ಬೆಳಗಾವಿ : ಆಸ್ತಿ ಲೆಕ್ಕಾಪತ್ರಗಳಿಗೆ ಸಹಿ ಹಾಕುವ ವಿಚಾರಕ್ಕಾಗಿ ಅಧಿಕಾರಿಯೊಬ್ಬರು ಮಾನವೀಯನ್ನೇ ಮರೆತಿರುವ ದುರಂತ ಈ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ
80 ವರ್ಷದ ವೃದ್ಧೆ ಆರೋಗ್ಯ ಸಮಸ್ಯೆಯಿಂದ ಆಸ್ಪತ್ರೆ ದಾಖಲಾಗಿದ್ದು, ಈ ವೇಳೆ ಆಸ್ತಿ ಲೆಕ್ಕಾಪತ್ರಗಳಿಗೆ ವೃದ್ಧೆ ಸಹಿ ಹಾಕಬೇಕಾಗಿತ್ತು. ಹಾಗಾಗಿ ಮಹಾದೇವಿ ಅಗಸಿಮನಿ ಎಂಬ ವೃದ್ಧೆಯನ್ನು ಅಧಿಕಾರಿಗಳು ಬೆಡ್ ಮೇಲೆಯೇ ಕರೆದುಕೊಂಡು ಬನ್ನಿ ಎಂದಿದ್ದರು. ಈ ಕಾರಣಕ್ಕಾಗಿ ಕುಟುಂಬಸ್ಥರು 80 ವರ್ಷದ ವೃದ್ಧೆಯನ್ನು ಬೆಡ್ ಮೇಲೆಯೇ ಕರೆದುಕೊಂಡು ಬಂದು ಸಹಿ ಹಾಕಿದ್ದಾರೆ. ಸ್ಥಳೀಯರ ಜನರು ಅಧಿಕಾರಿಯ ಈ ನಡೆಗೆ ಕಿಡಿ ಕಾರಿದ್ದಾರೆ.