ಜಮ್ಮು: ಸಾವು ಯಾವ ಕ್ಷಣದಲ್ಲಾದ್ರೂ ಸಂಭವಿಸಬಹುದು. ಇದಕ್ಕೆ ಇಂತದ್ದೇ ಟೈಮ್ ಅನ್ನೋದಿಲ್ಲ. ಇದಕ್ಕೆ ನಿದರ್ಶನವೆಂಬಂತೆ ಗಣೇಶ ಉತ್ಸವದಲ್ಲಿ ನೃತ್ಯ ಪ್ರದರ್ಶನದ ವೇಳೆ ವೇದಿಕೆಯ ಮೇಲೆ ಕುಸಿದುಬಿದ್ದು ಕಲಾವಿದರೊಬ್ಬರು ಸಾವನ್ನಪ್ಪಿರುವ ಘಟನೆ ಜಮ್ಮವಿನಲ್ಲಿ ನಡೆದಿದೆ.
20 ವರ್ಷದ ಯೋಗೇಶ್ ಗುಪ್ತಾ ಎಂಬ ವ್ಯಕ್ತಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ ಎಂದು ಮೂಲಗಳು ತಿಳಿಸಿವೆ.
एक और हादसा।
हंसते-गाते-नाचते हुए एक और मौत की LIVE तस्वीर। यह बहुत चिंताजनक ट्रेंड है। अब इसपर बहुत गंभीरता से व्यापक तरीक़े से बात होनी चाहये pic.twitter.com/FGPxQvWHit
— Narendra nath mishra (@iamnarendranath) September 8, 2022
ಇದೀಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ, ಯೋಗೇಶ್ ಗುಪ್ತಾ ಪಾರ್ವತಿ ದೇವಿಯ ವೇಷ ಧರಿಸಿ ವೇದಿಕೆಯಲ್ಲಿ ನೃತ್ಯ ಪ್ರದರ್ಶನ ನೀಡುತ್ತಿರುವುದನ್ನು ನೋಡಬಹುದು. ಈ ವೇಳೆ ಕೆಳಗೆ ಕುಳಿತ ಗುಪ್ತಾ ಹಾಗೆಯೇ ಮಗಲಿದ್ದಾರೆ. ಆದ್ರೆ, ಇದನ್ನರಿಯದ ಪ್ರೇಕ್ಷಕರು ಎಷ್ಟೊತ್ತಾದ್ರೂ ಆತನ ಬಳಿ ಹೋಗದೇ ಹಾಗೇಯೇ ವೀಕ್ಷಿಸುತ್ತಿದ್ದರು. ನಂತ್ರ, ಶಿವನ ವೇಷಧಾರಿ ಆತನ ಬಳಿ ಹೋಗಿ ಪರೀಕ್ಷಿಸಿದಾಗ ಗುಪ್ತಾ ಪ್ರಜ್ಞಾಹೀನರಾಗಿದ್ದ. ಈ ವೇಳೆ ಕೂಡಲೇ ಆತನನ್ನು ಆಸ್ಪತ್ರೆಗೆ ಕರೆದೊಯ್ದರು. ಆದ್ರೆ, ಅಷ್ಟರಲ್ಲಾಗಲೇ ಗುಪ್ತಾ ಕೊನೆಯುಸಿರೆಳೆದಿದ್ದ.
BIGG NEWS: ಡೈಲಿ ಕಂಠಪೂರ್ತಿ ಕುಡಿದು ಮಕ್ಕಳಿಗೆ ಪಾಠ ಮಾಡುತ್ತಿದ್ದ ಶಿಕ್ಷಕಿ; ಬೇಸತ್ತ ಪೋಷಕರು ಮಾಡಿದ್ದೇನು ಗೊತ್ತಾ?
BIGG NEWS: ಇಂದು ಬೆಂಗಳೂರಿನಲ್ಲಿ ಗುಡುಗು ಸಹಿತ ಭಾರಿ ಮಳೆ; 18 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಣೆ