ಕೋಲಾರ: ಈಗಾಗಲೇ ಶಾಲಾ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಮುರುಗಾ ಶ್ರೀಗಳು ಜೈಲು ಪಾಲಾಗಿದ್ದಾರೆ. ಇದೇ ಮಾದರಿಯಲ್ಲಿಯೇ ರಾಜ್ಯದಲ್ಲಿ ನರ್ಸಿಂಗ್ ಕಾಲೇಜಿನ ಆಡಳಿತಾಧಿಕಾರಿಯಿಂದಲೇ ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ನೀಡಿರೋ ಪ್ರಕರಣ ನಡೆದಿರೋದು ಹೊರಬಂದಿದೆ. ಈ ಮೂಲಕ ತಮ್ಮ ಮಕ್ಕಳನ್ನು ಕಾಲೇಜಿಗೆ ಕಳುಹಿಸೋದು ಹೇಗೆ ಎನ್ನುವ ಭಯವನ್ನು ಪೋಷಕರಲ್ಲಿ ಹುಟ್ಟಿಸುವಂತೆ ಆಗಿದೆ.

ಹೌದು.. ಕೋಲಾರದ ಪ್ರತಿಷ್ಠಿತ ಇ‌.ಟಿ.ಸಿ.ಎಂ ಆಸ್ಪತ್ರೆ ಲೆಕ್ಕಾಧಿಕಾರಿ ಹಾಗೂ ನರ್ಸಿಂಗ್ ಕಾಲೇಜಿನ ಆಡಳಿತಾಧಿಕಾರಿ ಜಾನ್ಸನ್ ಕುಂದರ್ ವಿರುದ್ದ ಲೈಂಗಿಕ ಕಿರುಕುಳದ ಆರೋಪದಲ್ಲಿ ಎಫ್ಐಆರ್ ದಾಖಲಾಗಿದೆ. ಇದಲ್ಲದೇ ಈ ಕುರಿತು ನರ್ಸಿಂಗ್ ಕಾಲೇಜು ವಿದ್ಯಾರ್ಥಿನಿಯರಿಂದ ನರ್ಸಿಂಗ್ ಕಾಲೇಜಿನ ಆಡಳಿತಾಧಿಕಾರಿ ಜಾನ್ಸನ್ ಕುಂದರ್ ವಿರುದ್ದ ಲೈಂಗಿಕ ಕಿರುಕುಳ ಕುರಿತು ಕಾಲೇಜು ಆಡಳಿತ ಮಂಡಳಿಗೆ ದೂರು ನೀಡಲಾಗಿದೆ.

BREAKING NEWS : ಶಿಶುಮರಣ ಪ್ರಮಾಣ ಕಡಿಮೆ ಮಾಡುವಲ್ಲಿʻ ಭಾರತ ಮಹತ್ವದ ಮೈಲಿಗಲ್ಲುʼ ಸಾಧಿಸಿದೆ : ಸಚಿವ ಮನ್ಸುಖ್ ಮಾಂಡವಿಯಾ ಶ್ಲಾಘನೆ

ನರ್ಸಿಂಗ್ ಕಾಲೇಜಿನ ಆಡಳಿತಾಧಿಕಾರಿ ಜಾನ್ಸನ್ ಕುಂದರ್ ವಿರುದ್ಧ ಲೈಂಗಿಕ ಕಿರುಕುಳ ಸಂಬಂಧ ಆಡಳಿತ ಮಂಡಳಿಗೆ ದೂರು, ತಮಗೆ ನೀಡಿದಂತ ಲೈಂಗಿಕ ಕಿರುಕುಳದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ವಿದ್ಯಾರ್ಥಿನಿಯರು ಬಿಚ್ಚಿಟ್ಟಿದ್ದರು, ಆಡಳಿತ ಮಂಡಳಿ ಮಾತ್ರ ಅವರ ವಿರುದ್ದ ಯಾವುದೇ ಕ್ರಮ ಜರುಗಿಸದೇ ಇರೋದು ಹಲವು ಅನುಮಾನಕ್ಕೆ ಕಾರಣವಾಗಿದೆ.

