ಬೆಂಗಳೂರು: ನಗರದಲ್ಲಿ ಓಲಾ, ಆಟಾಟೋಪಕ್ಕೆ ಕೊನೆಗೂ ಬ್ರೇಕ್ ಬಿದ್ದಿದೆ. ಓಲಾ ಕೊನೆಗೂ ದರ ಇಳಿಕೆ ಮಾಡಿದೆ.
BIGG NEWS: ಮೂರುವರೆ ವರ್ಷಗಳ ಬಳಿಕ ಜೆಡಿಎಸ್ ಕಚೇರಿಗೆ ಬಂದ ಜಿಟಿ ದೇವೇಗೌಡ; ಸಿಹಿ ತಿನ್ನಿಸಿದ ಹೆಚ್ ಡಿಕೆ
ಕಿ.ಮೀಗೆ ಈಗ 35, 40 , 45 ರೂನಂತೆ ದರ ನಿಗದಿ ಮಾಡಲಾಗಿದೆ. ಈ ಹಿಂದೆ ಓಲಾ ಕಂಪನಿ ಕಿ.ಮೀ 100 ರೂ. ಪೀಕುತ್ತಿತ್ತು. ಈ ಹಿನ್ನೆಲೆಯಲ್ಲಿ ಓಲಾ ಹಾಗೂ ಊಬರ್ ದರ ಇಳಿಕೆಗೆ ಹೈಕೋರ್ಟ್ ಸೂಚನೆ ನೀಡಿತ್ತು. ಜೊತೆಗೆ ದರ ನಿಗದಿಗೆ ಸರ್ಕಾರಕ್ಕೆ ಸೂಚಿಸಿತ್ತು.
ಓಲಾ ಲೂಟಿಗೆ ವ್ಯಾಪಕ ಜನಾಕ್ರೋಶ ವ್ಯಕ್ತವಾಗಿತ್ತು. ಈ ಬೆನ್ನಲ್ಲೆ ಓಲಾ ಕಂಪನಿ ಕೊನೆಗೂ ಈಗ ದರ ಇಳಿಕೆ ಮಾಡಿದೆ. ಊಬರ್ ಕಳೆದ ವಾರವೇ ದರ ಇಳಿಕೆ ಮಾಡಿತ್ತು. ಆದರೆ ಓಲಾ ದರ ಇಳಿಕೆ ಮಾಡಿಲ್ಲ. ಈಗ ಓಲಾದಿಂದಲೂ ದರ ಇಳಿಕೆ ಮಾಡಿದೆ.