ಬೆಂಗಳೂರು : ಇತ್ತೀಚಿಗೆ ನಟ ದರ್ಶನ್ ಅಭಿಮಾನಿಗಳು ನಟಿ ರಮ್ಯಾ ಗೆ ಅಶ್ಲೀಲ ಮೆಸೇಜ್ ಹಾಕಿ ನಿಂದನೆ ಮಾಡಿದ್ದ ಪ್ರಕರಣ ಭಾರಿ ಸದ್ದು ಮಾಡಿತ್ತು. ಬಳಿಕ ರಮ್ಯಾ ಈ ಕುರಿತು ಬೆಂಗಳೂರು ಕಮಿಷನರ್ ಗೆ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಹಲವರನ್ನು ಅರೆಸ್ಟ್ ಮಾಡಿದ್ದಾರೆ. ಇದರ ಬೆನ್ನಲ್ಲೆ ದರ್ಶನ್ ಪತ್ನಿ ವಿಜಯಲಕ್ಷ್ಮಿಗೂ ಅಶ್ಲೀಲ ಮೆಸೇಜ್ ಬಂದಿದ್ದು ಬೆಂಗಳೂರಿನ ಸಿಕೆ ಅಚ್ಚುಕಟ್ಟು ಪೊಲೀಸ್ರು ಈ ಕುರಿತು ವಿವರಣೆ ನೀಡುವಂತೆ ಇದೀಗ 2ನೇ ಬಾರಿ ನೋಟಿಸ್ ನೀಡಿದ್ದಾರೆ.
ಹೌದು ಕೊಲೆ ಆರೋಪಿ ನಟ ದರ್ಶನ್ ಪತ್ನಿಗೆ ಅಶ್ಲೀಲ ಮೆಸ್ಸೇಜ್ ಮಾಡಿದರ ಕುರಿತು ವಿವರಣೆ ನೀಡುವಂತೆ ಇದೀಗ ಪೊಲೀಸರು ಮತ್ತೊಂದು ನೋಟಿಸ್ ಕಳುಹಿಸಿದ್ದಾರೆ. ಎರಡು ನೋಟಿಸ್ಗು ಸಹ ವಿಜಯಲಕ್ಷ್ಮಿ ಯಾವುದೇ ಉತ್ತರ ನೀಡಿಲ್ಲ. ಘಟನೆ ಬಗ್ಗೆ ಹೇಳಿಕೆ ದಾಖಲಿಸಿಕೊಳ್ಳಲು ಪೊಲೀಸರು ನೋಟಿಸ್ ನೀಡಿದ್ದಾರೆ ಆದರೆ ಎರಡನೇ ಬಾರಿ ನೋಟಿಸ್ ನೀಡಿದರು ಕೂಡ ವಿಜಯಲಕ್ಷ್ಮಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.ಬಳಿಕ ಮಹಿಳಾ ಆಯೋಗದಿಂದ ಸುಮೊಟೊ ಕೇಸ್ ದಾಖಲಿಸುವಂತೆ ಸೂಚನೆ ನೀಡಲಾಗಿತ್ತು ಎರಡು ನೋಟಿಸ್ ಗು ಯಾವುದೇ ಉತ್ತರ ನೀಡದ ಹಿನ್ನೆಲೆಯಲ್ಲಿ ಸುಮೋಟೋ ಕೇಸ್ ದಾಖಲಿಸುವಂತೆ ಮಹಿಳಾ ಆಯೋಗ ಸೂಚನೆ ನೀಡಿದೆ.