ಅಂದಹಾಗೇ, ನರ್ಸಿಂಗ್ ಕಾಲೇಜಿನ ಆಡಳಿತಾಧಿಕಾರಿ ಜಾನ್ಸನ್ ಕುಂದರ್ ಕೋಲಾರದ ಪ್ರಖ್ಯಾತ ಇ‌.ಟಿ.ಸಿ.ಎಂ ಆಸ್ಪತ್ರೆಯ ಲೆಕ್ಕಾಧಿಕಾರಿ ಕೂಡ ಆಗಿದ್ದಾರೆ. ಅಲ್ಲದೇ ಜಾನ್ಸನ್ ಕುಂದರ್ ಓರ್ವ ಪ್ರಭಾವಿ ವ್ಯಕ್ತಿ ಕೂಡ ಎನ್ನಲಾಗುತ್ತಿದೆ.

ಇಟಿಸಿಎಂ ಆಸ್ಪತ್ರೆಯ ಆಡಳಿತ ಮಂಡಳಿ ಯಾವಾಗ ಜಾನ್ಸನ್ ಕುಂದರ್ ಲೈಂಗಿಕ ಕಿರುಕುಳ ವಿರುದ್ಧ ನರ್ಸಿಂಗ್ ವಿದ್ಯಾರ್ಥಿನಿಯರು ದೂರು ನೀಡಿದರು ಕ್ರಮ ಕೈಗೊಳ್ಳಲಿಲ್ಲವೇ, ಆಗ ಕಾಲೇಜು ವಿದ್ಯಾರ್ಥಿನಿಯರಿಂದ ಕೋಲಾರ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ. ಈ ಹಿನ್ನಲೆಯಲ್ಲಿ ಅವರ ವಿರುದ್ಧ ಎಫ್ಐಆರ್ ಕೂಡ ದಾಖಲಾಗಿದೆ.

BIGG NEW : ಯುಪಿಯ ಪ್ರವಾಹ ಪೀಡಿತ ಜಿಲ್ಲೆಗಳ ವೈಮಾನಿಕ ಸಮೀಕ್ಷೆ ನಡೆಸಿದ ಸಿಎಂ ಯೋಗಿ : ಪರಿಹಾರ ಕಾರ್ಯ ವೇಗಗೊಳಿಸಲು ಸೂಚನೆ | CM Yogi did aerial survey

ನಿರ್ಭಯಾ ಅತ್ಯಾಚಾರ ಪ್ರಕರಣದ ನಿರ್ದೇಶನ ಆಧಾರದ ಮೇಲೆ, ಲೈಂಗಿಕ ಕಿರುಕುಳ ಸಂತ್ರಸ್ತ ವಿದ್ಯಾರ್ಥಿನಿಯರಿಗೆ ತಮ್ಮ ಹೆಸರು ಬದಲಿಸಿ ದೂರು ಸಲ್ಲಿಸಲು ಪೊಲೀಸ್ ಠಾಣೆಯ ಠಾಣಾಧಿಕಾರಿಯಿಂದ ಸೂಚನೆ ನೀಡಲಾಗಿತ್ತು. ಈ ಹಿನ್ನಲೆಯಲ್ಲಿ ಠಾಣಾಧಿಕಾರಿಯ ಸೂಚನೆಯಂತೆ ತಮ್ಮ ಹೆಸರು ಬದಲಿಸಿ ಲೈಂಗಿಕ ಕಿರುಕುಳಕ್ಕೆ ಒಳಗಾದಂತ ಸಂತ್ರಸ್ತೆಯರು ದೂರು ಸಲ್ಲಿಸಿದ್ದರು.

ವಿದ್ಯಾರ್ಥಿನಿಯರ ದೂರು ಆಧರಿಸಿ, ಪೊಲೀಸರು ಲೈಂಗಿಕ ಕಿರುಕುಳ ಸಂತ್ರಸ್ತ ವಿದ್ಯಾರ್ಥಿನಿಯರು ಹೆಸರು ಬದಲಿಸಿ ಸಲ್ಲಿಸಿದ್ದ ದೂರಿನ ಮೇರೆಗೆ FIR ದಾಖಲಿಸಿದ್ದಾರೆ.

