ಕೆಎನ್ಎನ್ಡಿಜಿಟಲ್ಡೆಸ್ಕ್: ಬೆವರು ಎಂದಾಕ್ಷಣ ಸಾಮಾನ್ಯವಾಗಿ ಎಲ್ಲರೂ ಮೂಗು ಮುಚ್ಚಿಕೊಳ್ಳುತ್ತೇವೆ ಅಲ್ವಾ? ಆದ್ರೆ ಇಲೊಬ್ಬ ರೂಪದರ್ಶಿ ಬೆವರನ್ನು ಮಾರಿ ಹಣ ಗಳಿಸುತ್ತಿದ್ದಾಳೆ ಅಂದ್ರೆ ನೀವು ಖಂಡಿತ ಶಾಕ್ ಆಗ್ತೀರಾ….
ಐದು ವರ್ಷಗಳ ಹಿಂದೆ ನನ್ನ ಕಂಕುಳ ಕೂದಲನ್ನು ಬೆಳೆಸಲು ಪ್ರಾರಂಭಿಸಿದಾಗ ನಾನು ಡಿಯೋಡ್ರೆಂಟ್ ಅನ್ನು ತ್ಯಜಿಸಿದ್ದೇನೆ ಎಂದು ಯುಕೆಯ ವೋರ್ಸೆಸ್ಟರ್ನ ಓನ್ಲಿಫಾನ್ಸ್ ರೂಪದರ್ಶಿ ಫೆನೆಲ್ಲಾ ಫಾಕ್ಸ್ ಹೇಳಿದ್ದಾರೆ. ಇದೇ ವೇಳೆ ನನ್ನ ಕಂಕುಳುಗಳ ನೈಸರ್ಗಿಕ ವಾಸನೆಯನ್ನು ನಾನು ಪ್ರೀತಿಸುತ್ತೇನೆ ಅಂತ ಆಕೆ ಹೇಳಿದ್ದಾಳೆ. ಪುರುಷರ ನಿರೀಕ್ಷೆಗಳನ್ನು ವಿರೋಧಿಸಿ ಫೆನೆಲ್ಲಾ 2017 ರಲ್ಲಿ ತನ್ನ ಕಂಕುಳನ್ನು ಕ್ಷೌರ ಮಾಡುವುದನ್ನು ನಿಲ್ಲಿಸಿದ್ದಾಳೆ, ಬರೋಬ್ಬರಿ 300,000 ಡಾಲರ್. ಅಂದ್ರೆ ಭಾರತದ ರೂಪಾಯಿಗೆ ಹೋಲಿಕೆ ಮಾಡಿದ್ರೆ 2.88 ಕೋಟಿ ರೂಪಾಯಿ ದುಡ್ಡು ದುಡಿಯುತ್ತಿದ್ದಾಳೆ.
“ನನ್ನ ಕಂಕುಳ ಕೂದಲು ಉದ್ದ ಮತ್ತು ಬೆವರನ್ನು ನನ್ನ ಬಹಳಷ್ಟು ಅಭಿಮಾನಿಗಳು ಇಷ್ಟಪಡುತ್ತಾರೆ. ಅವರು ನಾನು ಬೆವರುವುದನ್ನು ನೋಡಲು ಇಷ್ಟಪಡುತ್ತಾರೆ ಎನ್ನುತ್ತಾಳೆ. “ನನ್ನ ಕಂಕುಳ ಕೂದಲನ್ನು ತೆಗೆದುಹಾಕಿದರೆ ನನ್ನ ಬಹಳಷ್ಟು ಅಭಿಮಾನಿಗಳು ನನ್ನ ಮೇಲೆ ಕೋಪಗೊಳ್ಳುತ್ತಾರೆ ಎಂದು ನಾನು ಭಾವಿಸುತ್ತೇನೆ” ಎಂದು ಫೆನೆಲ್ಲಾ ಹೇಳಿದರು.
BREAKING NEWS: ಉತ್ತರ ಇರಾಕ್ ನಲ್ಲಿ ಟರ್ಕಿ ದಾಳಿ: 8 ಪ್ರವಾಸಿಗರ ದುರ್ಮರಣ