Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS : ರಾಜ್ಯದ ಹಲವು ಜಿಲ್ಲೆಗಳ ಅಧಿಕ ಉಷ್ಣಾಂಶ ದಾಖಲು : ಹವಾಮಾನ ಇಲಾಖೆ ಎಚ್ಚರಿಕೆ

11/04/2026 5:39 AM

BIG NEWS : ಪಿಗ್ಮಿ ಏಜೆಂಟ್‌ಗಳು ಬ್ಯಾಂಕ್ ನೌಕರರು, ಅವರ ಕಮೀಷನ್ ಮೇಲೆ ‘GST’ ವಿಧಿಸಲು ಸಾಧ್ಯವಿಲ್ಲ : ಹೈಕೋರ್ಟ್

11/04/2026 5:38 AM

ರಾಜ್ಯದ ಪೊಲೀಸ್ ಕಾನ್ಸ್‌ಟೇಬಲ್‌ಗಳಿಗೆ ಸಿಹಿಸುದ್ದಿ: ಇನ್ನು ಮುಂದೆ ಸೇವಾವಧಿಯಲ್ಲಿ ಸಿಗಲಿದೆ 3 ಬಡ್ತಿ!

11/04/2026 5:33 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » RTO ಕಚೇರಿಗಳಲ್ಲಿ ‘ಬ್ರೋಕರ್’ಗಳು ಕಾಣಿಸಿಕೊಂಡರೆ ಅಧಿಕಾರಿಗಳು ಸಸ್ಪೆಂಡ್: ಸಚಿವ ರಾಮಲಿಂಗಾ ರೆಡ್ಡಿ ಎಚ್ಚರಿಕೆ
KARNATAKA

RTO ಕಚೇರಿಗಳಲ್ಲಿ ‘ಬ್ರೋಕರ್’ಗಳು ಕಾಣಿಸಿಕೊಂಡರೆ ಅಧಿಕಾರಿಗಳು ಸಸ್ಪೆಂಡ್: ಸಚಿವ ರಾಮಲಿಂಗಾ ರೆಡ್ಡಿ ಎಚ್ಚರಿಕೆ

By kannadanewsnow0911/12/2025 6:04 AM

ಬೆಳಗಾವಿ ಸುವರ್ಣಸೌಧ: ಸಾರ್ವಜನಿಕರಿಗೆ ತೊಂದರೆಯಾಗುವಂತೆ ಮಧ್ಯವರ್ತಿಗಳ ಹಾವಳಿಗೆ ಅವಕಾಶ ನೀಡಿದರೆ ಆರ್‌ಟಿಒ ಕಚೇರಿಗಳ ಅಧಿಕಾರಿಗಳನ್ನೇ ಹೊಣೆಯಾಗಿಸಿ, ಶಿಸ್ತುಕ್ರಮಕ್ಕೆ ಗುರಿಪಡಿಸಲಾಗುವುದು ಎಂದು ಎಚ್ಚರಿಕೆ ನೀಡಿ ಕ್ರಮವಹಿಸಲಾಗುತ್ತಿದೆ. ಆರ್ ಟಿ ಓ ಕಚೇರಿಗಳಲ್ಲಿ ಬ್ರೋಕರ್ ಗಳು ಕಾಣಿಸಿಕೊಂಡರೇ ಅಧಿಕಾರಿಗಳನ್ನು ಸಸ್ಪೆಂಡ್ ಮಾಡುವುದಾಗಿ ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಎಚ್ಚರಿಸಿದ್ದಾರೆ.

ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ವಿಧಾನ ಪರಿಷತ್ ಸದಸ್ಯರಾದ ಡಾ.ಉಮಾಶ್ರೀ ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿ ಅವರ ಉತ್ತರಿಸಿದರು.

ಆರ್‌ಟಿಒ ಕಚೇರಿಗಳಲ್ಲಿ ಶಿಸ್ತು ತರಲು ಅನೇಕ ಕ್ರಮವಹಿಸಲಾಗಿದೆ. ಕಚೇರಿಯಲ್ಲಿ ಸ್ವೀಕೃತವಾಗುವ ಎಲ್ಲಾ ಅರ್ಜಿ/ಸ್ವೀಕೃತಿಗಳನ್ನು ನಿಗದಿಪಡಿಸಿದ ನಮೂನೆಯಲ್ಲಿ ಕಡ್ಡಾಯವಾಗಿ ವಹಿಗಳನ್ನು ವಿಷಯ ನಿರ್ವಾಹಕರು ನಿರ್ವಹಿಸುವುದು. ಅಧೀಕ್ಷಕರುಗಳು ಪ್ರತಿ ವಾರಕ್ಕೊಮ್ಮೆ ವಹಿಗಳನ್ನು ಪರಿಶೀಲಿಸುವುದು ಹಾಗೂ ತಿಂಗಳಿಗೊಮ್ಮೆ ಮೇಜು ತಪಾಸಣೆಯನ್ನು ನಡೆಸಿ ಮೇಲಾಧಿಕಾರಿಗಳಿಗೆ ವರದಿಯನ್ನು ಸಲ್ಲಿಸುವಂತೆ ಸಾರಿಗೆ ಆಯುಕ್ತರು ಸುತ್ತೋಲೆ ಹೊರಡಿಸಿ ಸೂಚನೆ ನೀಡಿದ್ದಾರೆ.

