ಬೆಂಗಳೂರು: ಬೆಸ್ಕಾಂ ( BESCOM ) ನೀಡುವ ಮಾಸಿಕ ವಿದ್ಯುತ್‌ ಬಿಲ್‌ನಲ್ಲಿ ನಮೂದಿಸಿರುವ ನಿಗದಿತ ಶುಲ್ಕ ಮತ್ತು ಇಂಧನ ಹೊಂದಾಣಿಕೆ ಶುಲ್ಕದ ಕುರಿತು ಸತ್ಯಕ್ಕೆ ದೂರವಾದ ಮಾಹಿತಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ( Social Media ) ವ್ಯಕ್ತಿಯೊಬ್ಬರು ಹರಿಬಿಟ್ಟಿದ್ದು, ಇಂತಹ ಸುಳ್ಳು ಸುದ್ದಿಗಳಿಗೆ ಕಿವಿಗೊಡಬಾರದು ಎಂದು ಬೆಸ್ಕಾಂ ತನ್ನ ಗ್ರಾಹಕರಿಗೆ ಮನವಿ ಮಾಡಿದೆ.

ಈ ಕುರಿತಂತೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿರುವಂತ ಬೆಸ್ಕಾಂ ಎಂ.ಡಿ ಅವರು, ಮಾಸಿಕ ಬಿಲ್‌ ನಲ್ಲಿ ನಮೂದಿಸಲಾಗುವ ನಿಗದಿತ ಶುಲ್ಕವನ್ನು ಸಂಗ್ರಹಿಸಲು ಬೆಸ್ಕಾಂಗೆ ಯಾವುದೇ ಅಧಿಕಾರವಿಲ್ಲ ಮತ್ತು ಇಂಧನ ಹೊಂದಾಣಿಕೆ ಶುಲ್ಕ ವಿಧಿಸಿ ಗ್ರಾಹಕರನ್ನು ವಂಚಿಸಲಾಗುತ್ತಿದೆ ಎಂದು ಪುಟ್ಟೇಗೌಡ ಎಂಬ ವ್ಯಕ್ತಿ ವಿಡಿಯೋ ಮಾಡಿ ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು. ಈ ವ್ಯಕ್ತಿಯ ವಿರುದ್ದ ಸೂಕ್ತ ಕಾನೂನು ಕ್ರಮ ಜರುಗಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದ್ದು, ಇಂತಹ ಸುಳ್ಳು ಮಾಹಿತಿಗಳಿಗೆ ಸಾರ್ವಜನಿಕರು ಕಿವಿಗೊಡಬಾರದು ಎಂದು ಬೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕ ಮಹಾಂತೇಶ ಬೀಳಗಿ ಮನವಿ ಮಾಡಿದ್ದಾರೆ.

BIG BREAKING NEWS: ನಾಡಗೀತೆ ಹಾಡುವ ಅವಧಿ 2 ನಿಮಿಷ 30 ಸೆಕೆಂಡ್‌ಗೆ ನಿಗದಿ, ರಾಜ್ಯ ಸರ್ಕಾರದಿಂದ ಆದೇಶ

ಬಿಲ್‌ ನಲ್ಲಿ ನಮೂದಿಸಿರುವ ನಿಗದಿತ ಶುಲ್ಕವು 1 ಕಿಲೋ ವ್ಯಾಟ್‌ ಗೆ 100 ರೂ ಇದ್ದು, 2 ಕಿಲೋ ವ್ಯಾಟ್‌ ಗೆ 220 ರೂಪಾಯಿಯನ್ನು ಕೆಇಆರ್‌ಸಿ ನಿಗದಿ ಪಡಿಸಿರುತ್ತದೆ. ನಿಗದಿತ ಶುಲ್ಕವು ಗ್ರಾಹಕರು ಬಳಸುವ ವಿದ್ಯುತ್‌ ಬಳಕೆ ಮೇಲೆ ವಿದಿಸುವ ಶುಲ್ಕ ಆಗಿರುವುದಿಲ್ಲ. ಗ್ರಾಹಕರು ವಿದ್ಯುತ್‌ ಬಳಸದಿದ್ದರೂ ಅವರು ನಿಗದಿತ ಶುಲ್ಕ (ಫಿಕ್ಸೆಡ್‌ ಚಾರ್ಜಸ್‌) ಕಟ್ಟಲೇ ಬೇಕಾಗಿರುತ್ತದೆ. ಗ್ರಾಹಕರಿಗೆ ವಿದ್ಯುತ್‌ ಸಂಪರ್ಕ ಮತ್ತು ಅದನ್ನು ಪೂರೈಸಲು ಬೆಸ್ಕಾಂ ಒದಗಿಸುವ ಮೂಲಸೌಕರ್ಯದ ನಿರ್ವಹಣಾ ವೆಚ್ಚಕ್ಕಾಗಿ ನಿಗದಿತ ಶುಲ್ಕವನ್ನು ವಿಧಿಸಲಾಗುತ್ತದೆ ಎಂದು ಅವರು ವಿವರಿಸಿದರು.

