ಬೆಂಗಳೂರು: ಬಿಡದಿ ಯಾರ್ಡ್’ನಲ್ಲಿ ಸುರಕ್ಷತೆ ಮತ್ತು ಎಂಜಿನಿಯರಿಂಗ್ ಕಾಮಗಾರಿ ಕೈಗೊಳ್ಳಲಿರುವುದರಿಂದ, ಈ ಕೆಳಗಿನ ರೈಲು ಸೇವೆಗಳನ್ನು ರದ್ದುಗೊಳಿಸಲಾಗಿದೆ ಮತ್ತು ಭಾಗಶಃ ರದ್ದುಗೊಳಿಸಲಾಗಿದೆ.
ರದ್ದು: ಜುಲೈ 10, 2025 ರಂದು ರೈಲು ಸಂಖ್ಯೆ 56265 ಅರಸೀಕೆರೆ-ಮೈಸೂರು ಪ್ಯಾಸೆಂಜರ್, ರೈಲು ಸಂಖ್ಯೆ 06269 ಮೈಸೂರು – ಎಸ್ಎಂವಿಟಿ ಬೆಂಗಳೂರು ಪ್ಯಾಸೆಂಜರ್ ಸ್ಪೆಷಲ್, ಮತ್ತು ರೈಲು ಸಂಖ್ಯೆ 06270 ಎಸ್ಎಂವಿಟಿ ಬೆಂಗಳೂರು – ಮೈಸೂರು ಪ್ಯಾಸೆಂಜರ್ ಸ್ಪೆಷಲ್ ರೈಲುಗಳನ್ನು ರದ್ದುಗೊಳಿಸಲಾಗಿದೆ ಹಾಗೂ ರೈಲು ಸಂಖ್ಯೆ 56266 ಮೈಸೂರು – ಅರಸೀಕೆರೆ ಪ್ಯಾಸೆಂಜರ್ ರೈಲನ್ನು ಸಹ ಜುಲೈ 11ರಂದು ರದ್ದುಗೊಳಿಸಲಾಗಿದೆ.
ಭಾಗಶಃ ರದ್ದು: ಜುಲೈ 10, 2025 ರಂದು ಪ್ರಯಾಣ ಆರಂಭಿಸಲಿರುವ ರೈಲು ಸಂಖ್ಯೆ 66580 ಅಶೋಕಪುರಂ-ಕೆಎಸ್ಆರ್ ಬೆಂಗಳೂರು ಮೆಮು ರೈಲು ರಾಮನಗರಂ-ಕೆಎಸ್ಆರ್ ಬೆಂಗಳೂರು ನಡುವೆ ಭಾಗಶಃ ರದ್ದುಗೊಳಿಸಲಾಗಿದ್ದು, ರಾಮನಗರಂನಲ್ಲಿ ತನ್ನ ಪ್ರಯಾಣವನ್ನು ಕೊನೆಗೊಳಿಸಲಿದೆ.
ಜುಲೈ 11ರಂದು ಪ್ರಯಾಣ ಆರಂಭಿಸಲಿರುವ ರೈಲು ಸಂಖ್ಯೆ 66579 ಕೆಎಸ್ಆರ್ ಬೆಂಗಳೂರು- ಅಶೋಕಪುರಂ ಮೆಮು ರೈಲು ಕೆಎಸ್ಆರ್ ಬೆಂಗಳೂರು-ರಾಮನಗರಂ ನಡುವೆ ಭಾಗಶಃ ರದ್ದುಗೊಳಿಸಲಾಗಿದ್ದು, ಕೆಎಸ್ಆರ್ ಬೆಂಗಳೂರಿನ ಬದಲು ರಾಮನಗರಂನಿಂದ ತನ್ನ ನಿಗದಿತ ಸಮಯಕ್ಕೆ ಹೊರಡಲಿದೆ.
BREAKING: ಮೈಸೂರಲ್ಲಿ ಬೆಚ್ಚಿ ಬೀಳಿಸೋ ಘಟನೆ: ಹಾಡಹಗಲೇ ಮಹಿಳೆಗೆ ಚಾಕು ಇರಿದ ಯುವಕ
UPSC ಪೂರ್ವಭಾವಿ, ಮುಖ್ಯ ಪರೀಕ್ಷೆಗೆ ‘ಉಚಿತ ತರಬೇತಿ’ಗೆ ಅರ್ಜಿ ಆಹ್ವಾನ