ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಕರೆಯಲಾಗಿದ್ದಂತ ಗ್ರೂಪ್ ಸಿ ಹಾಗೂ 50 ಸಹಾಯಕ ಎಂಜಿನಿಯರ್ ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಕೆ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ.
ಈ ಸಂಬಂಧ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಲ್ಲಿನ 50 ಸಹಾಯಕ ಎಂಜಿನಿಯರ್ ಮತ್ತು ಗ್ರೂಪ್-ಸಿ 14 ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಅವಧಿ ವಿಸ್ತರಣೆ ಮಾಡಲಾಗಿದೆ ಎಂದು ತಿಳಿಸಿದೆ.
ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಲ್ಲಿನ 50 ಸಹಾಯಕ ಎಂಜಿನಿಯರ್ & 15 'ಸಿ' ಗ್ರೂಪ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ನಿಗದಿಪಡಿಸಿದ್ದ ದಿನಾಂಕವನ್ನು ಸಾರ್ವಜನಿಕರ ಮನವಿ ಮೇರೆಗೆ ಮಾ 21ರವರಗೆ ವಿಸ್ತರಿಸಲಾಗಿದೆ. ಶುಲ್ಕ ಪಾವತಿಗೆ ಮಾ.22 ಕೊನೆ ದಿನ.@CMofKarnataka @drmcsudhakar pic.twitter.com/QvVgcrjSWx
— KEA (@KEA_karnataka) March 14, 2024
ದಿನಾಂಕ 05-02-2024ರಂದು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ದಿನಾಂಕ 10-02-2024ರಿಂದ 10-03-2024ರವರೆಗೆ ಅವಕಾಶ ನೀಡಲಾಗಿತ್ತು. ಆದರೇ ಕೆಲವು ಅಭ್ಯರ್ಥಿಗಳು ಪ್ರಾಧಿಕಾರಕ್ಕೆ ಮನವಿ ಸಲ್ಲಿಸಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ದಿನಾಂಕ ವಿಸ್ತರಣೆ ಕೋರಿದ್ದರು ಎಂದಿದೆ.
ಈ ಹಿನ್ನಲೆಯಲ್ಲಿ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಕೆಯನ್ನು ದಿನಾಂಕ 11-03-2024ರಿಂದ 21-03-2024ರವರೆಗೆ ಅವಕಾಶ ನೀಡಲಾಗಿದೆ. ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ 22-03-2024 ಕೊನೆಯ ದಿನವಾಗಿದೆ ಎಂದು ತಿಳಿಸಿದೆ.
‘ಸ್ವ-ಉದ್ಯೋಗಾಕಾಂಕ್ಷಿ’ಗಳ ಗಮನಕ್ಕೆ: ಉಚಿತ ‘ಟಿವಿ, ಎಲೆಕ್ಟ್ರಾನಿಕ್ಸ್ ವಸ್ತು’ಗಳ ರಿಪೇರಿ ತರಬೇತಿಗೆ ಅರ್ಜಿ ಆಹ್ವಾನ
BREAKING : ಭೂಪಾಲ್ ನ ‘ಟೆಂಟ್ ಹೌಸ್’ ಗೋದಾಮಿನಲ್ಲಿ ‘ಸಿಲಿಂಡರ್’ ಸ್ಫೋಟದಿಂದ ಭಾರಿ ಅಗ್ನಿ ಅವಘಡ