ಕೊಲ್ಕತ: ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯಲ್ಲಿ ಸಲಿಂಗಕಾಮಿಗಳೆಂದು ಶಂಕಿಸಲಾದ ಇಬ್ಬರು ಮಹಿಳೆಯರನ್ನು ಮಹಿಳಾ ಸಂಬಂಧಿಕರೊಬ್ಬರು ಅಮಾನುಷವಾಗಿ ಥಳಿಸಿ, ಅವರ ಗುಪ್ತಾಂಗಗಳನ್ನು ಸುಟ್ಟುಹಾಕಿರುವ ಘಟನೆ ನಡೆದಿದೆ.
ತಮ್ಮ ಸಂಬಂಧಿಕರಿಬ್ಬರ ಮೇಲೆ ಕಬ್ಬಿಣದ ರಾಡ್ ಗಳಿಂದ ಹಲ್ಲೆ ನಡೆಸಿ, ಅವರನ್ನು ಸಲಿಂಗಕಾಮಿಗಳೆಂದು ಬ್ರಾಂಡ್ ಮಾಡಿದವರ ವಿರುದ್ಧ ಸಂತ್ರಸ್ತರು ಸಾಗರ್ ಧಿಘಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ನಂತರ ಈ ಘಟನೆ ಸೋಮವಾರ ಬೆಳಕಿಗೆ ಬಂದಿದೆ. ಮತ್ತೊಬ್ಬ ಸ್ಥಳೀಯರ ಸಹಾಯದಿಂದ ಆರೋಪಿಗಳು ಅತ್ಯಾಚಾರಕ್ಕೆ ಯತ್ನಿಸಿದ್ದಾರೆ ಎಂದು ಪೊಲೀಸ್ ಮೂಲಗಳು ಖಾಸಗಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.