ಬಿಹಾರ: ರಾಜಧಾನಿ ಪಾಟ್ನಾದಲ್ಲಿ ಶಿಕ್ಷಕರ ಹುದ್ದೆಗಳ ನೇಮಕಾತಿ ವಿಳಂಬವನ್ನು ಪ್ರತಿಭಟಿಸಿ ನೂರಾರು ಶಿಕ್ಷಕರ ಹುದ್ದೆಗಳ ಆಕಾಂಕ್ಷಿಗಳ ಮೇಲೆ ಪೊಲೀಸರು ಸೋಮವಾರ ಲಾಠಿಚಾರ್ಜ್ ಮಾಡಿದ್ದಾರೆ. ಪ್ರತಿಭಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಧಿಕಾರಿಯೊಬ್ಬ ಪ್ರತಿಭಟನಾಕಾರನು ನೆಲದ ಮೇಲೆ ಮಲಗಿರುವಾಗ ಅವನನ್ನು ಹಿಗ್ಗಾಮುಗ್ಗ ಥಳಿಸಿದ್ದಾರೆ.
ಪಾಟ್ನಾದ ಡಾಕ್ ಬಾಂಗ್ಲಾ ಚೌರಾಹಾದಲ್ಲಿ ಪ್ರತಿಭಟನೆ ನಡೆಯುತ್ತಿತ್ತು. ವೀಡಿಯೊದಲ್ಲಿ, ಪಾಟ್ನಾದ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಕೆಕೆ ಸಿಂಗ್ ಎಂದು ಗುರುತಿಸಲಾದ ಅಧಿಕಾರಿ ನೆಲದ ಮೇಲೆ ಮಲಗಿರುವ ಮತ್ತು ಕೈಯಲ್ಲಿ ರಾಷ್ಟ್ರಧ್ವಜವನ್ನು ಹಿಡಿದಿರುವ ವ್ಯಕ್ತಿಯನ್ನು ಥಳಿಸುತ್ತಿರುವುದನ್ನು ಕಾಣಬಹುದು. ನಂತರ ಧ್ವಜವನ್ನು ಪೊಲೀಸರು ಕಸಿದುಕೊಳ್ಳುತ್ತಾರೆ.
ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯ ಪೊಲೀಸ್ ಪಡೆಗಳು ಪ್ರತಿಭಟನಾಕಾರರನ್ನು ಚದುರಿಸಲು ಜಲಫಿರಂಗಿಗಳನ್ನು ಬಳಸಿದರು. ಸಿಟಿಇಟಿ, ಬಿಟಿಇಟಿ ಉತ್ತೀರ್ಣರಾದ ಅಭ್ಯರ್ಥಿಗಳು ಪ್ರಾಥಮಿಕ ಶಿಕ್ಷಕರ ನೇಮಕಾತಿ ಅಧಿಸೂಚನೆ ಹೊರಡಿಸುವಂತೆ ಒತ್ತಾಯಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
20 लाख नौकरियाँ देने की बात करने वाले नीतीश कुमार की पुलिस ने पटना में प्रदर्शन कर रहे शिक्षक अभ्यर्थी को अमानवीय तरीके से मारा। बिहार की सरकार और उसके अधिकारी ने न सिर्फ शिक्षक के चेहरा को लहूलुहान कर दिया बल्कि तिरंगे का भी अपमान किया।
यही है जेडीयू-राजद सरकार का असली चेहरा… pic.twitter.com/7r75xHoOYU
— Amit Malviya (@amitmalviya) August 22, 2022