ನವದೆಹಲಿ: ಓಲಾ ಕಂಪನಿಯು ತನ್ನ ಸಾಫ್ಟ್ವೇರ್ ತಂಡದಲ್ಲಿ ಕೆಲಸ ಮಾಡುವ ೫೦೦ ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಬಹುದು ಎಂದು ಹೇಳಲಾಗುತ್ತಿದೆ.
ಕೆಲವು ಸಮಯದ ಹಿಂದೆ ಬಿಡುಗಡೆಯಾದ ಓಲಾ ಎಸ್ 1 ಪ್ರೊ ಎಲೆಕ್ಟ್ರಿಕ್ ಸ್ಕೂಟರ್ ನ ಮಾರಾಟವು ಕುಸಿಯುತ್ತಿರುವುದು ನೌಕರರ ವಜಾಕ್ಕೆ ಕಾರಣ ಎಂದು ಹೇಳಲಾಗುತ್ತಿದೆ. ಸಿಎನ್ಬಿಸಿ-ಟಿವಿ 18 ಗೆ ನಿಕಟವಾಗಿರುವ ಕೆಲವು ಮೂಲಗಳು ಓಲಾ ತನ್ನ ಸಾಫ್ಟ್ವೇರ್ ತಂಡದಿಂದ ಸುಮಾರು 500 ಉದ್ಯೋಗಿಗಳನ್ನು ವಜಾಗೊಳಿಸಲು ಯೋಜಿಸುತ್ತಿದೆ ಎಂದು ಖಾಸಗಿ ಮಾಧ್ಯಮಗಳು ವರದಿ ಮಾಡಿದೆ.
ಈ ನಡುವೆ , ಓಲಾ ಎಲೆಕ್ಟ್ರಿಕ್ ಭಾರತದ ಅತಿದೊಡ್ಡ ಇವಿ ಕಂಪನಿಯಾಗಿದೆ ಮತ್ತು ಕಂಪನಿಯು ಮಾರಾಟ, ವಾಹನಗಳು, ಬ್ಯಾಟರಿ ಆಟೋಮೇಷನ್, ಉತ್ಪಾದನೆ ಮತ್ತು ಸ್ವಾಯತ್ತ ಎಂಜಿನಿಯರಿಂಗ್ನಂತಹ ವಿಷಯಗಳ ಮೇಲೆ ಗಮನ ಹರಿಸಿದೆ ಎಂದು ಓಲಾ ವಕ್ತಾರರು ಹೇಳಿದ್ದು ಇದಲ್ಲದೆ, ಕಂಪನಿಯು ಸಾಫ್ಟ್ ವೇರ್ ಅಲ್ಲದ ಎಂಜಿನಿಯರಿಂಗ್ ಡೊಮೇನ್ ಮೇಲೆಯೂ ಗಮನ ಹರಿಸುತ್ತಿದೆ ಎನ್ನಲಾಗಿದೆ.