ಅಂದಹಾಗೇ ಇ‌.ಟಿ.ಸಿ.ಎಂ ಆಸ್ಪತ್ರೆ ಲೆಕ್ಕಾಧಿಕಾರಿ ಜಾನ್ಸನ್ ಕುಂದರ್ ಕೇವಲ ನರ್ಸಿಂಗ್ ವಿದ್ಯಾರ್ಥಿನಿಯರಿಗಷ್ಟೇ ಲೈಂಗಿಕ ಕಿರುಕುಳ ನೀಡಿಲ್ಲ. ಈ ಹಿಂದೆ ಕಾಲೇಜಿನ ವಿದ್ಯಾರ್ಥಿನಿಯರ ಹಾಸ್ಟೆಲ್ ನ ವಾರ್ಡನ್ ಗೂ ಕೂಡ ಲೈಂಗಿಕ ಕಿರುಕುಳ ನೀಡಿದ್ದಾಗಿ ತಿಳಿದು ಬಂದಿದೆ. ಈ ಸಂಬಂಧ ಅವರು ಈ ಮೊದಲು ಕಾಲೇಜಿನ ಆಡಳಿತ ಮಂಡಳಿಗೆ ಲೈಂಗಿಕ ಕಿರುಕುಳದ ದೂರು ಸಲ್ಲಿಸಿದ್ದಾರೆ.

BIGG NEW : ಉಗಾಂಡದಲ್ಲಿ ಎಬೋಲಾ ವೈರಸ್ ಅಟ್ಟಹಾಸ : 7 ಮಂದಿಗೆ ಸೋಂಕು, ಓರ್ವ ರೋಗಿ ಸಾವು| Ebola virus outbreak in uganda

ಯಾವಾಗ ಕಾಲೇಜಿನ ಆಡಳಿತಾಧಿಕಾರಿ ಜಾನ್ಸನ್ ಕುಂದರ್ ಕಾಮಪುರಾಣದ ಒಂದೊಂದೆ ಕತೆಗಳು, ಆ ಮೂಲಕ ಅವರ ವಿರುದ್ಧ ದೂರುಗಳು ಸಲ್ಲಿಕೆಯಾದವೋ, ಈಗ ಆಡಳಿತ ಮಂಡಳಿಯು ಅವರಿಂದ ಅನಿವಾರ್ಯವಾಗಿ ರಾಜೀನಾಮೆ ಪಡೆದಿದೆ.

ಆದ್ರೇ ಈಗ ಜಾನ್ಸನ್ ಕುಂದರ್ ಲೈಂಗಿಕ ಕಿರುಕುಳ ಆರೋಪದಲ್ಲಿ ದಾಖಲಾಗಿರುವಂತ ಪ್ರಕರಣ ಸಂಬಂಧ ದಾಖಲಾಗಿರುವಂತ ದೂರುಗಳನ್ನು ವಾಪಾಸ್ ಪಡೆಯುವಂತೆ ವಿದ್ಯಾರ್ಥಿನಿಯರಿಗೆ ಹಣದ ಆಮಿಷ ಕೂಡ ಒಡ್ಡುತ್ತಿರೋದಾಗಿ ತಿಳಇದು ಬಂದಿದೆ. ಆದರೇ ವಿದ್ಯಾರ್ಥಿನಿಯರು ಮಾತ್ರ ಇದ್ಯಾವ ಒತ್ತಡಕ್ಕೆ ಮಣಿಯದೇ ತಮಗಾದಂತೆ ಬೇರಾವುದೇ ವಿದ್ಯಾರ್ಥಿನಿಯರಿಗೆ ಆಗುವುದು ಬೇಡವೆಂದು ಪೊಲೀಸ್ ತನಿಖೆ ಮುಂದುವರೆಸಲು ಎಲ್ಲಾ ಬೆಂಬಲ ಸೂಚಿಸಿದ್ದಾರೆ. ಜೊತೆಗೆ ಮಾಜಿ ಆಡಳಿತಾಧಿಕಾರಿ ಜಾನ್ಸನ್ ಕುಂದರ್ ವಿರುದ್ಧ ತಮ್ಮ ಬಳಿಯಲ್ಲಿದ್ದಂತ ವಿಡಿಯೋ ರೆಕಾರ್ಡಿಂಗ್, ಆಡಿಯೊ ರೆಕಾರ್ಡಿಂಗ್, ಫೋಟೋಗಳು, ಇನ್ಸ್ಟಾಗ್ರಾಂ ಸಂದೇಶಗಳನ್ನು ಪೊಲೀಸರಿಗೆ ನೀಡಿ, ತನಿಖೆ ನಡೆಸುವಂತೆ ಮನವಿ ಮಾಡಿದ್ದಾರೆ.

‘ವಿದ್ಯುತ್ ಬಿಲ್’ ಬಗ್ಗೆ ಸುಳ್ಳು ಮಾಹಿತಿ ಹಬ್ಬಿಸಿದ್ರೇ ಕಾನೂನು ಕ್ರಮ – BESCOM ಖಡಕ್ ಎಚ್ಚರಿಕೆ

Share.
Exit mobile version