ಬೆಂಗಳೂರು: ರಾಜ್ಯದ ಗ್ರಾಮೀಣ ಜನತೆಗೆ ಗುಡ್ ನ್ಯೂಸ್ ಎನ್ನುವಂತೆ ಇನ್ಮುಂದೆ ಗ್ರಾಮ ಪಂಚಾಯ್ತಿಯ ಬಾಪೂಜಿ ಸೇವಾ ಕೇಂದ್ರಗಳಲ್ಲೇ 11ಇ ಸೇರಿದಂತೆ ಹಲವಾರು ಭೂ ದಾಖಲೆಗಳು ಲಭ್ಯವಾಗಲಿವೆ.
ಭೂಮಾಪನ ಕಂದಾಯ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆಯ ಮೋಜಿನಿ ವ್ಯವಸ್ಥೆಯ ಅಡಿಯಲ್ಲಿನ ಸೇವೆಗಳನ್ನು ಗ್ರಾಮ ಪಂಚಾಯ್ತಿಗಳ ಬಾಪೂಜಿ ಸೇವಾ ಕೇಂದ್ರಗಳಿಗೂ ಸರ್ಕಾರ ವಿಸ್ತರಿಸಿರುವುದರಿಂದ, ಈಗ ಹಲವು ಭೂ ದಾಖಲೆಗಳು ಗ್ರಾಮ ಪಂಚಾಯ್ತಿ ಮಟ್ಟದಲ್ಲೇ ಜನತೆಗೆ ದೊರೆಯಲಿವೆ.
ಯಾವ ಭೂ ದಾಖಲೆಗಳು ಬಾಪೂಜಿ ಸೇವಾ ಕೇಂದ್ರದಲ್ಲಿ ಲಭ್ಯ?
- 11ಇ ನಕ್ಷೆ
- ಭೂ ಪರಿವರ್ತನೆಗಾಗಿ ಅರ್ಜಿ
- ತತ್ಕಾಲ್ ಪೋಡಿ
- ಹದ್ದು ಬಸ್ತು
ಯಾವ ಭೂ ದಾಖಲೆಗಳಿಗೆ ಎಷ್ಟು ಅರ್ಜಿ ಶುಲ್ಕ ನಿಗದಿ?
- 11ಇ ನಕ್ಷೆಯನ್ನು 2 ಎಕರೆವರೆಗೆ ಪಡೆಯೋದಕ್ಕೆ ರೂ.1,500 ಅರ್ಜಿ ಶುಲ್ಕ ನಿಗದಿ ಪಡಿಸಲಾಗಿದೆ. 2 ಎಕರೆಗಿಂತ ಹೆಚ್ಚಿದ್ದರೇ ಪ್ರತಿ ಎಕರೆಗೆ ರೂ.400 ಹೆಚ್ಚುವರಿ ಶುಲ್ಕ ಪಾವತಿಸಬೇಕು. ಅಲ್ಲದೇ ಗ್ರಾಮ ಪಂಚಾಯ್ತಿ ಸೇವಾ ಶುಲ್ಕ ರೂ.25 ಪಾವತಿಸಿದರೇ 11ಇ ನಕ್ಷೆ ದೊರೆಯಲಿದೆ.
- ಭೂ ಪರಿವರ್ತೆನೆಗಾಗಿ 2 ಎಕರೆವರೆಗೆ ರೂ.1500, ಅದಕ್ಕಿಂತ ಹೆಚ್ಚಿದ್ದರೇ ರೂ.400 ಪ್ರತಿ ಎಕರೆಗೆ ಹೆಚ್ಚುವರಿ ಶುಲ್ಕ ಜೊತೆಗೆ ಗ್ರಾಮ ಪಂಚಾಯ್ತಿ ಸೇವಾ ಶುಲ್ಕ ರೂ.25 ಪಾವತಿಸಬೇಕಿದೆ.
- ತತ್ಕಾಲ್ ಪೋಡಿಗೆ 2 ಎಕರೆಗೆವರೆಗೆ ರೂ.1500, ಅದಕ್ಕಿಂತ ಹೆಚ್ಚಿದ್ದರೇ ಪ್ರತಿ ಎಕರೆಗೆ ರೂ.400 ಜೊತೆಗೆ ಸೇವಾ ಶುಲ್ಕ ರೂ.25 ಪಾವತಿಸಿದರೇ ದೊರೆಯಲಿದೆ.
- ಹದ್ದು ಬಸ್ತುಗಾಗಿ 2 ಎಕರೆವರೆಗೆ ರೂ.1500, ಅದಕ್ಕಿಂತ ಹೆಚ್ಚಿನದಕ್ಕೆ ಪ್ರತಿ ಎಕರೆಗೆ ರೂ.300, ನೋಟೀಸ್ ಶುಲ್ಕ ರೂ.25 ಹಾಗೂ ಸೇವಾ ಶುಲ್ಕ ರೂ.25 ಪಾವತಿಸಿದರೇ ದೊರೆಯಲಿದೆ.
ವರದಿ: ವಸಂತ ಬಿ ಈಶ್ವರಗೆರೆ.., ಸಂಪಾದಕರು..
ರಾಜ್ಯದ `ಪಡಿತರ ಚೀಟಿದಾರರೇ’ ಗಮನಿಸಿ : ‘ರೇಷನ್ ಕಾರ್ಡ್’ನಲ್ಲಿ ಹೆಸರು ಸೇರ್ಪಡೆ, ತಿದ್ದುಪಡಿಗೆ ಮತ್ತೆ ಅವಕಾಶ.!
BREAKING : 15 ನಿಮಿಷಗಳ ಕಾಲ `ಲಿಫ್ಟ್’ನಲ್ಲಿ ಸಿಲುಕಿದ ಕೆ.ಹೆಚ್.ಮುನಿಯಪ್ಪ, MLC ಚಂದ್ರಪ್ಪ.!








