ಬೆಂಗಳೂರು : ಇನ್ನೇನು ಬರುವ ಭಾನುವಾರ ಕನ್ನಡ ಬಿಗ್ ಬಾಸ್ ಸೀಸನ್ 12ರ ಫಿನಾಲೆ ಕಾರ್ಯಕ್ರಮ ಕೊನೆಯ ಹಂತಕ್ಕೆ ಬಂದಿದ್ದು, ಬರುವ ಭಾನುವಾರ ಕಿಚ್ಚ ಸುದೀಪ್ ಈ ಬಾರಿಯ ಬಿಗ್ ಬಾಸ್ ವಿನ್ನರ್ ಅನ್ನು ಘೋಷಿಸಲಿದ್ದಾರೆ.
ಆದರೆ ಬಿಗ್ ಬಾಸ್ ಗೆ ಇದೇ ವೇಳೆ ಸಂಕಷ್ಟ ಎದುರಾಗಿದ್ದು, ವೀಕೆಂಡ್ ನಲ್ಲಿ ನಟ ಕಿಚ್ಚ ಸುದೀಪ್ ಅವರು ರಣಹದ್ದು ಕುರಿತಂತೆ ಹೇಳಿಕೆ ಒಂದನ್ನು ನೀಡಿದ್ದು ಈ ವಿಚಾರವಾಗಿ ದೂರು ಸಹ ದಾಖಲಾಗಿತ್ತು. ಕಿಚ್ಚ ಸುದೀಪ್ ಅವರು ರಣಹದ್ದು ಪದ ಬಳಸಿದ ವಿಚಾರವಾಗಿ ದೂರು ದಾಖಲಾಗಿತ್ತು.
ಬಿಗ್ ಬಾಸ್ ಶೋನಲ್ಲಿ ರಣಹದ್ದು ಬಗ್ಗೆ ಹಿನ್ನೆಲೆಯಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿಯಿಂದ ಬಿಗ್ ಬಾಸ್ ಶೋ ಹನ್ನೆರಡರ ಪ್ರೋಗ್ರಾಮ್ ಹೆಡ್ಗೆ ನೋಟಿಸ್ ಜಾರಿ ಮಾಡಲಾಗಿದೆ. ಮುಂದಿನ ಸಂಚಿಕೆ ವೇಳೆ ಸ್ಪಷ್ಟೀಕರಣ ನೀಡುವಂತೆ ಸೂಚನೆ ನೀಡಲಾಗಿದೆ. ಬಿಗ್ ಬಾಸ್ ಶೋ ಮತ್ತು ಕಿಚ್ಚ ಸುದೀಪ್ ವಿರುದ್ಧ ದೂರು ನೀಡಿದ್ದರು.
ಕರ್ನಾಟಕ ರಣಹದ್ದು ಸಂರಕ್ಷಣಾ ಟ್ರಸ್ಟ್ ಸದಸ್ಯರು ದೂರು ನೀಡಿದ್ದರು. ನೋಟಿಸ್ ನಲ್ಲಿ ರಣಹದ್ದುಗಳ ವಿಶೇಷತೆ ಬಗ್ಗೆಯೂ ಕೂಡ ಉಲ್ಲೇಖಿಸಿದ್ದರು. ಇದೀಗ ಉಪ ಸಂರಕ್ಷಣಾಧಿಕಾರಿ ಸ್ಪಷ್ಟನೆ ನೀಡುವಂತೆ ಬಿಗ್ ಬಾಸ್ ಸೀಸನ್ 12ರ ಪ್ರೋಗ್ರಾಮ್ ಹೆಡ್ ಗೆ ನೋಟಿಸ್ ನೀಡಿದ್ದಾರೆ






