ನವದೆಹಲಿ : ಇಂದು ಅಂದರೆ 19ನೇ ಡಿಸೆಂಬರ್ 2022 ಸೋಮವಾರ, 10ನೇ ಮತ್ತು 12ನೇ ಪರೀಕ್ಷೆಯ 2023ರ ಪರೀಕ್ಷಾ ವೇಳಾಪಟ್ಟಿಯನ್ನ ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (CBSE) ಬಿಡುಗಡೆ ಮಾಡಬಹುದು. ಈ ವರ್ಷ CBSE ಬೋರ್ಡ್ನ 10 ಅಥವಾ 12 ನೇ ಪರೀಕ್ಷೆಗೆ ಹಾಜರಾಗುತ್ತಿರುವ ಅಭ್ಯರ್ಥಿಗಳು ವೇಳಾಪಟ್ಟಿ ಬಿಡುಗಡೆಯಾದ ನಂತ್ರ ಮಂಡಳಿಯ ಅಧಿಕೃತ ವೆಬ್ಸೈಟ್ನಿಂದ ಡೌನ್ಲೋಡ್ ಮಾಡಲು ಸಾಧ್ಯವಾಗುತ್ತದೆ. ಅದ್ರಂತೆ, ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ನ ಅಧಿಕೃತ ವೆಬ್ಸೈಟ್ cbse.gov.in ಮೂಲಕ ವೇಳಾಪಟ್ಟಿ ಪರಿಶೀಲಿಸಬೋದು.
ಅಧಿಕೃತ ವೆಬ್ಸೈಟ್ ಮಾತ್ರ ನಂಬಿ.!
ಯಾವುದೇ ರೀತಿಯ ಅಪ್ಡೇಟ್ಗಾಗಿ ಅಥವಾ ಡೇಟ್ಶೀಟ್ ನೋಡಲು ವಿದ್ಯಾರ್ಥಿಗಳು CBSEಯ ಅಧಿಕೃತ ವೆಬ್ಸೈಟ್ಗೆ ಮಾತ್ರ ಭೇಟಿ ನೀಡುವಂತೆ ವಿನಂತಿಸಲಾಗಿದೆ. ಬೇರೆ ಯಾವುದೇ ಮಾಧ್ಯಮದಿಂದ ಬಂದ ಮಾಹಿತಿಯನ್ನ ನಂಬಬೇಡಿ. ಇತ್ತೀಚೆಗೆ, ಸಿಬಿಎಸ್ಇಯ ನಕಲಿ ವೆಬ್ಸೈಟ್ ಮೂಲಕ ಸಾಕಷ್ಟು ತಪ್ಪು ಮಾಹಿತಿಗಳನ್ನ ಪ್ರಸಾರ ಮಾಡಲಾಗುತ್ತಿದೆ. ವಿದ್ಯಾರ್ಥಿಗಳಿಂದ ಹಣ ವಸೂಲಿ ಮಾಡಲು ಯತ್ನಿಸುತ್ತಿದ್ದ ಇಂತಹ ನಕಲಿ ವೆಬ್ಸೈಟ್’ನ್ನ ಪಿಐಬಿ ಇತ್ತೀಚೆಗೆ ಪತ್ತೆ ಹಚ್ಚಿತ್ತು.
ನಕಲಿ ವೆಬ್ಸೈಟ್ ಗುರುತಿಸುವುದು ಹೇಗೆ.?
ಇತ್ತೀಚೆಗೆ ಅಭ್ಯರ್ಥಿಗಳಿಂದ ಹಣ ಕೇಳುತ್ತಿದ್ದ ವೆಬ್ಸೈಟ್ ಮುಖಪುಟದಲ್ಲಿ ನಾಲ್ಕು ಟ್ಯಾಬ್’ಗಳನ್ನ ಹೊಂದಿದೆ. ಮೂಲ CBSE ವೆಬ್ಸೈಟ್ನಲ್ಲಿ ಶೈಕ್ಷಣಿಕ ವೆಬ್ಸೈಟ್, ಪರೀಕ್ಷಾ ಸಂಗಮ, ಸಾರಸ್, ಫಲಿತಾಂಶಗಳು ಮತ್ತು ಮುಖ್ಯ ವೆಬ್ಸೈಟ್ನಲ್ಲಿ ಐದು ಟ್ಯಾಬ್ಗಳಿವೆ. ನಕಲಿ ವೆಬ್ಸೈಟ್ನಲ್ಲಿ ಮೊದಲು ಅಡ್ಮಿಟ್ ಕಾರ್ಡ್ ಪಾವತಿಯನ್ನ ನೀಡಲಾಗಿದೆ. ಅದನ್ನ ಗುರುತಿಸಿ ಮತ್ತು ಅದರಿಂದ ದೂರವಿರಿ.
