ಮಾಸ್ಕೋ: ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಹತ್ತು ಅಥವಾ ಅದಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುವ ತಾಯಂದಿರಿಗೆ ಸೋವಿಯತ್ ಯುಗದ ‘ಮದರ್ ಹೀರೋಯಿನ್’ ಪ್ರಶಸ್ತಿಯನ್ನು ಪುನರುಜ್ಜೀವನಗೊಳಿಸಿದ್ದಾರೆ. ರಷ್ಯಾ-ಉಕ್ರೇನ್ ಸಂಘರ್ಷದ ಸಮಯದಲ್ಲಿ ಮಾಸ್ಕೋವು ಜನಸಂಖ್ಯಾ ಸಂದಿಗ್ಧತೆಯನ್ನು ಎದುರಿಸುತ್ತಿರುವಾಗ ಈ ಆದೇಶ ಹೊರ ಬಂದಿದೆ.
ಸೋವಿಯತ್ ಒಕ್ಕೂಟದಲ್ಲಿ, ಮದರ್ ಹೀರೋಯಿನ್ ಎಂಬುದು ಒಂದು ದೊಡ್ಡ ಕುಟುಂಬವನ್ನು ಹೆರಲು ಮತ್ತು ಬೆಳೆಸಲು ನೀಡಲಾದ ಗೌರವ ಬಿರುದು, ಅಂದರೆ 10 ಅಥವಾ ಅದಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದುವುದು ಎಂದರ್ಥ. ವರದಿಗಳ ಪ್ರಕಾರ, ಪ್ರಶಸ್ತಿಗೆ ಅರ್ಹರಾಗಿರುವ ತಾಯಂದಿರಿಗೆ ತಮ್ಮ ಹತ್ತನೇ ಜೀವಂತ ಮಗುವಿಗೆ ಒಂದು ವರ್ಷ ತುಂಬಿದ ಕೂಡಲೇ 1 ಮಿಲಿಯನ್ ರೂಬಲ್ ಗಳ ಅಂದರೆ $ 16,000 ಪಾವತಿಸಲಾಗುವುದು ಎನ್ನಲಾಗಿದೆ.
“ಮದರ್ ಹಿರೋಯಿನ್ ಎಂಬ ಬಿರುದನ್ನು ಸ್ಥಾಪಿಸಲು, ರಷ್ಯನ್ ಒಕ್ಕೂಟದ ನಾಗರಿಕರಾಗಿರುವ, ರಷ್ಯನ್ ಒಕ್ಕೂಟದ ನಾಗರಿಕರಾದ ಹತ್ತು ಅಥವಾ ಅದಕ್ಕಿಂತ ಹೆಚ್ಚು ಮಕ್ಕಳಿಗೆ ಜನ್ಮ ನೀಡಿದ ಮತ್ತು ಬೆಳೆಸಿದ ತಾಯಿಗೆ ನೀಡಲಾಗುವುದು” ಎಂದು ಸರ್ಕಾರದ ಅಧಿಕೃತ ಆದೇಶದಲ್ಲಿ ಉಲ್ಲೇಖಿಸಲಾಗಿದೆ.
ಅರ್ಹ ಮಹಿಳೆಯರು ತಮ್ಮ ಹತ್ತನೇ ಜೀವಂತ ಮಗುವಿಗೆ ಒಂದು ವರ್ಷ ವಯಸ್ಸಾದ ಕೂಡಲೇ ಬಹುಮಾನವನ್ನು ಪಡೆಯುತ್ತಾರೆ ಎಂದು ವರದಿಗಳು ಉಲ್ಲೇಖಿಸುತ್ತವೆ. ಕಾನೂನಿನ ಪ್ರಕಾರ, ಸಂಘರ್ಷ, ಭಯೋತ್ಪಾದಕ ಘಟನೆ ಅಥವಾ ತುರ್ತು ಪರಿಸ್ಥಿತಿಯಲ್ಲಿ ಮಗುವನ್ನು ಕಳೆದುಕೊಂಡರೆ ಮಹಿಳೆಯರು ಇನ್ನೂ ಬಹುಮಾನಕ್ಕೆ ಅರ್ಹರಾಗಿರುತ್ತಾರೆ.
Putin has just introduced a new Russian state award – “Hero-Mother.”
You get 1mn rubles ($16,000) for having ten children once the tenth is a year old – *if* all nine others are still alive then. Not, uh, as easy as it soundshttps://t.co/menqz7pSM7
— max seddon (@maxseddon) August 15, 2022