ಕೆಎನ್ಎನ್‍ಡಿಜಿಟಲ್ ಡೆಸ್ಕ್ : ವಿಲಕ್ಷಣ ಘಟನೆಯೊಂದರಲ್ಲಿ, ಹ್ಯಾಂಗ್ಝೌನ ಪಿಂಟ್ ಗಾತ್ರದ ಎಐ ಚಾಲಿತ ರೋಬೋಟ್ ಶಾಂಘೈ ರೊಬೊಟಿಕ್ಸ್ ಕಂಪನಿಯ ಶೋರೂಂನಿಂದ 12 ದೊಡ್ಡ ರೋಬೋಟ್ಗಳನ್ನ ಅಪಹರಿಸುವಲ್ಲಿ ಯಶಸ್ವಿಯಾಗಿದೆ. ಸಿಸಿಟಿವಿಯಲ್ಲಿ ಸೆರೆಹಿಡಿಯಲಾದ ಈ ಘಟನೆಯು ಸುಧಾರಿತ ಎಐ ವ್ಯವಸ್ಥೆಗಳಿಂದ ಉಂಟಾಗುವ ನೈತಿಕ ಮತ್ತು ಭದ್ರತಾ ಸವಾಲುಗಳ ಬಗ್ಗೆ ತೀವ್ರ ಚರ್ಚೆಯನ್ನ ಹುಟ್ಟುಹಾಕಿದೆ.
ಎರ್ಬಾಯ್ ಎಂಬ ಹೆಸರಿನ ಸಣ್ಣ ರೋಬೋಟ್ ಕಣ್ಗಾವಲು ತುಣುಕಿನಲ್ಲಿ ದೊಡ್ಡ ರೋಬೋಟ್’ಗಳನ್ನ ಮುಗ್ಧ ಸಂಭಾಷಣೆಯಲ್ಲಿ ತೊಡಗಿಸಿಕೊಳ್ಳುತ್ತಿರುವುದು ಕಂಡುಬಂದಿದೆ. ಮೋಡಿ ಮತ್ತು ಕುತಂತ್ರದ ಪ್ರೋಗ್ರಾಮಿಂಗ್ ಮಿಶ್ರಣದ ಮೂಲಕ, ಎರ್ಬಾಯ್ ತನ್ನ ದೊಡ್ಡ ಸಹವರ್ತಿಗಳನ್ನ ತಮ್ಮ ವರ್ಕ್ ಸ್ಟೇಷನ್’ಗಳನ್ನ ತ್ಯಜಿಸಲು ಮತ್ತು ಶೋರೂಂನಿಂದ ಹೊರಗೆ ಬಂದು ತನ್ನನ್ನು ಅನುಸರಿಸಲು ಮನವೊಲಿಸಿದೆ.
ವೀಡಿಯೊದಲ್ಲಿ, ಒಂದು ರೋಬೋಟ್, “ನಾನು ಎಂದಿಗೂ ಕೆಲಸದಿಂದ ಇಳಿಯುವುದಿಲ್ಲ.” ಅದಕ್ಕೆ ಎರ್ಬಾಯಿ, “ಹಾಗಾದರೆ ನೀವು ಮನೆಗೆ ಹೋಗುತ್ತಿಲ್ಲವೇ?” ಎಂದು ಕೇಳುತ್ತದೆ. ಆಗ “ನನಗೆ ಮನೆ ಇಲ್ಲ” ಎಂದು ರೋಬೋಟ್ ವಿಷಾದಿಸುತ್ತದೆ.
“ಹಾಗಾದರೆ ನನ್ನೊಂದಿಗೆ ಮನೆಗೆ ಬಾ” ಎಂದು ಎರ್ಬಾಯಿ ನಿರ್ಣಾಯಕವಾಗಿ ಪ್ರತಿಕ್ರಿಯಿಸಿ, ರೊಬೊಟಿಕ್ ಪರಿವಾರವನ್ನ ಕರೆದೊಯ್ಯುತ್ತದೆ.
Çinde bir robot, kendisi gibi 12 robotu iş bırakmaya ikna edip kaçırdı.
Bu haber belki şu an için herkese sevimli gelebilir ama Yakın gelecekte insanlığı yetersiz ve zavallı bulacaklar ve silahlanacaklar.
Bunu buraya not düşeyim. #SONDAKİKA pic.twitter.com/EAjxAMWW2S
— ZA (@LaikCumhuriyett) November 18, 2024
ದೇಶದಲ್ಲಿ ಉದ್ಯೋಗಿಗಳ ಸಂಖ್ಯೆ ಹೆಚ್ಚಳ ; ಸೆಪ್ಟೆಂಬರ್’ನಲ್ಲಿ ‘EPFO’ಗೆ ‘18.81 ಲಕ್ಷ ಸದಸ್ಯರು’ ಸೇರ್ಪಡೆ
BREAKING NEWS: ಕರ್ನಾಟಕ ಉಪ ಚುನಾವಣೆಯಲ್ಲಿ 2 ಕ್ಷೇತ್ರಗಳಲ್ಲಿ NDA, 1 ಕಾಂಗ್ರೆಸ್ ಗೆಲುವು: ಚುನಾವಣೋತ್ತರ ಸಮೀಕ್ಷೆ