ದಾವಣಗೆರೆ: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ 2023-24ನೇ ಶೈಕ್ಷಣಿಕ ವರ್ಷದಲ್ಲಿ ಪ್ರಥಮ ವರ್ಷದ ಬಿ.ಎ, ಬಿ.ಕಾಂ., ಬಿ.ಎಎಸ್ಸಿ, ಬಿ.ಲಿಬ್, ಐ.ಎಸ್‍ಸ್ಸಿ, ಬಿ.ಸಿ.ಎ, ಬಿ.ಬಿ.ಎ, ಬಿ.ಎಸ್‍ಡಬ್ಲು, ಎಂ.ಎ, ಎಂ,ಕಾಂ., ಎಂ.ಸಿ.ಜೆ., ಎಂ.ಬಿ.ಎ., ಎಂ.ಎಸ್ಸಿ., ಎಂ.ಸಿ.ಎ., ಎಂ.ಎಸ್.ಡಬ್ಲು, ಮತ್ತು ಪಿಜಿ ಡಿಪ್ಲೋಮಾ ಸರ್ಟಿಫಿಕೇಟ್ ಕೋರ್ಸ್‍ಗಳಿಗೆ ಪ್ರವೇಶ ಪ್ರಾರಂಭವಾಗಿರುತ್ತದೆ. ಹಾಗೂ ಭೌತಿಕ ಮತ್ತು ದೂರಶಿಕ್ಷಣ ಎರಡು ಶೈಕ್ಷಣಿಕ ಕೋರ್ಸುಗಳನ್ನು ಏಕಕಾಲದಲ್ಲಿ ಓದಲು ಅವಕಾಶವಿರುತ್ತದೆ.
ಬಿ.ಪಿ.ಎಲ್. ಕಾರ್ಡ್ ಹೊಂದಿರುವ ಮಹಿಳಾ ವಿದ್ಯಾರ್ಥಿನಿಯರಿಗೆ, ರಕ್ಷಣಾ ಇಲಾಖೆ ಹಾಗೂ ಮಾಜಿ ಸೈನಿಕ ವಿದ್ಯಾರ್ಥಿಗಳಿಗೆ ಮತ್ತು ಆಟೋ ಕ್ಯಾಬ್ ಚಾಲಕರು ಮತ್ತು ಅವರ ಮಕ್ಕಳಿಗೆ ಬೋಧನಾ ಶುಲ್ಕದಲ್ಲಿ ರಿಯಾಯಿತಿ ನೀಡಲಾಗುವುದು. ಅಲ್ಲದೇ ಕೋವಿಡ್-19 ನಿಂದ ಮೃತಪಟ್ಟವರ ಮಕ್ಕಳಿಗೆ, ತೃತೀಯ ಲಿಂಗಿಗಳಿಗೆ, ದೃಷ್ಠಿಹೀನ ವಿದ್ಯಾರ್ಥಿಗಳಿಗೆ ಪೂರ್ಣ ಶುಲ್ಕ ವಿನಾಯಿತಿ ಇರುತ್ತದೆ. ಹಾಗೂ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಎಲ್ಲಾ ರಜಾದಿನಗಳಂದು ಕಚೇರಿಯು ಎಂದಿನಂತೆ ಕಾರ್ಯನಿರ್ವಹಿಸುತ್ತದೆ.
ಅಸಕ್ತ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳುಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ವಿಶ್ವವಿದ್ಯಾನಿಲಯದ ಅಧಿಕೃತ ವೆಬ್ಸೈಟ್ www.ksoumysuru.ac.in ಮೂಲಕ ಪರಿಶೀಲಿಸಿವುದು ಅಥವಾ ಖುದ್ದಾಗಿ ಕ.ರಾ.ಮು.ವಿ. ಪ್ರಾದೇಶಿಕ ಕೇಂದ್ರ, ಶ್ರೀ ಜೆ.ಹೆಚ್.ಪಟೇಲ್ ಬಡಾವಣೆ, ಶಾಮನೂರು ಹಿಂಭಾಗ, ನಾಗನೂರು ರಸ್ತೆಯಲ್ಲಿರುವ ಕಚೇರಿಯನ್ನು ಸಂಪರ್ಕಿಸುವುದು ಎಂದು ಪ್ರಾದೇಶಿಕ ನಿರ್ದೇಶಕರಾದ ಡಾ.ವಿಜಯ್ ಪ್ರಕಾಶ್ ತಿಳಿಸಿದ್ದಾರೆ.
ಸಾರ್ವಜನಿಕರೇ ಎಚ್ಚರ.! ‘ನೀತಿ ಸಂಹಿತೆ’ ವೇಳೆ ಈ ಎಲ್ಲವೂ ನಿಷೇಧ, ಉಲ್ಲಂಘಿಸಿದ್ರೆ ‘ಕೇಸ್ ಫಿಕ್ಸ್’