*ಉಮಾ
ಕೆಎನ್ಎನ್ಡಿಜಿಟಲ್ಡೆಸ್ಕ್: ನೀವು ಜಗ್ಗೇಶ್-ದೊಡ್ಡಣ್ಣ ಅಭಿನಯದ ಕಳ್ಳ ಮಳ್ಳ ಸಿನಿಮಾ ನೋಡಿದ್ರೆ ಆ ಸಿನಿಮಾದಲ್ಲಿ ಅಪ್ಪ ಮಕ್ಕಳು ಇಬ್ಬರು ಕಳ್ಳರು ಸಿನಿಮಾದಲ್ಲಿ ಅಪ್ಪ ಮಕ್ಕಳು ಜನರನ್ನು ಹೇಗೆಲ್ಲ ಯಾಮಾರಿಸಿ ಕಳ್ಳತನಕ ಮಾಡ್ತಾರೆ ಅನ್ನುವುದನ್ನು ನೋಡಬಹುದು ಸಿನಿಮಾದಲ್ಲಿ ಅಪ್ಪ ಮಗನಿಗೆ ಕಳ್ಳತನ ಮಾಡುವುದನ್ನು ಹೇಳಿಕೊಡುತ್ತಾನೆ. ಥೇಟ್ ಅದೇ ತೆರನಾದ ಘಟನೆಯೊಂದು ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದಿದೆ.
ಹೌದು, ಯಾಸೀನ್ ಖಾನ್ ಆಲಿಯಾಸ್ ಚೋರ್ ಇಮ್ರಾನ್ ಎನ್ನುವಾತ ಈಗ ಕಳ್ಳತನದ ಕೇಸಿನಲ್ಲಿ ಸಿಕ್ಕಿ ಬಿದ್ದಿರುವ ಘಟನೆ ನಡೆದಿದೆ. ಯಾಸೀನ್ ತಂದೆ ಏಜಾಜ್ ಖಾನ್ ಆಲಿಯಾಸ್ ದಾದಾಪೀರ ಏಜಾಜ್ ಖಾನ್ ತನ್ನ ಮಗ ಯಾಸೀನ್ಗೆ ಪೊಲೀಸರ ಕಾರ್ಯಾಚರಣೆಗಳ ಬಗ್ಗೆ ತಿಳಿಸಿದ್ದನಂತೆ, ಇದಲ್ಲದೇ ಯಾಸೀನ್ ಗೆ ಹೇಗೆಲ್ಲ ಕಳ್ಳತನ ಮಾಡಬೇಕು ಅನ್ನುವುದನ್ನು ಕೂಡ ತರಬೇತಿ ನೀಡಿದ್ದನಂತೆ. ಸದ್ಯ ಯಾಸೀನ್ ಖಾನ್ ಆಲಿಯಾಸ್ ಚೋರ್ ಇಮ್ರಾನ್ ಬಂಧಿತ ಆರೋಪಿಯಿಂದ 6 ಲಕ್ಷ ಮೌಲ್ಯದ 100 ಗ್ರಾಂ ಚಿನ್ನ, 2.5 ಕೆಜಿ ಬೆಳ್ಳಿ ಹಾಗೂ 39 ಸಾವಿರ ನಗದು ವಶಪಡಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.