ರಾಮನಗರ: ಜಿಲ್ಲೆಯಲ್ಲಿ ನಟೋರಿಯಸ್ ರೌಡಿ ಶೀಟರ್ ಒಬ್ಬರಿಗೆ ಪೊಲೀಸರು ಕಾಲಿಗೆ ಗುಂಡೇಟು ನೀಡಿರೋ ಘಟನೆ ನಡೆದಿದೆ. ಈ ಮೂಲಕ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ ಆರೋಪಿಯ ಕಾಲಿಗೆ ಗುಂಡೇಟು ನೀಡಿದ್ದಾರೆ.
ರಾಮನಗರ ಜಿಲ್ಲೆಯ ಕಗ್ಗಲೀಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರೌಡಿ ಶೀಟರ್ ಸೈಕಲ್ ಗಿರಿ ಎಂಬಾತ ದರೋಡೆ ಪ್ರಕರಣದಲ್ಲಿ ಭಾಗಿಯಾಗಿದ್ದನು. ಇಂದು ಸ್ಥಳ ಮಹಜರಿಗೆ ಪೊಲೀಸರು ಆತನನ್ನು ಕರೆದೊಯ್ಯಲಾಗಿತ್ತು.
ರೌಡಿ ಶೀಟರ್ ಸೈಕಲ್ ಗಿರಿಯೊಂದಿಗೆ ಸ್ಥಳ ಮಹಜರು ನಡೆಸುತ್ತಿದ್ದಂತ ವೇಳೆಯಲ್ಲಿ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗೋದಕ್ಕೆ ಯತ್ನಿಸಲಾಗಿತ್ತು. ಈ ವೇಳೆಯಲ್ಲಿ ಆತ್ಮರಕ್ಷಣೆಗಾಗಿ ಕಗ್ಗಲಿಪುರ ಠಾಣೆಯ ಪಿಎಸ್ಐ ಲೋಕೇಶ್ ಅವರು ಎಡಗಾಲಿಗೆ ಗುಂಡೇಟು ನೀಡಿ ಬಂಧಿಸಿದ್ದಾರೆ.
ಕಾಲಿಗೆ ಪೊಲೀಸರಿಂದ ಗುಂಡೇಟು ಬಿದ್ದು ಗಾಯಗೊಂಡಿರುವಂತ ಸೈಕಲ್ ಗಿರಿಯನ್ನು ರಾಜರಾಜೇಶ್ವರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ಅಂದಹಾಗೇ ರೌಡಿ ಶೀಟರ್ ಸೈಕಲ್ ಗಿರಿ ವಿರುದ್ಧ ಕೊಲೆ ಹಾಗೂ ದರೋಡೆ ಪ್ರಕರಣದಲ್ಲಿ ದಾಖಲಾಗಿದೆ. ಈ ಪ್ರಕರಣದಲ್ಲಿ ಒಂದು ದಿನಗಳ ಹಿಂದೆ ಆತನನ್ನು ಕಗ್ಗಲೀಪುರ ಠಾಣೆಯ ಪೊಲೀಸರು ಬಂಧಿಸಿದ್ದರು.
Watch Video: ‘ಬರಗಾಲ’ದಲ್ಲೂ ಖುಲಾಯಿಸಿದ ‘ರೈತ’ನ ಅದೃಷ್ಠ: ‘ಬೇಸಿಗೆ’ಯಲ್ಲೂ ಬೋರಲ್ಲಿ 45 ಅಡಿಗೆ ‘2.5 ಇಂಚು’ ನೀರು