ವಿಜಯನಗರ : ಅರಣ್ಯ ಇಲಾಖೆಗೆ ಸೇರಿದ ಜಾಗವೆಂದು ಸುಮಾರು 30ಕ್ಕೂ ಹೆಚ್ಚು ಎಕರೆ ಬೆಳೆ ನಾಶಪಡಿಸಲಾಗಿದ್ದು ಅಧಿಕಾರಿಗಳ ವರ್ತನೆಗೆ ಬೆಸತ್ತು ರೈತ ಮಹಿಳೆಯರು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ. ಲೋಕಮ್ಮ (51) ಮತ್ತು ದುರ್ಗಮ್ಮ (46) ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ತಾಳೆದಹಳ್ಳಿ ತಾಂಡ ಹಾಗೂ ಮಾಚಿಹಳ್ಳಿ ಕೊರಚರಹಟ್ಟಿಯಲ್ಲಿ ಒಂದು ಘಟನೆ ನಡೆದಿದೆ.
ವಿಜಯನಗರ ಜಿಲ್ಲೆಯ ಹರಪ್ಪನಹಳ್ಳಿ ತಾಲೂಕಿನ ಗ್ರಾಮಗಳು ಎಂದು ತಿಳಿದು ಬಂದಿದೆ. ನೋಟಿಸ್ ನೀಡದೆ ಅರಣ್ಯ ಅಧಿಕಾರಿಗಳು ಏಕಾಏಕಿ ಬೆಳೆ ನಾಶಪಡಿಸಿದ್ದಾರೆ. ಜೆಸಿಬಿಗಳ ಮೂಲಕ ಸುಮಾರು 30ಕ್ಕೂ ಹೆಚ್ಚು ಎಕರೆ ಅಧಿಕಾರಿಗಳು ಬೆಳೆಯನ್ನು ನಾಶಪಡಿಸಿದ್ದಾರೆ. ಸರ್ವೆ ನಂಬರ್ 31 ಮತ್ತು 386 ರಲ್ಲಿ ಮೆಕ್ಕೆಜೋಳ ಬೆಳೆದಿದ್ದರು. ರೈತರು ಸಾಗುವಳಿ ಪತ್ರ ಆರ್ ಟಿ ಸಿ ಹೊಂದಿದ್ದರು ಸಹ ಅಧಿಕಾರಿಗಳು ದೌರ್ಜನ್ಯ ಎಸಗಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.
ಅರಣ್ಯ ಇಲಾಖೆಗೆ ಸೇರಿದ ಜಾಗ ಎಂದು ಅಧಿಕಾರಿಗಳು ಬೆಳೆ ನಾಶಪಡಿಸಿದ್ದಾರೆ ದೌರ್ಜನ ನಡೆಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಹರಪನಹಳ್ಳಿ ಈಗ ಮನವಿ ಪತ್ರ ಸಲ್ಲಿಸಿದ್ದಾರೆ. ಅಸ್ವಸ್ಥ ಗೊಂಡ ಮಹಿಳೆಯರಿಗೆ ಹರಪನಹಳ್ಳಿ ತಾಲೂಕು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ.