ಭುವನೇಶ್ವರ(ಒಡಿಶಾ): ಒಡಿಶಾದ ಕೊರಾಪುಟ್ನಲ್ಲಿ ಭಾನುವಾರ ನಡೆದ ದುರ್ಗಾ ಪೂಜೆಯ ಸಾಂಸ್ಕತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಒಡಿಯಾದ ಜನಪ್ರಿಯ ಗಾಯಕ ಮುರಳಿ ಮಹಾಪಾತ್ರ(Murali Mohapatra) ವೇದಿಕೆಯಲ್ಲೇ ಕೊನೆಯುಸಿರೆಳೆದ್ದಾರೆ.
ಮಾಹಿತಿಯ ಪ್ರಕಾರ, ಮೊಹಾಪಾತ್ರ ಅವರಿಗೆ ಆರೋಗ್ಯ ಸರಿ ಇರಲಿಲ್ಲ. ಆದರೂ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವೇಳೆ ವೇದಿಕೆಯ ಕುರ್ಚಿಯ ಮೇಲೆ ಕುಳಿತು ಹಾಡು ಹಾಡುತ್ತಿದ್ದಾಗಲೇ ಕುಸಿದು ಬಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದ್ರೆ, ಮುರಳಿ ಮಹಾಪಾತ್ರ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು.
ಒಡಿಯಾ ಗಾಯಕ ಭಾನುವಾರ ರಾತ್ರಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಮೊಹಾಪಾತ್ರ ಅವರ ಸಹೋದರ ಬಿಭೂತಿ ಪ್ರಸಾದ್ ಮೊಹಾಪಾತ್ರ ತಿಳಿಸಿದ್ದಾರೆ. ಮಹಾಪಾತ್ರ ಅವರು ಸರ್ಕಾರಿ ಉದ್ಯೋಗಿಯಾಗಿದ್ದು, ಜೈಪುರ ಸಬ್ ಕಲೆಕ್ಟರ್ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರು. ಒಂಬತ್ತು ತಿಂಗಳ ನಂತರ ಅವರು ನಿವೃತ್ತಿ ಹೊಂದಬೇಕಿತ್ತು.
ಈ ಘಟನೆಯು ಈ ವರ್ಷ ಕೋಲ್ಕತ್ತಾದ ಹೋಟೆಲ್ನಲ್ಲಿ ನಡೆದ ಸಂಗೀತ ಕಚೇರಿಯಲ್ಲಿ ಕೆಕೆ (ಕೃಷ್ಣಕುಮಾರ್ ಕುನ್ನತ್) ಅವರ ಮರಣವನ್ನು ನೆನಪಿಸಿದೆ.
ನೀವು ಮಿಸ್ ಆಗಿ ಬೇರೆಯವ್ರ ಖಾತೆಗೆ ಹಣ ಕಳುಹಿಸಿದ್ದೀರಾ? ಚಿಂತಿಸಬೇಡಿ! ಹೀಗೆ ಮಾಡಿ ಹಣ ಹಿಂಪಡೆಯಿರಿ!
BIG NEWS: ಬೆಂಗಳೂರಿನಲ್ಲಿ ಜಾಲಿ ರೈಡ್ ಹೋಗಿ ಲ್ಯಾಂಬೋರ್ಗಿನಿ ಕಾರು ಕಂಬಕ್ಕೆ ಗುದ್ದಿದ ಉದ್ಯಮಿ