ಮೈಸೂರು : ಎಲ್ಲರ ಬಹುನಿರೀಕ್ಷಿತ ಮೈಸೂರು-ಬೆಂಗಳೂರು ಎಕ್ಸ್ಪ್ರೆಸ್ ವೇ ಎರಡನೇ ಹಂತದ ಕಾಮಗಾರಿ ಭರದಿಂದ ಸಾಗುತ್ತಿದೆ. ಅಲ್ಲದೇ ಇದೇ ನವೆಂಬರ್ ತಿಂಗಳ 30ರಂದು ಶ್ರೀರಂಗಪಟ್ಟಣ ಬೈಪಾಸ್ ಸಂಚಾರಕ್ಕೆ ಮುಕ್ತಗೊಳಿಸಲಾಗುತ್ತದೆ ಎಂದು ಸಂಸದ ಪ್ರತಾಪ್ ಸಿಂಹ ತಮ್ಮ ಟ್ವಿಟರ್ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಮೈಸೂರು- ಬೆಂಗಳೂರು ದಶಪಥ ಹೆದ್ದಾರಿ ಶ್ರೀರಂಗಪಟ್ಟಣ ಬೈಪಾಸ್ ನಲ್ಲಿ ನಡೆಯುತ್ತಿರುವ ರಸ್ತೆ ಕಾಮಗಾರಿ ಹಾಗೂ ಟೋಲ್ ಪ್ಲಾಜಾವನ್ನು ಅಧಿಕಾರಿಗಳೊಂದಿಗೆ ವೀಕ್ಷಿಸಲಾಯಿತು.
ನವೆಂಬರ್ 30 ರಂದು ಶ್ರೀರಂಗಪಟ್ಟಣ ಬೈಪಾಸ್ ಅನ್ನು ಓಪನ್ ಮಾಡಲಾಗುವುದು. pic.twitter.com/ZBr7zcJ0rV— Pratap Simha (@mepratap) November 17, 2022
ಶ್ರೀರಂಗಪಟ್ಟಣ ಬೈಪಾಸ್ನಲ್ಲಿ ನಡೆಯುತ್ತಿರುವ ರಸ್ತೆ ಕಾಮಗಾರಿ ಹಾಗೂ ಟೋಲ್ ಪ್ಲಾಜಾವನ್ನು ಅಧಿಕಾರಿಗಳೊಂದಿಗೆ ವೀಕ್ಷಿಸಿದ್ದ ಅವರು, ಈ ತಿಂಗಳಿನೊಳಗೆ ಬೈಪಾಸ್ ಅನ್ನು ಸಾರ್ವಜನಿಕರ ಸಂಚಾರಕ್ಕೆ ಮುಕ್ತಗೊಳಿಸಲಾಗುವುದು ಎಂದು ಟ್ವೀಟ್ನಲ್ಲಿ ತಿಳಿಸಿದ್ದಾರೆ.
BIGG NEWS : 545 `PSI’ ನೇಮಕಾತಿ ಪ್ರಕರಣ : ಪ್ರಮುಖ ಆರೋಪಿಗಳಿಗೆ ಜಾಮೀನು ಮಂಜೂರು
ಮೊದಲ ಹಂತದಲ್ಲಿ ಬೆಂಗಳೂರಿನಿಂದ ನಿಡುಘಟ್ಟದವರೆಗೆ 54 ಕಿಲೋ ಮೀಟರ್ ಕಾಮಗಾರಿ ಭರದಿಂದ ಸಾಗಿ ಮುಕ್ತಾಯವಾಗಿತ್ತು. ಸದ್ಯ ಕಾಮಗಾರಿ ಮುಗಿದರೂ ಕೆಲವು ಕಡೆ ಲಿಂಕೇಜ್ಗಳನ್ನು ಸರಿಪಡಿಸುವುದು ಬಾಕಿ ಉಳಿದಿದೆ.
BIGG NEWS : 545 `PSI’ ನೇಮಕಾತಿ ಪ್ರಕರಣ : ಪ್ರಮುಖ ಆರೋಪಿಗಳಿಗೆ ಜಾಮೀನು ಮಂಜೂರು
ಹಲವೆಡೆ ಬೈಪಾಸ್ನಿಂದ ಎಕ್ಸ್ಪ್ರೆಸ್ ಹೈವೇ ಸಂಪರ್ಕ ಕಲ್ಪಿಸುವುದು ವಿಳಂಬವಾಗಿದ್ದು, ಆದರೆ ವಾಹನಗಳ ಸಂಚಾರಕ್ಕೆ ಯಾವುದೇ ಸಮಸ್ಯೆ ಆಗಿಲ್ಲ. ಇನ್ನು ಎರಡನೇ ಹಂತದ ಕಾಮಗಾರಿ ವಿಳಂಬವಾಗಿದ್ದು, ಇದನ್ನು ಶೀಘ್ರವೇ ಕಾಮಗಾರಿ ಮುಗಿಸಲಾಗುವುದು ಎಂದು ಪ್ರತಾಪ್ ಸಿಂಹ ಭರವಸೆ ನೀಡಿದ್ದಾರೆ.