ವಿಜಯಪುರ: ಜ್ಞಾನಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ನಿಧನ ಹೊಂದಿ ನಾಲ್ಕು ದಿನ ಕಳೆದರೂ ಜ್ಞಾನಯೋಗಾಶ್ರಮಕ್ಕೆ ಬರುವ ಭಕ್ತರ ಸಂಖ್ಯೆ ಕಡಿಮೆಯಾಗುತ್ತಿಲ್ಲ.
ದಿನದಿಂದ ದಿನಕ್ಕೆ ಭಕ್ತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಇಂದು ಬನ ಹುಣ್ಣಿಮೆ ಹಿನ್ನೆಲೆ ಭಕ್ತರು ದರ್ಶನಕ್ಕಾಗಿ ಆಗಮಿಸುತ್ತಿದ್ದಾರೆ. ಸಿದ್ದೇಶ್ವರ ಶ್ರೀಗಳ ಅಂತ್ಯಕ್ರಿಯೆ ನಡೆದ ಸ್ಥಳವನ್ನಿ ಭಕ್ತರು ವೀಕ್ಷಿಸುತ್ತಿದ್ದಾರೆ. ಸಿದ್ದೇಶ್ವರ ಶ್ರೀಗಳು ಅಗಲಿ ನಾಲ್ಕು ದಿನಗಳಾದ್ರೂ ಭಕ್ತರ ಸಂಖ್ಯೆ ಕಡಿಮೆ ಆಗುತ್ತಿಲ್ಲ.ಇದೀಗ ಸಿದ್ದೇಶ್ವರ ಸ್ವಾಮೀಜಿ ಇಲ್ಲದೆ ಜ್ಞಾನಯೋಗಾಶ್ರಮ ನೀರವಮೌನ ಆವರಿಸಿದೆ.
BIGG NEWS: ಬಿಜೆಪಿ ಅಂದ್ರೆ ಬ್ರೋಕರ್ ಜನತಾ ಪಕ್ಷ ಎಂದ ಶಾಸಕ ಪ್ರಿಯಾಂಕ್ ಖರ್ಗೆ
ಅಲ್ಲಿಗೆ ಬಂದ ಭಕ್ತರು ಇಂದಿಗೂ ಸ್ವಾಮೀಜಿ ನೆನೆದು ಕಣ್ಣೀರು ಹಾಕಿ ಹೋಗುತ್ತಿದ್ದಾರೆ. ಜನವರಿ ೨ ರಂದು ಖ್ಯಾತ ಪ್ರವಚನಕಾರರು, ನಡೆದಾಡುವ ದೇವರಂದೆ ಇಡೀ ವಿಶ್ವದಾದ್ಯಂತ ಪ್ರಖ್ಯಾತಿಗೆ ಕಾರಣರಾದ ಜ್ಞಾನ ಯೋಗಾಶ್ರಮದ ಸಿದ್ದೇಶ್ವರ ಸ್ವಾಮೀಜಿ ವಿಧಿವಶರಾಗಿದ್ದರು. ಅಂತಿಮ ದರ್ಶನಕ್ಕೆ ಸಾವಿರಾರು ಭಕ್ತರು ನಾನಾ ಮೂಲೆಗಳಿಂದ ಆಗಮಿಸಿದ್ದರು.