ಬೆಂಗಳೂರು : ಹೊಸ ವರ್ಷದಲ್ಲಿ ನಮ್ಮ ಮೆಟ್ರೋ ( Namma Metro) ದಾಖಲೆ ಬರೆದಿದ್ದು, ಡಿ.31ರಂದು ಒಂದೇ ದಿನ ಬೆಳಗ್ಗೆಯಿಂದ ರಾತ್ರಿವರೆಗೆ 6.50 ಲಕ್ಷ ಪ್ರಯಾಣಿಕರು ಸಂಚಾರ ಮಾಡಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿದೆ.
ಹೌದು, ಹೊಸ ವರ್ಷದ ಹಿಂದಿನ ಡಿ.31 ರಂದು ಬೆಳಗ್ಗೆಯಿಂದ ರಾತ್ರಿವರೆಗೆ 6.50 ಲಕ್ಷ ಪ್ರಯಾಣಿಕರು ಸಂಚಾರ ಮಾಡಿದ್ದಾರೆ. ಈ ಮೂಲಕ ಒಂದೇ ದಿನದಲ್ಲಿ ನಮ್ಮ ಬಿಎಂಆರ್ಸಿಎಲ್ (BMRCL) ಸಂಸ್ಥೆಗೆ ಬರೋಬ್ಬರಿ 1.70 ಕೋಟಿ ರೂ. ಆದಾಯ ಹರಿದು ಬಂದಿದೆ.
ಕೋವಿಡ್ ಹಿನ್ನೆಲೆ ಕಳೆದ ಎರಡು ವರ್ಷದಲ್ಲಿ ನಮ್ಮ ಮೆಟ್ರೋ ಭಾರಿ ಪ್ರಮಾಣದಲ್ಲಿ ನಷ್ಟವನ್ನು ಅನುಭವಿಸಿತ್ತು. ಕೋವಿಡ್ ಇಳಿಕೆಯಾಗಿ ಜನಜೀವನ ಸಹಜ ಸ್ಥಿತಿಗೆ ಮರಳಿದ ನಂತರ ನಮ್ಮ ಮೆಟ್ರೋದಲ್ಲಿ ಜನ ಸಂಚಾರ ಹೆಚ್ಚಳವಾಗಿದೆ.
ಮೆಟ್ರೋ ಸಂಚಾರ ವಿಸ್ತರಿಸಿದ್ದ ನಮ್ಮ ಮೆಟ್ರೋ
ನಗರದಲ್ಲಿ ಹೊಸ ವರ್ಷಾಚರಣೆಗೆ ಸಾರ್ವಜನಿಕರ ಅನುಕೂಲಕ್ಕಾಗಿ ನಮ್ಮ ಮೆಟ್ರೋ ಸಂಚಾರ ಸೇವೆಯನ್ನು ಮುಂಜಾನೆ 2 ಗಂಟೆಯವರೆಗೆ ವಿಸ್ತರಿಸಲಾಗಿತ್ತು ಹೊಸ ವರ್ಷದ ಆಚರಣೆಯ ( New Year Celebration 2023 ) ಸಂದರ್ಭದಲ್ಲಿ ಎಲ್ಲಾ ಮಾರ್ಗಗಳಲ್ಲಿ ಮೆಟ್ರೋ ರೈಲುಗಳ ಸೇವೆಯನ್ನು ದಿನಾಂಕ 31-12-2022ರ ರಾತ್ರಿಯಿಂದ ದಿನಾಂಕ 01-01-2023ರ ಮುಂಜಾನೆ 2 ಗಂಟೆಯವರೆಗೆ ವಿಸ್ತರಿಸಿರುವುದಾಗಿ ಬಿಎಂಟಿಸಿ ತಿಳಿಸಿತ್ತು. ಡಿಸೆಂಬರ್ 31 ರಾತ್ರಿ 15 ನಿಮಿಷಗಳಿಗೊಮ್ಮೆ ನಮ್ಮ ಮೆಟ್ರೋ ರೈಲುಗಳು ( Namma Metro Train ) ಸಂಚರಿಸಲಿದೆ. . ದಿನಾಂಕ 01-01-2023ರ ಮುಂಜಾನೆ ಟರ್ಮಿನಲ್ ನಿಲ್ದಾಣಗಳಿಂದ ಕೊನೆಯ ರೈಲುಗಳ ಸಂಚಾರ ಬೈಯಪ್ಪನಹಳ್ಲಿ-1.35ಗಂಟೆಗೆ, ಕೆಂಗೇರಿ-1.25, ನಾಗಸಂದ್ರ-1.30 ಹಾಗೂ ರೇಷ್ಮೆ ಸಂಸ್ಥೆಯಿಂದ 1.25 ಗಂಟೆಗೆ ಹೊರಡಲಿದೆ ಎಂದು ಬಿಎಂಟಿಸಿ ಪ್ರಕಟಣೆ ಹೊರಡಿಸಿತ್ತು.
ಭಾರತದ ಇಂಟರ್ನೆಟ್ ಉದ್ಯಮವು ಶೀಘ್ರದಲ್ಲೇ 5 ಟ್ರಿಲಿಯನ್ ಡಾಲರ್ಗೆ ಬೆಳೆಯಲಿದೆ: ವರದಿ
ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರಲಿದೆ -ಸಿಎಂ ಬಸವರಾಜ ಬೊಮ್ಮಾಯಿ ಭವಿಷ್ಯ
ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬರಲಿದೆ -ಸಿಎಂ ಬಸವರಾಜ ಬೊಮ್ಮಾಯಿ ಭವಿಷ್ಯ
ಭಾರತದ ಇಂಟರ್ನೆಟ್ ಉದ್ಯಮವು ಶೀಘ್ರದಲ್ಲೇ 5 ಟ್ರಿಲಿಯನ್ ಡಾಲರ್ಗೆ ಬೆಳೆಯಲಿದೆ: ವರದಿ