ಚಂಡೀಗಢ: ಹರಿಯಾಣದಲ್ಲಿ ರೈಲು ಹಳಿ ದಾಟುತ್ತಿದ್ದ ವೇಳೆ ರೈಲಿಗೆ ಡಿಕ್ಕಿ ಹೊಡೆದು ವ್ಯಕ್ತಿಯೊಬ್ಬ ಮೃತಪಟ್ಟಿರುವ ಘಟನೆ ನಡೆದಿದೆ. ಅಪಘಾತದ ದೃಶ್ಯಗಳು ಕ್ಯಾಮರಾದಲ್ಲಿ ಸೆರೆಯಾಗಿವೆ. ಡಿಕ್ಕಿಯ ರಭಸಕ್ಕೆ ವ್ಯಕ್ತಿ ಹಾರಿ ಹೋಗುವುದನ್ನು ನೋಡಬಹುದು.
ಮೃತನನ್ನು ಮಹೇಂದ್ರಗಢ ಜಿಲ್ಲೆಯ ಬವಾನಾ ಗ್ರಾಮದ ಗಡಿ ಭದ್ರತಾ ಪಡೆ (ಬಿಎಸ್ಎಫ್) ಜವಾನ್ ವೀರ್ ಸಿಂಗ್ ಎಂದು ಗುರುತಿಸಲಾಗಿದೆ. ವೀರ್ ಸಿಂಗ್ ಜಿಲ್ಲೆಯ ಮಜ್ರಾ ಖುರ್ದ್ ಗ್ರಾಮದಲ್ಲಿರುವ ತನ್ನ ಸಹೋದರಿಯನ್ನು ಭೇಟಿ ಮಾಡಲು ತೆರಳುತ್ತಿದ್ದಾಗ ರೈಲು ಹಳಿ ಕ್ರಾಸ್ ಮಾಡಲು ಮುಂದಾಗಿದ್ದಾನೆ. ಈ ವೇಳೆ ವೇಗವಾಗಿ ಬಂದ ರೈಲು ಆತನಿಗೆ ಡಿಕ್ಕಿಹೊಡೆದು ಮುಂದೆ ಸಾಗಿದೆ. ಈ ವೇಳೆ ಸಿಂಗ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಸುದ್ದಿ ತಿಳಿಯುತ್ತಿದ್ದಂತೆಯೇ ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೃತದೇಹವನ್ನು ಮಹೇಂದ್ರಗಢ ಆಸ್ಪತ್ರೆಗೆ ರವಾನಿಸಿದ್ದಾರೆ. ಮೃತದೇಹವನ್ನು ಮಹೇಂದ್ರಗಢ ಆಸ್ಪತ್ರೆಗೆ ರವಾನಿಸಿದ್ದಾರೆ.
2001 ರಲ್ಲಿ ಗಡಿ ಪಡೆಗೆ ದಾಖಲಾಗಿದ್ದ ಮತ್ತು ಬಿಕಾನೇರ್ನಲ್ಲಿ ನಿಯೋಜಿತರಾಗಿದ್ದ ವೀರ್ ಸಿಂಗ್ ಕೆಲವು ದಿನಗಳ ರಜೆಯ ಮೇಲೆ ಮನೆಗೆ ಬಂದಿದ್ದರು. ಅವರ ಸಾವಿನ ಬಗ್ಗೆ ಅವರ ಬೆಟಾಲಿಯನ್ಗೆ ಮಾಹಿತಿ ನೀಡಲಾಗಿದೆ.
Big news: ರಾಜ್ಯಸಭಾ ಸದಸ್ಯೆಯಾಗಿ ಪ್ರಮಾಣ ವಚನ ಸ್ವೀಕರಿಸಿದ ʻಪಿಟಿ ಉಷಾʼ
BIGG NEWS : ಸೇನೆ ಸೇರಬಯಸುವ ಯುವಕರೇ ಗಮನಿಸಿ : ಅಗ್ನಿಪಥ್ ಯೋಜನೆಯಡಿ `ಅಗ್ನಿವೀರ್’ ನೇಮಕಾತಿಗೆ ಅರ್ಜಿ ಆಹ್ವಾನ