ಬೆಂಗಳೂರು: ನಗರದಲ್ಲಿ ಪೊಲೀಸರಿಗೆ ಬೇಕಿದ್ದಂತ ಕುಖ್ಯಾತ ರೌಡಿಯನ್ನು ಪೊಲೀಸರು ಎಡೆಮುರಿ ಕಟ್ಟಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಕುರಿತಂತೆ ಬೆಂಗಳೂರು ನಗರ ಪೊಲೀಸರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಬೆಂಗಳೂರು ನಗರ ದಕ್ಷಿಣ ವಿಭಾಗದ ಹನುಮಂತನಗರ ಪೊಲೀಸರು 2016 ರಿಂದಲೂ ನಿರಂತರವಾಗಿ ಕೊಲೆ ಪ್ರಯತ್ನ, ಹಲ್ಲೆ, ದರೋಡೆಗೆ ಸಿದ್ಧತೆ, ಸುಲಿಗೆ, ಸಾಕ್ಷಿಗಳಿಗೆ ಬೆದರಿಕೆ ಮುಂತಾದ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದ. ಠಾಣಾ ರೌಡಿಪಟ್ಟಿ ವ್ಯಕ್ತಿಯಾದ ಅಜಿತ್ @ ಕರಿಯಾ ಬಿನ್ (ಲೇಟ್) ರಾಜೇಶ್ ವಯಸ್ಸು 26 ವರ್ಷ, ಈತನ ರೌಡಿ ಚಟುವಟಿಕೆಗಳನ್ನು ನಿಯಂತ್ರಿಸುವ ಸಲುವಾಗಿ ಹನುಮಂತನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ರವರು ಕರ್ನಾಟಕ ಗೂಂಡಾ ಕಾಯಿದೆ ಅಡಿ ಪ್ರತಿಬಂಧಕ ಕಾಯಿದೆ ಅಡಿಯಲ್ಲಿ ಬಂಧನದಲ್ಲಿಡಲು ಪ್ರಸ್ತಾವನೆ ಸಲ್ಲಿಸಿದ್ದರು ಎಂದಿದ್ದಾರೆ.
ಈತನ ವಿರುದ್ಧ ಈವರೆಗೆ ಕೊಲೆ ಪ್ರಯತ್ನ, ಹಲ್ಲೆ, ಸುಲಿಗೆ, ದರೋಡೆಗೆ ಸಿದ್ಧತೆ, ಸೇರಿದಂತೆ 07 ಪ್ರಕರಣಗಳು ದಾಖಲಾಗಿರುತ್ತವೆ. ಈತನು ಜಾಮೀನು ಪಡೆದು ಬಿಡುಗಡೆ ಹೊಂದಿದ ನಂತರ, ವಿಚಾರಣೆಗೆ ಹಾಜರಾಗದೆ ತಲೆ ಮರೆಸಿಕೊಂಡಿದ್ದನು. 04 ಪ್ರಕರಣಗಳಲ್ಲಿ ನ್ಯಾಯಾಲಯಗಳಿಂದ ಈತನ ದಸ್ತಗಿರಿಗೆ (NBW) ವಾರಂಟ್ ಗಳನ್ನು ಹೊರಡಿಸಲಾಗಿತ್ತು ಎಂದು ಹೇಳಿದೆ.
ಹನುಮಂತನಗರ ಪೊಲೀಸ್ ಅಧಿಕಾರಿಗಳ ಪ್ರಸ್ತಾವನೆಯನ್ನು ಎಸಿಪಿ ವಿ.ವಿ.ಪುರ ಉಪ ವಿಭಾಗ ಹಾಗೂ ಡಿಸಿಪಿ ದಕ್ಷಿಣ ವಿಭಾಗ ರವರು ಬಂಧನ ಆದೇಶಕ್ಕೆ ಶಿಫಾರಸ್ಸು ಮಾಡಿದ್ದರು. ಪೊಲೀಸ್ ಆಯುಕ್ತರು, ದಿನಾಂಕ:09/01/2025 ರಂದು ಈತನನ್ನು ಕರ್ನಾಟಕ ಗೂಂಡಾ ಕಾಯಿದೆ ಅಡಿಯಲ್ಲಿ ಬಂಧನದಲ್ಲಿಡಲು ಆದೇಶ ಹೊರಡಿಸಿದ್ದರು. ಈ ಬಂಧನ ಆದೇಶವನ್ನು ಹನುಮಂತನಗರ ಪೊಲೀಸರು ದಿನಾಂಕ:10/01/2025 ರಂದು ಬಂಧಿತ ವ್ಯಕ್ತಿಗೆ ಜಾರಿಗೊಳಿಸಿ, ಕೇಂದ್ರ ಕಾರಾಗೃಹಕ್ಕೆ ಒಪ್ಪಿಸಿರುತ್ತಾರೆ ಎಂಬುದಾಗಿ ತಿಳಿಸಿದೆ.
Electricity Bill: 2 ಬಿಲಿಯನ್ ರೂಪಾಯಿ ವಿದ್ಯುತ್ ಬಿಲ್ ಕಂಡು ಆಘಾತಕ್ಕೊಳಗಾದ ವ್ಯಕ್ತಿ!