ಅದೇ ರೀತಿ ಇಂಧನ ಹೊಂದಾಣಿಕೆ ಶುಲ್ಕವನ್ನು ಕಲ್ಲಿದ್ದಲು ಖರೀದಿ ವೆಚ್ಚದ ಆಧಾರದ ಮೇಲೆ ಕೆಇಆರ್‌ಸಿ ಕಾಲಕಾಲಕ್ಕೆ ಪರಿಷ್ಕರಿಸುತ್ತದೆ. ಇಂಧನ ಹೊಂದಾಣಿಕೆ ಶುಲ್ಕವನ್ನು ಕೆಇಆರ್‌ಸಿ ಪ್ರತಿ ಮೂರು ತಿಂಗಳಿಗೊಮ್ಮೆ ಪರಿಷ್ಕರಿಸುತ್ತದೆ. ಹಾಗೆಯೇ ಬಿಲ್‌ ನಲ್ಲಿ ನಮೂದಿಸಿರುವ ಪೆನಾಲ್ಟಿ (ಹೆ.ಲೋ. ದಂಡ) ಗ್ರಾಹಕರು ತಾವು ಪಡೆದ ವಿದ್ಯುತ್‌ ಪ್ರಮಾಣದ ಸಮಾರ್ಥ್ಯಕ್ಕಿಂತ (ಉದಾಹರಣೆಗೆ 3 ಕಿ.ವ್ಯಾಟ್‌), ಹೆಚ್ಚಿನ ವಿದ್ಯುತ್‌ ಸಾಮರ್ಥ್ಯವನ್ನು ಬಳಸಿದ್ದರೆ ಮಾತ್ರ ಹೆ.ಲೋ ದಂಡವನ್ನು ವಿಧಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

BREAKING NEWS : ಶಿಶುಮರಣ ಪ್ರಮಾಣ ಕಡಿಮೆ ಮಾಡುವಲ್ಲಿʻ ಭಾರತ ಮಹತ್ವದ ಮೈಲಿಗಲ್ಲುʼ ಸಾಧಿಸಿದೆ : ಸಚಿವ ಮನ್ಸುಖ್ ಮಾಂಡವಿಯಾ ಶ್ಲಾಘನೆ

ವಿದ್ಯುತ್‌ ಬಿಲ್‌ ನಲ್ಲಿ ನಮೂದಿಸಿರುವ ಬಡ್ಡಿ ಯನ್ನು ನಿಗದಿತ ಅವಧಿಯೊಳಗೆ ವಿದ್ಯುತ್‌ ಶುಲ್ಕ ಪಾವತಿಸದಿದ್ದರೆ ಮಾತ್ರ ವಿಧಿಸಲಾಗುತ್ತದೆ. ಹಾಗೆಯೇ ಬಿಲ್‌ ನಲ್ಲಿ ಉಲ್ಲೇಖಿಸಿರುವ ತೆರಿಗೆಯನ್ನು ರಾಜ್ಯ ಸರಕಾರದ ಪರವಾಗಿ ಬೆಸ್ಕಾಂ ಸಂಗ್ರಹಿಸುತ್ತಿದೆ. ತೆರಿಗೆ ದರವನ್ನು ಕೆಇಆರ್‌ಸಿ ಪರಿಷ್ಕರಿಸುತ್ತದೆ. ವಾಸ್ತವವನ್ನು ಮರೆಮಾಚಿ, ವಿದ್ಯುತ್‌ ಬಿಲ್‌ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಂದ ಮಾಹಿತಿಯನ್ನು ಪಡೆಯದೇ ಜನರನ್ನು ದಾರಿ ತಪ್ಪಿಸುತ್ತಿರುವ ವ್ಯಕ್ತಿಯ ವಿರುದ್ಧ ಕಾನೂನು ಕ್ರಮಕ್ಕೆ ಸೂಚಿಸಲಾಗಿದೆ ಎಂದು ಹೇಳಿದ್ದಾರೆ.

ಇದೇ ವ್ಯಕ್ತಿ ಸುಮಾರು ನಾಲ್ಕು ತಿಂಗಳ ಹಿಂದೆ ವಿದ್ಯುತ್‌ ಬಿಲ್‌ ಪಾವತಿಸಲು 6 ತಿಂಗಳ ಕಾಲಾವಕಾಶ ವಿರುತ್ತದೆ. ಅಲ್ಲಿಯ ತನಕ ಬಿಲ್‌ ಕಟ್ಟದಿದ್ದರೆ, ವಿದ್ಯುತ್‌ ಸಂಪರ್ಕವನ್ನು ಕಡಿತಗೊಳಿಸಲು ಕೆಇಬಿ ಅಧಿಕಾರಿಗಳಿಗೆ ಅಧಿಕಾರವಿರುವುದಿಲ್ಲ ಎಂಬ ತಪ್ಪು ಮಾಹಿತಿಯನ್ನು ಸಾಮಾಜಿಕ ಜಾಲತಾಣಗಳ ಮೂಲಕ ಈತ ಪ್ರಚಾರ ಮಾಡಿದ್ದ. ಇತನ ನಡವಳಿಕೆ ಬಗ್ಗೆ ಬೆಸ್ಕಾಂ ಅಧಿಕಾರಿಗಳು ಎಚ್ಚರಿಸಿದ್ದರೂ ಈತ ಅದೇ ತಪ್ಪನ್ನು ಪುನರಾರ್ವತನೆ ಮಾಡಿರುತ್ತಾನೆ ಎಂದು ತಿಳಿಸಿದ್ದಾರೆ.

BIGG NEW : ಯುಪಿಯ ಪ್ರವಾಹ ಪೀಡಿತ ಜಿಲ್ಲೆಗಳ ವೈಮಾನಿಕ ಸಮೀಕ್ಷೆ ನಡೆಸಿದ ಸಿಎಂ ಯೋಗಿ : ಪರಿಹಾರ ಕಾರ್ಯ ವೇಗಗೊಳಿಸಲು ಸೂಚನೆ | CM Yogi did aerial survey

Share.
Exit mobile version