ಬೆಂಗಳೂರು : ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) 2022 ನೇ ಸಾಲಿನ ಸಿಇಟಿ (CET) ವಿದ್ಯಾರ್ಥಿಗಳ ದಾಖಲಾತಿ ಪರಿಶೀಲನೆಗೆ ಮತ್ತೊಂದು ಅವಕಾಶ ನೀಡಿದ್ದು, ಸೆ. 12 ಮತ್ತು 13 ರಂದು ಸಂಬಂಧಪಟ್ಟ ಬಿಇಒ ಕಚೇರಿಗಳಲ್ಲಿ ಸರಿಪಡಿಸಿಕೊಳ್ಳಬಹುದಾಗಿದೆ.
ಸಿಇಟಿ ಮೀಸಲಾತಿ ಪಡೆಯುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿರುವ ಪ್ರಮಾಣ ಪತ್ರಗಳನ್ನು ಸಂಬಂಧಪಟ್ಟ ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ದೃಢೀಕರಿಸಿಕೊಳ್ಳಬೇಕು. ಬಿಇಒ ಕಚೇರಿಗಳ ಬಳಿ ಹೋಗಿ ವ್ಯಾಸಂಗ ಪ್ರಮಾಣ ಪತ್ರ, ಕನ್ನಡ ಮಾಧ್ಯಮ, ಗ್ರಾಮೀಣ ಅಭ್ಯರ್ಥಿಯ ಪ್ರಮಾಣ ಪತ್ರವನ್ನು ಪರಿಶೀಲನೆಗೆ ಒಳಪಡಿಸಬೇಕು. ನಂತರ ಬಿಇಒ ಇದನ್ನು ದೃಢೀಕರಿಸಿ ಕೆಇಎಗೆ ಅಪ್ ಲೋಡ್ ಮಾಡಲಿದ್ದಾರೆ.
BREAKING NEWS : ಚಿಕ್ಕಬಳ್ಳಾಪುರದ ಶ್ರೀನಿವಾಸಸಾಗರ ಡ್ಯಾಂ ಬಳಿ ಘೋರ ದುರಂತ : ವಿದ್ಯಾರ್ಥಿ ಸೇರಿ ಇಬ್ಬರು ನೀರುಪಾಲು