ರಾಮನಗರ: ಜಿಲ್ಲೆಯ ಜಿಲ್ಲಾ ಕಾರಾಗೃಹ ಅಧಿಕಾರಿಗಳು ಬೆಳ್ಳಂಬೆಳಗ್ಗೆ ಭರ್ಜರಿ ಕಾರ್ಯಾಚಾರಣೆ ನಡೆಸಿದ್ದಾರೆ. ರಾಮನಗರ ಡಿವೈಎಸ್ ಪಿ ಮೋಹನ್ ಕುಮಾರ್ ನೇತೃತ್ವದಲ್ಲಿ ಜಿಲ್ಲಾ ಕಾರಾಗೃಹಕ್ಕೆ ದಾಳಿ ನಡೆಸಿದ್ದಾರೆ.
BIGG NEWS: ಚುನಾವಣಾ ಆಯೋಗದಿಂದ ಇನ್ನೂ 86 ರಾಜಕೀಯ ಪಕ್ಷಗಳು, 253 ʼನಿಷ್ಕ್ರಿಯʼ ಘೋಷಣೆ
ಕಾರಾಗೃಹದಲ್ಲಿ ಖೈದಿಗಳು ಮೊಬೈಲ್ ಗಳೆಲ್ಲ ಇಟ್ಟುಕೊಂಡು ಎಂಜಾಯ್ ಮಾಡುತ್ತಾರೆ ಎಂಬ ಆರೋಪಗಳು ಕೇಳಿಬಂದಿತ್ತು. ಹೀಗಾಗಿ ಇಂದು ಬೆಳ್ಳಂಬೆಳಗ್ಗೆ ಜಿಲ್ಲಾ ಕಾರಾಗೃಹಕ್ಕೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ ಗಾಂಜಾ, ಮೊಬೈಲ್ , ಸಿಮ್ ಕಾರ್ಡ್ ಗಳನ್ನು ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ಎಲ್ಲ ಕೊಠಡಿಗಳ ಇಂಚಿಚೂ ಪರಿಶೀಲನೆಯನ್ನು ಪೊಲೀಸರು ಮಾಡುತ್ತಿದ್ದಾರೆ. ಇದರಿಂದಾಗಿ ಕಾರಾಗೃಹದಲ್ಲಿರುವ ಸಿಬ್ಬಂದಿಗೆ ಆತಂಕ ಸೃಷ್ಟಿಸಿದೆ.