ದೆಹಲಿ: ನಿಮ್ಮ ಪಾಸ್ಪೋರ್ಟ್ ಅರ್ಜಿಗೆ ಪೊಲೀಸ್ ಕ್ಲಿಯರೆನ್ಸ್ ಪ್ರಮಾಣಪತ್ರವನ್ನು ಪಡೆಯುವುದು ಇನ್ನು ಬಹಳ ಸುಲಭ. ಸೆಪ್ಟೆಂಬರ್ 28 ರಿಂದ ಅಂದ್ರೆ, ಇಂದಿನಿಂದ ಪ್ರಾರಂಭವಾಗುವ ಪೋಸ್ಟ್ ಆಫೀಸ್ ಪಾಸ್ಪೋರ್ಟ್ ಸೇವಾ ಕೇಂದ್ರಗಳಲ್ಲಿ (POPSK) ಪೊಲೀಸ್ ಕ್ಲಿಯರೆನ್ಸ್ ಪ್ರಮಾಣಪತ್ರಗಳಿಗಾಗಿ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು.
ಪೋಸ್ಟ್ ಆಫೀಸ್ ಪಾಸ್ಪೋರ್ಟ್ ಸೇವಾ ಕೇಂದ್ರಗಳಿಂದ (POPSKs) ಆನ್ಲೈನ್ ಮೂಲಕ ಪೊಲೀಸ್ ಕ್ಲಿಯರೆನ್ಸ್ ಸರ್ಟಿಫಿಕೇಟ್ಗಳಿಗೆ (PCCs) ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತದೆ ಎಂದು ವಿದೇಶಾಂಗ ಸಚಿವಾಲಯದ (MEA) ಹೇಳಿಕೆ ತಿಳಿಸಿದೆ.
“28 ಸೆಪ್ಟೆಂಬರ್ 2022 ಬುಧವಾರದಿಂದ ಪ್ರಾರಂಭವಾಗುವ ಭಾರತದಾದ್ಯಂತ ಎಲ್ಲಾ ಆನ್ಲೈನ್ POPSK ಗಳಲ್ಲಿ PCC ಸೇವೆಗಳಿಗೆ ಅರ್ಜಿ ಸಲ್ಲಿಸುವ ಸೌಲಭ್ಯವನ್ನು ಸೇರಿಸಲು ಸಚಿವಾಲಯವು ನಿರ್ಧರಿಸಿದೆ. ಈ PCC ಅಪ್ಲಿಕೇಶನ್ ಸೌಲಭ್ಯವನ್ನು POPSK ಗಳಿಗೆ ವಿಸ್ತರಿಸುವಲ್ಲಿ ಸಚಿವಾಲಯವು ತೆಗೆದುಕೊಂಡ ಕ್ರಮವು ವಿದೇಶದಲ್ಲಿ ಉದ್ಯೋಗವನ್ನು ಬಯಸುವ ಭಾರತೀಯ ನಾಗರಿಕರಿಗೆ ಸಹಾಯ ಮಾಡುತ್ತದೆ. ಅಷ್ಟೇ ಅಲ್ಲದೇ, ಶಿಕ್ಷಣ, ದೀರ್ಘಾವಧಿಯ ವೀಸಾ, ವಲಸೆ ಇತ್ಯಾದಿಗಳಂತಹ ಇತರ PCC ಅವಶ್ಯಕತೆಗಳ ಬೇಡಿಕೆಯನ್ನು ಪೂರೈಸುತ್ತದೆ” ಎಂದು ಹೇಳಿಕೆ ತಿಳಿಸಿದೆ.
BREAKING NEWS: ಟಾಲಿವುಡ್ ಸೂಪರ್ ಸ್ಟಾರ್ ʻಮಹೇಶ್ ಬಾಬುʼಗೆ ಮಾತೃ ವಿಯೋಗ | Mahesh Babu’s Mother Passes Away
ʻOla S1 Proʼ ಖರೀದಿಸಿ 10,000 ರೂ. ರಿಯಾಯಿತಿ ಪಡೆಯಿರಿ!… ಅ. 5ರವರೆಗೆ ಈ ಆಫರ್ ಲಭ್ಯ
BIG NEWS: ಅ. 1 ರಿಂದ ಈ ಪಿಂಚಣಿ ಯೋಜನೆ ಎಲ್ಲರಿಗೂ ಅನ್ವಯಿಸುವುದಿಲ್ಲ… ಇಲ್ಲಿದೆ ಮಹತ್ವದ ಮಾಹಿತಿ | Pension Scheme