ಬೆಂಗಳೂರು : ಲಂಚವಿಲ್ಲದೇ ಯಾವ ಕೆಲಸವೂ ನಡೆಯುವುದಿಲ್ಲ. ಬಿಜೆಪಿ ಸರ್ಕಾರ ಅಂದರೇನೇ ಲಂಚದ ಸರ್ಕಾರ. ಯಾವುದೇ ಕಾಮಗಾರಿ ಆದರೂ ನೀಡಬೇಕು 40% ಕಮಿಷನ್ ಯಾವುದೇ ಹುದ್ಧೆಗಾದರೂ ನೀಡಬೇಕು ಲಕ್ಷ-ಲಕ್ಷ ಲಂಚ ಬಿಜೆಪಿ ಸರ್ಕಾರ ಎಂದರೆ #40PercentSarkara ಎಂಬುದಾಗಿ ಕರ್ನಾಟಕ ಕಾಂಗ್ರೆಸ್ ( Karnataka Congress ) ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರಿದೆ.
ಲಂಚವಿಲ್ಲದೇ ಯಾವ ಕೆಲಸವೂ ನಡೆಯುವುದಿಲ್ಲ.
ಬಿಜೆಪಿ ಸರ್ಕಾರ ಅಂದರೇನೇ ಲಂಚದ ಸರ್ಕಾರ.ಯಾವುದೇ ಕಾಮಗಾರಿ ಆದರೂ ನೀಡಬೇಕು 40% ಕಮಿಷನ್
ಯಾವುದೇ ಹುದ್ಧೆಗಾದರೂ ನೀಡಬೇಕು ಲಕ್ಷ-ಲಕ್ಷ ಲಂಚಬಿಜೆಪಿ ಸರ್ಕಾರ ಎಂದರೆ #40PercentSarkara pic.twitter.com/FMSLeabT0l
— Karnataka Congress (@INCKarnataka) September 21, 2022
ಈ ಕುರಿತಂತೆ ಸರಣಿ ಟ್ವಿಟ್ ( Twitter ) ಮಾಡಿದ್ದು, ಭ್ರಷ್ಟಾಚಾರ ಹಾಗೂ ಬಿಜೆಪಿ ಒಂದೇ ನಾಣ್ಯದಲ್ಲಿರುವ ಎರಡು ಮುಖಗಳು, ಈ ಸರ್ಕಾರದಲ್ಲಿ ಹುಟ್ಟಿದರೂ ಲಂಚ, ಸತ್ತರೂ ಲಂಚ, ಉಸಿರಾಡಲೂ ಲಂಚ, ನಡೆದಾಡಲೂ ಲಂಚ ಕೊಡಬೇಕಾಗಿರುವ ಸ್ಥಿತಿ ಇದೆ. ವಿಧಾನಸೌಧದಿಂದ ಹಿಡಿದು ಗ್ರಾಮಪಂಚಾಯ್ತಿವರೆಗೂ ಲಂಚವೇ ಸರ್ವಸ್ವವಾಗಿದೆ. ಕರೆ ಮಾಡಿ – 8447704040 #40PercentSarkara ದ ಭ್ರಷ್ಟಾಚಾರ ಬಯಲು ಮಾಡಿ ಎಂದು ತಿಳಿಸಿದೆ.
ಭ್ರಷ್ಟಾಚಾರ ಹಾಗೂ ಬಿಜೆಪಿ ಒಂದೇ ನಾಣ್ಯದಲ್ಲಿರುವ ಎರಡು ಮುಖಗಳು,
ಈ ಸರ್ಕಾರದಲ್ಲಿ ಹುಟ್ಟಿದರೂ ಲಂಚ, ಸತ್ತರೂ ಲಂಚ, ಉಸಿರಾಡಲೂ ಲಂಚ, ನಡೆದಾಡಲೂ ಲಂಚ ಕೊಡಬೇಕಾಗಿರುವ ಸ್ಥಿತಿ ಇದೆ.
ವಿಧಾನಸೌಧದಿಂದ ಹಿಡಿದು ಗ್ರಾಮಪಂಚಾಯ್ತಿವರೆಗೂ ಲಂಚವೇ ಸರ್ವಸ್ವವಾಗಿದೆ.
ಕರೆ ಮಾಡಿ – 8447704040#40PercentSarkara ದ ಭ್ರಷ್ಟಾಚಾರ ಬಯಲು ಮಾಡಿ. pic.twitter.com/l7TRy9hrwG
— Karnataka Congress (@INCKarnataka) September 21, 2022
420ಗಳಿಗೆ ಅಧಿಕಾರ! 40% ಸರ್ಕಾರ! ಬಿಜೆಪಿ ಅಂದ್ರೆ ಭ್ರಷ್ಟಾಚಾರ! ಆಗಿಲ್ಲ ಅಚ್ಚೇದಿನಗಳ ಸಾಕಾರ! ಎಲ್ಲೆಲ್ಲೂ ಲಂಚವತಾರ! ಸರ್ಕಾರಿ ಹುದ್ದೆಗಳ ವ್ಯಾಪಾರ! ವಿಧಾನಸೌಧದಲ್ಲಿ ಅನಾಚಾರ! ಕಾಮಗಾರಿಗಳಲ್ಲಿ ಕಾಟಾಚಾರ! ಕೋಮುವಾದದ ವಾಮಾಚಾರ! ಸಿಡಿಯಲ್ಲಿ ಬಂತು ಅತ್ಯಾಚಾರ! ರಾಜ್ಯದ ನೆಮ್ಮದಿಗೆ ಸಂಚಕಾರ! ಜನರ ಬದುಕು ತತ್ವಾರ ಎಂದು ವಾಗ್ದಾಳಿ ನಡೆಸಿದೆ.
420ಗಳಿಗೆ ಅಧಿಕಾರ!
40% ಸರ್ಕಾರ!
ಬಿಜೆಪಿ ಅಂದ್ರೆ ಭ್ರಷ್ಟಾಚಾರ!
ಆಗಿಲ್ಲ ಅಚ್ಚೇದಿನಗಳ ಸಾಕಾರ!
ಎಲ್ಲೆಲ್ಲೂ ಲಂಚವತಾರ!
ಸರ್ಕಾರಿ ಹುದ್ದೆಗಳ ವ್ಯಾಪಾರ!
ವಿಧಾನಸೌಧದಲ್ಲಿ ಅನಾಚಾರ!
ಕಾಮಗಾರಿಗಳಲ್ಲಿ ಕಾಟಾಚಾರ!
ಕೋಮುವಾದದ ವಾಮಾಚಾರ!
ಸಿಡಿಯಲ್ಲಿ ಬಂತು ಅತ್ಯಾಚಾರ!
ರಾಜ್ಯದ ನೆಮ್ಮದಿಗೆ ಸಂಚಕಾರ!
ಜನರ ಬದುಕು ತತ್ವಾರ!#40PercentSarkara#PayCM pic.twitter.com/GJ0UB6IelJ— Karnataka Congress (@INCKarnataka) September 21, 2022