ಕೊಪ್ಪಳ : ಪತ್ನಿ ಬಿಟ್ಟು ಹೋಗಿದ್ದಕ್ಕೆ ವಿಷ ಕುಡಿದ ಪತಿಗೆ ಉಪಲೋಕಾಯುಕ್ತ ನ್ಯಾ.ವೀರಪ್ಪ ತರಾಟೆ ತೆಗೆದುಕೊಂಡಿದ್ದಾರೆ. ಜಿಲ್ಲಾಸ್ಪತ್ರೆಯಲ್ಲಿ ಉಪಲೋಪಯುಕ್ತ ಬಿ.ವೀರಪ್ಪ ಕ್ಲಾಸ್ ತೆಗೆದುಕೊಂಡಿದ್ದಾರೆ. ವಿಷ ಕುಡಿದು ಏನು ಸಾಧನೆ ಮಾಡುತ್ತೀಯಾ? ಎಂದು ಬೈದು ಬುದ್ಧಿವಾದ ಹೇಳಿದ್ದಾರೆ.
ಹೆಂಡತಿ ಬಿಟ್ಟು ಹೋದರೆ ಕೋರ್ಟಿಗೆ ಹೋಗು. ನೀನು ಡ್ರಿಂಕ್ಸ್ ಮಾಡ್ತೀಯಾ?ಯಾವ ಬ್ರಾಂಡ್ ಕುಡಿತಿಯ ಎಂದು ಉಪ ಲೋಕಾಯುಕ್ತ ವೀರಪ್ಪ ಇದೆ ವೇಳೆ ಕೇಳಿದರು. ಕೊಪ್ಪಳದ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿದಾಗ ಈ ಒಂದು ಘಟನೆ ನಡೆದಿದೆ.
ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ಉಪ ಲೋಕಾಯುಕ್ತ ನ್ಯಾ. ಬಿ. ವೀರಪ್ಪ ಭೇಟಿ ನೀಡಿದಾಗ ಹರಿದ ಹಾಸಿಗೆ ತಲೆದೆಂಬ ನೋಡಿ ಉಪಲೋಕಾಯುಕ್ತ ವೀರಪ್ಪ ಗರಂ ಆದರು. ಅವರು ಆಸ್ಪತ್ರೆಯ ಬೆಡ್ ಪರಿಶೀಲನೆ ನಡೆಸಿದರು.
ರೋಗಿಗಳಿಗೆ ಹರಿದ ಬೆಡ್ ತಲೆದೆಂಬು ನೀಡಿರುವುದಕ್ಕೆ ಆಕ್ರೋಶ ಹೊರಹಾಕಿದರು.
ಕೊಪ್ಪಳ ಜಿಲ್ಲಾ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿಗಳ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದ್ದಾರೆ.ನಾಳೆಯೊಳಗೆ ರೋಗಿಗಳಿಗೆ ಒಳ್ಳೆಯ ಬೆಡ್ ತಲೆದೆಂಬು ನೀಡಿ ಎಂದು ವೈದ್ಯರಿಗೆ ಸೂಚನೆ ನೀಡಿದರು.








