ರೂರ್ಕೆಲಾ: ಒಡಿಶಾದ ಸುಂದರ್ಗಢ ಜಿಲ್ಲೆಯಲ್ಲಿ ಭೋಜನ ಮಾಡುವಾಗ ಅಕ್ಕಿಯಲ್ಲಿ ಇರುವೆಗಳನ್ನು ಇರುವುದನ್ನು ನೋಡಿದನ್ನು ಹೇಳಿದಕ್ಕೆ ಮಹಿಳೆಯೊಬ್ಬಳು ತನ್ನ ಪತಿಗೆ ಸ್ಕಾರ್ಫ್ನಿಂದ ಕತ್ತು ಹಿಸುಕಿದ ಆರೋಪದ ಮೇಲೆ ಬಂಧಿಸಲಾಗಿದೆ.
ಮಾವ ಶಶಿ ಭೂಷಣ್ ಬಾಗ್ ನೀಡಿದ ದೂರಿನ ಮೇರೆಗೆ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ. ಹೇಮಂತ ಬಾಗ್ (35) ಚಾಲಕನಾಗಿ ಕೆಲಸ ಮಾಡುತ್ತಿದ್ದು, ಮೃತ ಹೇಮಂತ ಬಾಗ್ ತನ್ನ ಪತ್ನಿ ಸರಿತಾ, ಪುತ್ರಿ ಹೇಮಲತಾ (7) ಮತ್ತು ಪುತ್ರ ಸೌಮ್ಯ (4) ಜತೆ ವಾಸವಾಗಿದ್ದ. ಎಫ್ಐಆರ್ ಪ್ರಕಾರ, ಹೇಮಂತ ಊಟಕ್ಕೆ ಕುಳಿತುಕೊಂಡಿದ್ದ, ಈ ವೇಳೇ ಸರಿತಾ ಅವರಿಂದ ಅನ್ನ ಬಡಿಸಲಾಗಿತ್ತು. ಅನ್ನದಲ್ಲಿ ಇರುವೆಗಳನ್ನು ಕಂಡು ವಿವರಣೆ ಕೇಳಿದಾಗ ಇಬ್ಬರ ನಡುವೆ ಜಗಳವಾಗಿದೆ ಮತ್ತು ಕೋಪದ ಭರದಲ್ಲಿ ಅವಳು ಅವನ ಕತ್ತು ಹಿಸುಕಿ ಕೊಂದರು ಎನ್ನಲಾಗಿದೆ.