೇಳೆ ಕೆಸಿಆರ್ ಸ್ಕಾರ್ಫ್ ಧರಿಸಿದ್ದ ವ್ಯಕ್ತಿಯೊಬ್ಬ ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ಭಾಷಣಕ್ಕೆ ಅಡ್ಡಿಯುಂಟು ಮಾಡಿದ್ದಾನೆ. ರ್ಯಾಲಿಯಲ್ಲಿ ಮೈಕ್ ಅನ್ನು ಅದರ ಸ್ಟ್ಯಾಂಡ್ನಿಂದ ಕತ್ತು ಕೆಳಕ್ಕೆ ತಿರುಗಿಸಿ ಶರ್ಮಾಗೆ ಏನನ್ನೋ ಹೇಳುತ್ತಿರುವುದು ಕಂಡು ಬಂದಿದೆ.
ಶರ್ಮಾ ಅವರು ಗಣೇಶ ಹಬ್ಬ ಮತ್ತು ಇತರ ಕಾರ್ಯಕ್ರಮಗಳಲ್ಲಿ ಭಾಗಿಯಾಗಲು ಅಸ್ಸೋಂ ಸಿಎಂ ಹಿಮಂತ್ ಬಿಸ್ವಾ ಶರ್ಮಾ ಹೈದರಾಬಾದ್ಗೆ ಭೇಟಿ ನೀಡಿದ್ದಾರೆ.
ನಿನ್ನೆ ನಡೆದ ರ್ಯಾಲಿ ವೇಳೆ ಅಪರಿಚಿತ ವ್ಯಕ್ತಿ ಶರ್ಮಾ ಅವರೊಂದಿಗೆ ಮಾತನಾಡಲು ಯತ್ನಿಸುತ್ತಿರುವುದು ಕಂಡುಬಂದಿದೆ. ಮುಂಜಾನೆ ನಗರದ ಪ್ರಮುಖ ದೇವಸ್ಥಾನವೊಂದಕ್ಕೆ ಭೇಟಿ ನೀಡಿದ ಅಸ್ಸಾಂ ಸಿಎಂ, ತೆಲಂಗಾಣ ಸಿಎಂ ವಿರುದ್ಧ ವಾಗ್ದಾಳಿ ನಡೆಸಿದ್ದರು. ಅವರ ಮಾತಿಗೆ ಅಪರಿಚಿತ ವ್ಯಕ್ತಿ ಆಕ್ಷೇಪ ವ್ಯಕ್ತಪಡಿಸಿದ್ದಾನೆ ಎಂದು ತಿಳಿದು ಬಂದಿದೆ. ಈ ಸಂದರ್ಭದಲ್ಲಿ ಅವನ ಮಾತು ಅರ್ಥವಾಗದೇ ಶರ್ಮಾ ಮುಗುಳ್ನಕ್ಕಿದ್ದಾರೆ. ಈ ವೇಳೆ ಅಲ್ಲಿದ್ದ ಭದ್ರತಾ ಸಿಬ್ಬಂದಿ ವೇದಿಕೆಯಿಂದ ಆವ್ಯಕ್ತಿಯನ್ನು ಕೆಳಗಿಳಿಸಿದ್ದಾರೆ.
#WATCH | Telangana: A man tried to confront Assam CM Himanta Biswa Sarma by dismantling the mike on a stage at a rally in Hyderabad pic.twitter.com/HFX0RqVEd8
— ANI (@ANI) September 9, 2022
BIGG NEWS : ರಾಜ್ಯದ ಜನಸಾಮಾನ್ಯರಿಗೆ ಮತ್ತೊಂದು ಶಾಕ್ : ಅಕ್ಕಿ ಬೆಲೆ ಕೆಜಿಗೆ 8-10 ರೂ. ಏರಿಕೆ
ಇಂಡಿಯಾ ಗೇಟ್ ಮೇಲೆ ʻನೇತಾಜಿʼಯ ಜೀವನ, ಪರಂಪರೆ ಪ್ರದರ್ಶನ… ಇಲ್ಲಿದೆ ಡ್ರೋನ್ಗಳ ಅದ್ಭುತ ಝಲಕ್
BIGG NEWS : ಕರ್ನಾಟಕದಲ್ಲಿ 51 ವರ್ಷದ ಬಳಿಕ ದಾಖಲೆಯ ಮಳೆ : ಜುಲೈನಲ್ಲಿ ಸುರಿದಿದ್ದೆಷ್ಟು ಗೊತ್ತಾ.?