ದೆಹಲಿ : ಪ್ರವಾದಿ ಮೊಹಮದ್ ಪೈಗಂಬರ್ ಕುರಿತಾಗಿ ನೂಪುರ್ ಶರ್ಮಾ ನೀಡಿದ್ದ ಹೇಳಿಕೆ ದೇಶಾದ್ಯಂತ ವಿವಾದದ ಆಕ್ರೋಶ ಹೆಚ್ಚಾಗಿತ್ತು. ಇದರ ಬೆನ್ನಲ್ಲಿಯೇ ಆಕೆಯ ವಿರುದ್ಧ ದೇಶದ ವಿವಿಧ ಪ್ರದೇಶಗಳಲ್ಲಿ ಎಫ್ಐಆರ್ ದಾಖಲು ಮಾಡಲಾಗಿತ್ತು.
BREAKING NEWS : ಮಣ್ಣು ಕುಸಿತದಿಂದ ಬಂದ್ ಆಗಿದ್ದ, ಶಿರಾಡಿಘಾಟ್ ಮತ್ತೆ ಓನ್ವೇ ಸಂಚಾರಕ್ಕೆ ಅವಕಾಶ
ಬಂಧನಕ್ಕೆ ತಡೆ ಕೋರಿ ಇತ್ತೀಚೆಗೆ ನೂಪುರ್ ಶರ್ಮಾ, ಸುಪ್ರೀಂ ಕೋರ್ಟ್ ಕದ ತಟ್ಟಿದ್ದರು. ಇದರ ವಿಚಾರಣೆಯನ್ನು ಮಂಗಳವಾರ ನಡೆಸಿದ ಸುಪ್ರೀಂ ಕೋರ್ಟ್, ಆಗಸ್ಟ್ 10ರವರೆಗೆ ನೂಪುರ್ ಶರ್ಮಾ ಅವರ ಬಂಧನ ಮಾಡುವಂತಿಲ್ಲ ಎಂದು ತೀರ್ಪು ನೀಡಿದೆ.
BREAKING NEWS : ಮಣ್ಣು ಕುಸಿತದಿಂದ ಬಂದ್ ಆಗಿದ್ದ, ಶಿರಾಡಿಘಾಟ್ ಮತ್ತೆ ಓನ್ವೇ ಸಂಚಾರಕ್ಕೆ ಅವಕಾಶ
ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಜೆಬಿ ಪರ್ದಿವಾಲಾ ಅವರ ಪೀಠವು ಎಫ್ಐಆರ್ಗಳನ್ನು ರದ್ದು ಮಾಡುವ ಅಥವಾ ಪರ್ಯಾಯವಾಗಿ ಎಲ್ಲಾ ಎಫ್ಐಆರ್ಗಳನ್ನು ದೆಹಲಿಗೆ ವರ್ಗಾಯಿಸುವಂತೆ ಶರ್ಮಾ ಅವರ ಮನವಿಯ ಮೇಲೆ ನೋಟಿಸ್ ಜಾರಿ ಮಾಡಿದೆ.