ಪುಣೆ: ಪುಣೆಯ ಜಿಲ್ಲಾ ನ್ಯಾಯಾಲಯವು ಮಹಿಳಾ ವಕೀಲರಿಗೆ ‘ತೆರೆದ ನ್ಯಾಯಾಲಯದಲ್ಲಿ ತಮ್ಮ ಕೂದಲನ್ನು ಸರಿ ಮಾಡಿಕೊಳ್ಳದಂತೆ’ ನೋಟಿಸ್ ನೀಡಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.
ಹಿರಿಯ ವಕೀಲೆ ಮತ್ತು ಹೋರಾಟಗಾರ್ತಿ ಇಂದಿರಾ ಜೈಸಿಂಗ್ ಅವರು ಟ್ವಿಟರ್ನಲ್ಲಿ ಹಂಚಿಕೊಂಡಿರುವ ಟ್ವಟರ್ ಪೋಸ್ಟ್ನಲ್ಲಿ “ಮಹಿಳಾ ವಕೀಲರು ತಮ್ಮ ಕೂದಲನ್ನು ತೆರೆದ ನ್ಯಾಯಾಲಯದಲ್ಲಿ ಸರಿ ಮಾಡಿಕೊಳ್ಳವುಉದು ಪದೇ ಪದೇ ಗಮನಕ್ಕೆ ಬಂದಿದೆ, ಇದು ನ್ಯಾಯಾಲಯದ ಕಾರ್ಯನಿರ್ವಹಣೆಗೆ ತೊಂದರೆ ಉಂಟುಮಾಡುತ್ತಿದೆ. ಆದ್ದರಿಂದ, ಅಂತಹ ಕೆಲಸದಿಂದ ದೂರವಿರಲು ಮಹಿಳಾ ವಕೀಲರಿಗೆ ಈ ಮೂಲಕ ಸೂಚನೆ ನೀಡಲಾಗಿದೆ” ಎಂದು ಅವರು ಕೋರ್ಟ್ನಲ್ಲಿ ಪೋಸ್ಟ್ನಲ್ಲಿ ಹಂಚಿಕೊಂಡಿದ್ದಾರೆ. ಈ ಬಗ್ಗೆ ಟೀಕೆಗಳು ಹೆಚ್ಚುತ್ತಿದ್ದಂತೆ, ನೋಟಿಸ್ ಅನ್ನು ಹಿಂತೆಗೆದುಕೊಳ್ಳಲಾಗಿದೆ. ನೋಟಿಸ್ ಕೇವಲ ನ್ಯಾಯಾಲಯದ ಸೌಜನ್ಯವನ್ನು ಕಾಪಾಡಿಕೊಳ್ಳಲು ಮಾತ್ರ ಉದ್ದೇಶಿಸಿದೆ ಮತ್ತು ಭಾವನೆಗಳನ್ನು ನೋಯಿಸುವುದಕ್ಕೆ ಎಲ್ಲ ಅಂತ ತಿಳಿಸಲಾಗಿದೆ ಎನ್ನಲಾಗಿದೆ.