ಕಚೇರಿಗಳಲ್ಲಿ ಮಧ್ಯವರ್ತಿಗಳಿಗೆ ಯಾವುದೇ ರೀತಿಯ ಅವಕಾಶ ಕಲ್ಪಿಸದಂತೆ ಕರ್ತವ್ಯ ನಿರ್ವಹಿಸುವಂತೆ ಒಂದು ವೇಳೆ ಯಾವುದೇ ಕಚೇರಿಯಲ್ಲಿ ಮಧ್ಯವರ್ತಿಗಳು ಕಂಡುಬಂದಲ್ಲಿ ಆಯಾ ಕಚೇರಿಯ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಿ ನಿಯಮಾನುಸಾರ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಸೂಚನೆ ನೀಡಿದ್ದೇವೆ ಎಂದರು.

ಸಾರ್ವಜನಿಕರು ಮಧ್ಯವರ್ತಿಗಳನ್ನು ಸಂಪರ್ಕಿಸದೇ ನೇರವಾಗಿ ಕಛೇರಿಯ ಅಧಿಕಾರಿ/ ಸಿಬ್ಬಂದಿಯವರನ್ನು ಭೇಟಿ ಮಾಡಿ ಅವರ ಕೆಲಸಗಳನ್ನು ಮಾಡಿಸಿಕೊಳ್ಳಬೇಕೆಂದು ಆರ್‌ಟಿಒ ಕಚೇರಿಗಳ ಆವರಣದಲ್ಲಿ ಸೂಚನಾ ಫಲಕಗಳನ್ನು ಅಳವಡಿಸಲಾಗಿದೆ ಎಂದು ಹೇಳಿದರು.

ಲೋಕಾಯುಕ್ತರವರ ಕಚೇರಿ ವಿಳಾಸ ಮತ್ತು ದೂರವಾಣಿ ಸಂಖ್ಯೆಗಳ ವಿವರಗಳ ಮಾಹಿತಿಯನ್ನು ಸೂಚನಾ ಫಲಕಗಳಲ್ಲಿ ಪ್ರದರ್ಶಿಸಲಾಗಿದೆ. ದಿನಾಂಕ 01-11-2021 ರಿಂದ ಸಾರಿಗೆ ಇಲಾಖೆಯಲ್ಲಿನ 52 ಸೇವೆಗಳನ್ನು ಆನ್ ಲೈನ್ ಮುಖಾಂತರ ಒದಗಿಸುತ್ತ ಮಧ್ಯವರ್ತಿಗಳ ಹಾವಳಿ ನಿಯಂತ್ರಣಕ್ಕೆ ಕ್ರಮವಹಿಸಲಾಗುತ್ತಿದೆ ಎಂಬುದಾಗಿ ತಿಳಿಸಿದ್ದಾರೆ.

BREAKING: ರಾಜ್ಯದಲ್ಲಿ ಸರ್ಕಾರಿ ಪ್ರಾಯೋಜಿತ ಕಾರ್ಯಕ್ರಮಗಳಲ್ಲಿ ‘ಸ್ಮರಣಿಕೆ, ಟ್ರೋಫಿ’ ನಿಷೇಧಿಸಿ ಸರ್ಕಾರ ಮಹತ್ವದ ಆದೇಶ

ಹೀಗಿದೆ ಇಂದು ಬೆಳಗಾವಿಯ ವಿಧಾನಸಭೆಯಲ್ಲಿ ಮಂಡನೆಯಾಗಿ ಅಂಗೀಕರಿಸಿದ ವಿಧೇಯಕಗಳ ಪಟ್ಟಿ

Share. Facebook Twitter LinkedIn WhatsApp Email

Related Posts

BIG NEWS : ರಾಜ್ಯದ ಹಲವು ಜಿಲ್ಲೆಗಳ ಅಧಿಕ ಉಷ್ಣಾಂಶ ದಾಖಲು : ಹವಾಮಾನ ಇಲಾಖೆ ಎಚ್ಚರಿಕೆ

11/04/2026 5:39 AM1 Min Read

BIG NEWS : ಪಿಗ್ಮಿ ಏಜೆಂಟ್‌ಗಳು ಬ್ಯಾಂಕ್ ನೌಕರರು, ಅವರ ಕಮೀಷನ್ ಮೇಲೆ ‘GST’ ವಿಧಿಸಲು ಸಾಧ್ಯವಿಲ್ಲ : ಹೈಕೋರ್ಟ್

