ಕೆಎನ್ಎನ್ಡಿಜಿಟಲ್ ಡೆಸ್ಕ್ : ಆ್ಯಪಲ್ ಸಹ ಸಂಸ್ಥಾಪಕ, ದಿವಂಗತ ಸ್ಟೀವ್ ಜಾಬ್ಸ್ ಅವರ ಹಳೆಯ ಶೂಗಳು ಹರಾಜಿನಲ್ಲಿ ಅತಿ ಹೆಚ್ಚು ಬೆಲೆಗೆ ಮಾರಾಟವಾಗಿವೆ. ಭಾನುವಾರ ಅಮೆರಿಕದಲ್ಲಿ ಜೂಲಿಯನ್ ಕಂಪನಿ ನಡೆಸಿದ ಹರಾಜಿನಲ್ಲಿ ಸ್ಟೀವ್ ಜಾಬ್ಸ್ ಅವ್ರ ಬಿರ್ಕೆನ್ ಸ್ಟಾಕ್ ಕಂಪನಿಯ ಸ್ಯಾಂಡಲ್ 2,20,000 ಡಾಲರ್ (ನಮ್ಮ ಕರೆನ್ಸಿಯಲ್ಲಿ 1.78 ಕೋಟಿ ರೂ.) ಪಡೆದುಕೊಂಡಿದೆ. ಈ ಕಂದು ಸ್ಯಾಂಡಲ್ಗಳನ್ನು ಸ್ಟೀವ್ ಜಾಬ್ಸ್ 1970ರ ದಶಕದಲ್ಲಿ ಬಳಸುತ್ತಿದ್ದರು ಎಂದು ಹೇಳಲಾಗ್ತಿದೆ. ಇವುಗಳ ಮೇಲೆ ಸ್ಟೀವ್’ನ ಹೆಜ್ಜೆ ಗುರುತುಗಳಿದ್ದು, ಈ ಚಪ್ಪಲಿಗಳನ್ನ ಒಂದು ಕೋಟಿ ಎಪ್ಪತ್ತು ಲಕ್ಷಕ್ಕೆ ಹರಾಜಿನಲ್ಲಿ ಖರೀದಿಸಲಾಗಿದೆ.
ಸ್ಟೀವ್ ಜಾಬ್ಸ್ ಅವರ ಹಳೆಯ ಚಪ್ಪಲಿಗಳು ಹರಾಜಿನಲ್ಲಿ $ 60,000 ಗಳಿಸುವ ನಿರೀಕ್ಷೆಯಿತ್ತು. ಈ ಸ್ಯಾಂಡಲ್ಗಳ ನಾನ್ ಫಂಗಬಲ್ ಟೋಕನ್ ಬೆಲೆಯನ್ನ 2,18,750 ಡಾಲರ್ಗಳಿಗೆ ನಿಗದಿಪಡಿಸಲಾಗಿದೆ. ಆದ್ರೆ, ದಾಖಲೆಯ ಎರಡು ಲಕ್ಷದ ಇಪ್ಪತ್ತು ಸಾವಿರ ಡಾಲರ್ ಬಂದಿದ್ದು, ಈ ಚಪ್ಪಲಿಗಳನ್ನು ಖರೀದಿಸಿದವರ ವಿವರವನ್ನ ಜೂಲಿಯನ್ಸ್ ಕಂಪನಿ ಬಹಿರಂಗಪಡಿಸಿಲ್ಲ.
ಸ್ಟೀವ್ ಜಾಬ್ಸ್ ಮತ್ತು ಸ್ಟೀವ್ ವೋಜ್ನಿಯಾಕ್ 1976ರಲ್ಲಿ ಕ್ಯಾಲಿಫೋರ್ನಿಯಾದಲ್ಲಿ ಆಪಲ್ ಸ್ಥಾಪಿಸಿದರು. ಸ್ಟೀವ್ ಜಾಬ್ಸ್ 2011ರಲ್ಲಿ ಪ್ಯಾಂಕ್ರಿಯಾಟಿಕ್ ಕ್ಯಾನ್ಸರ್ನಿಂದ ನಿಧನರಾದರು. ಪ್ರಸ್ತುತ, ಟಿಮ್ ಕುಕ್ ಆಪಲ್ ಸಿಇಒ ಆಗಿದ್ದಾರೆ.
SHOCKING NEWS : ‘ಮತಾಂತರ’ವಾಗಲು ಒಪ್ಪದ ಪ್ರೇಯಸಿಯನ್ನ 4ನೇ ಮಹಡಿಯಿಂದ ತಳ್ಳಿ ಕೊಂದ ಪ್ರಿಯಕರ