ಉತ್ತರ ಪ್ರದೇಶ : ಶಾಲಾ ಬಾಲಕನೋರ್ವನನ್ನು ಕಾರೊಂದು ಒಂದು ಕಿಮೀ ಎಳೆ ಎಳೆದೊಯ್ದ ಘಟನೆ ಉತ್ತರಪ್ರದೇಶದ ಹರ್ದೋಯಿ ಎಂಬಲ್ಲಿ ನಡೆದಿದೆ. ಘಟನೆ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಸಂತ್ರಸ್ತ ವಿದ್ಯಾರ್ಥಿಯನ್ನು 9ನೇ ತರಗತಿಯನ್ನು ಓದುತ್ತಿರುವ ಕೇತನ್ ಕುಮಾರ್ ಎಂದು ಗುರುತಿಸಲಾಗಿದೆ. ಈತ ಶುಕ್ರವಾರ ಸಂಜೆ ಕೋಚಿಂಗ್ ಕ್ಲಾಸ್ಗೆ ಹೋಗುತ್ತಿದ್ದಾಗ ಬಿಳಿ ಕಾರೊಂದು ಬಾಲಕನ ಸೈಕಲ್ಗೆ ಡಿಕ್ಕಿ ಹೊಡೆದಿತ್ತು. ಬಾಲಕನ ಕಾಲು ಕಾರಿನ ಹಿಂಭಾಗದಲ್ಲಿ ಸಿಕ್ಕಿಹಾಕಿಕೊಂಡಿತ್ತು.
#Hardoi में सड़क पर साइकिल सवार छात्र को घसीटते हुए ले गई कार @Manchh_Official pic.twitter.com/6jkBTuGkOS
— पत्रकार Rishabh Kant (@KantChhabra) January 7, 2023
ಇದನ್ನು ತಿಳಿದ ಕಾರಿನ ಚಾಲಕ ಸ್ಥಳದಿಂದ ಪರಾರಿಯಾಗಲೂ ಕಾರನ್ನು ವೇಗವಾಗಿ ಚಲಾಹಿಸಿದ್ದನು. ಸ್ಥಳೀಯರು ಕಾರು ನಿಲ್ಲಿಸುವಂತೆ ಹೇಳಿದರೂ ಚಾಲಕ ಕಾರಿನ ಜೊತೆಗೆ ಬಾಲಕನನ್ನು ಎಳೆದುಕೊಂಡು ಹೋಗಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನು ಕಾರು ಜನನಿಬಿಡ ಮಾರುಕಟ್ಟೆ ಪ್ರದೇಶವನ್ನು ತಲುಪುತ್ತಿದ್ದಂತೆ ಸ್ಥಳೀಯರು ಕಾರನ್ನು ನಿಲ್ಲಿಸಿ, ಹುಡುಗನನ್ನು ರಕ್ಷಿಸಿದ್ದಾರೆ. ಘಟನೆಯಿಂದ ಕೋಪಗೊಂಡು ಜನರು ಚಾಲಕನನ್ನು ಹಿಡಿದು ದೊಣ್ಣೆಗಳಿಂದ ಥಳಿಸಿದ್ದು, ಕಾರಿಗೂ ಹಾನಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಘಟನೆಯಲ್ಲಿ ಗಾಯಗೊಂಡು ಬಾಲಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಇತ್ತ ಪೊಲೀಸರು ಘಟನೆಗೆ ಕಾರಣನಾದ ಕಾರು ಚಾಲಕನನ್ನು ಬಂಧಿಸಿದ್ದಾರೆ.
ಇದೇ ರೀತಿಯ ಘಟನೆಗಳು ಒಂದರ ಮೇಲೊಂದರಂತೆ ವರದಿಯಾಗುತ್ತಿವೆ. ಇದು ಮೂರನೇ ಘಟನೆಯಾಗಿದೆ. ಎರಡು ದಿನಗಳ ಹಿಂದೆ, ನೋಯ್ಡಾದಲ್ಲಿ ಡೆಲಿವರಿ ಏಜೆಂಟ್ ಒಬ್ಬರು ಅವರ ದ್ವಿಚಕ್ರ ವಾಹನಕ್ಕೆ ಕಾರು ಡಿಕ್ಕಿ ಹೊಡೆದು ಸುಮಾರು 500 ಮೀಟರ್ ಎಳೆದಿದ್ದರಿಂದ ಸಾವನ್ನಪ್ಪಿದ್ದರು.
ಅದಕ್ಕೂ ಮುನ್ನಾ ದೆಹಲಿಯ 20 ವರ್ಷದ ಯುವತಿಯೊಬ್ಬಳ ಸ್ಕೂಟಿ ಡಿಕ್ಕಿ ಹೊಡೆದ ಕಾರಿನಡಿಯಲ್ಲಿ 13 ಕಿಲೋಮೀಟರ್ ಎಳೆದೊಯ್ದು ಸಾವನ್ನಪ್ಪಿದ್ದಳು.
BREAKING NEWS: ಹೊಸ ಕುಮಾರಕೃಪಾ ಅತಿಥಿಗೃಹದ ವ್ಯವಸ್ಥಾಪಕರಾಗಿ ಕಿರಣ್ ಕುಮಾರ್ ನೇಮಕ
ಮಹಿಳೆಯರೇ, ‘ಪಿರಿಯಡ್ಸ್’ ಸಮಯದಲ್ಲಿ ದೇವಸ್ಥಾನಕ್ಕೆ ಯಾಕೆ ಹೋಗಬಾರದು ಗೊತ್ತಾ.? ಇಲ್ಲಿದೆ ಮಾಹಿತಿ