11/04/2026 5:38 AM1 Min Read

ರಾಜ್ಯದ ಪೊಲೀಸ್ ಕಾನ್ಸ್‌ಟೇಬಲ್‌ಗಳಿಗೆ ಸಿಹಿಸುದ್ದಿ: ಇನ್ನು ಮುಂದೆ ಸೇವಾವಧಿಯಲ್ಲಿ ಸಿಗಲಿದೆ 3 ಬಡ್ತಿ!

11/04/2026 5:33 AM2 Mins Read
Recent News

BIG NEWS : ರಾಜ್ಯದ ಹಲವು ಜಿಲ್ಲೆಗಳ ಅಧಿಕ ಉಷ್ಣಾಂಶ ದಾಖಲು : ಹವಾಮಾನ ಇಲಾಖೆ ಎಚ್ಚರಿಕೆ

11/04/2026 5:39 AM

BIG NEWS : ಪಿಗ್ಮಿ ಏಜೆಂಟ್‌ಗಳು ಬ್ಯಾಂಕ್ ನೌಕರರು, ಅವರ ಕಮೀಷನ್ ಮೇಲೆ ‘GST’ ವಿಧಿಸಲು ಸಾಧ್ಯವಿಲ್ಲ : ಹೈಕೋರ್ಟ್

11/04/2026 5:38 AM

ರಾಜ್ಯದ ಪೊಲೀಸ್ ಕಾನ್ಸ್‌ಟೇಬಲ್‌ಗಳಿಗೆ ಸಿಹಿಸುದ್ದಿ: ಇನ್ನು ಮುಂದೆ ಸೇವಾವಧಿಯಲ್ಲಿ ಸಿಗಲಿದೆ 3 ಬಡ್ತಿ!

11/04/2026 5:33 AM

ಜನಗಣತಿ ಕಾರ್ಯದಿಂದ ಸಚಿವಾಲಯದ ಸಿಬ್ಬಂದಿಗೆ ವಿನಾಯಿತಿ: ರಾಜ್ಯ ಸರ್ಕಾರ ಆದೇಶ

11/04/2026 5:27 AM
State News
KARNATAKA

BIG NEWS : ರಾಜ್ಯದ ಹಲವು ಜಿಲ್ಲೆಗಳ ಅಧಿಕ ಉಷ್ಣಾಂಶ ದಾಖಲು : ಹವಾಮಾನ ಇಲಾಖೆ ಎಚ್ಚರಿಕೆ

By kannadanewsnow0511/04/2026 5:39 AM KARNATAKA 1 Min Read

ಬೆಂಗಳೂರು : ಉಷ್ಣಾಂಶ ಹೆಚ್ಚಳದಿಂದಾಗಿ ರಾಜ್ಯದ ಹಲವೆಡೆ ಸುಡುಬಿಸಿಲು ಕಾಣಿಸಿಕೊಳ್ಳುತ್ತಿದೆ. ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡದಲ್ಲಿ ವಾಡಿಕೆಗಿಂತ…

BIG NEWS : ಪಿಗ್ಮಿ ಏಜೆಂಟ್‌ಗಳು ಬ್ಯಾಂಕ್ ನೌಕರರು, ಅವರ ಕಮೀಷನ್ ಮೇಲೆ ‘GST’ ವಿಧಿಸಲು ಸಾಧ್ಯವಿಲ್ಲ : ಹೈಕೋರ್ಟ್

11/04/2026 5:38 AM

ರಾಜ್ಯದ ಪೊಲೀಸ್ ಕಾನ್ಸ್‌ಟೇಬಲ್‌ಗಳಿಗೆ ಸಿಹಿಸುದ್ದಿ: ಇನ್ನು ಮುಂದೆ ಸೇವಾವಧಿಯಲ್ಲಿ ಸಿಗಲಿದೆ 3 ಬಡ್ತಿ!

11/04/2026 5:33 AM

ಜನಗಣತಿ ಕಾರ್ಯದಿಂದ ಸಚಿವಾಲಯದ ಸಿಬ್ಬಂದಿಗೆ ವಿನಾಯಿತಿ: ರಾಜ್ಯ ಸರ್ಕಾರ ಆದೇಶ

11/04/2026 5:27 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.