ಸಂಭವನೀಯ ದಿನಾಂಕ ಯಾವುದು.!
ಮಂಡಳಿಯು ಪರೀಕ್ಷೆಯ ನಿಖರವಾದ ದಿನಾಂಕವನ್ನ ಇನ್ನೂ ಬಿಡುಗಡೆ ಮಾಡಿಲ್ಲವಾದರೂ, CBSE 10 ಮತ್ತು 12 ನೇ ಪರೀಕ್ಷೆಗಳು 16 ಮತ್ತು 15 ಫೆಬ್ರವರಿ 2023 ರಿಂದ ಪ್ರಾರಂಭವಾಗಬಹುದು ಎಂದು ನಿರೀಕ್ಷಿಸಲಾಗಿದೆ. ಡೇಟ್ಶೀಟ್ ಬಿಡುಗಡೆಯಾದ ನಂತರವೇ ಈ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಲಿದೆ. ವಿಷಯವಾರು ವೇಳಾಪಟ್ಟಿ ಇಂದು ಬಿಡುಗಡೆಯಾಗಲಿದೆ.
ಸಾಮರ್ಥ್ಯ ಆಧಾರಿತ ಪ್ರಶ್ನೆಗಳು.!
ಈ ಬಾರಿ ಬೋರ್ಡ್ ಪರೀಕ್ಷೆಗಳಲ್ಲಿ ಹೆಚ್ಚಿನ ಸಂಖ್ಯೆಯ ಸಾಮರ್ಥ್ಯ ಆಧಾರಿತ ಪ್ರಶ್ನೆಗಳು ಬರುತ್ತವೆ. ಶಿಕ್ಷಣ ರಾಜ್ಯ ಸಚಿವರ ಪ್ರಕಾರ, CBSE 10 ನೇ ತರಗತಿಯಲ್ಲಿ ಕನಿಷ್ಠ 40 ಶೇಕಡಾ ಅಂಕಗಳು ಮತ್ತು CBSE 12 ನೇ ಪರೀಕ್ಷೆಯಲ್ಲಿ ಕನಿಷ್ಠ 30 ಶೇಕಡಾ ಅಂಕಗಳು ಸಾಮರ್ಥ್ಯ ಆಧಾರಿತವಾಗಿರುತ್ತದೆ. ಸಾಮರ್ಥ್ಯ ಆಧಾರಿತ ಪ್ರಶ್ನೆಗಳು ವಸ್ತುನಿಷ್ಠ ಪ್ರಕಾರ, ರಚನಾತ್ಮಕ ಪ್ರತಿಕ್ರಿಯೆ ಪ್ರಕಾರ, ವಾದ ಮತ್ತು ತಾರ್ಕಿಕ ಮತ್ತು ಪ್ರಕರಣ ಆಧಾರಿತ ಪ್ರಶ್ನೆಗಳಂತಹ ಬಹು ಸ್ವರೂಪಗಳಲ್ಲಿರುತ್ತವೆ ಎಂದು ಅವ್ರು ಹೇಳಿದರು.
BIGG NEWS : ದೆಹಲಿಯಲ್ಲಿ ಅನುಮಾನಾಸ್ಪದ ಬ್ಯಾಗ್ ಪತ್ತೆ : ಆತಂಕ ಸೃಷ್ಟಿ
BIGG NEWS: ಕರ್ನಾಟಕ – ಮಹಾರಾಷ್ಟ್ರ ಗಡಿ ವಿಚಾರದಲ್ಲಿ ಈಗ ಯಾವುದೇ ರಾಜಕೀಯ ಮಾಡಬಾರದು; ಏಕನಾಥ್ ಶಿಂಧೆ